Advertisement

ತಮಿಳುನಾಡು: ಶ್ರೀರಂಗಂ ದೇವಸ್ಥಾನದ ಗೋಪುರದ ಭಾಗ ಕುಸಿತ… ಭಕ್ತರಲ್ಲಿ ಹುಟ್ಟಿದ ಆತಂಕ

04:28 PM Aug 05, 2023 | Team Udayavani |

ತಮಿಳುನಾಡು: ಇತಿಹಾಸ ಪ್ರಸಿದ್ಧ ಶ್ರೀರಂಗಂ ರಂಗನಾಥ ದೇವಸ್ಥಾನದ ಪ್ರವೇಶ ದ್ವಾರದ ಗೋಪುರದ ಒಂದು ಭಾಗ ಕುಸಿದು ಬಿದ್ದಿರುವ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.

Advertisement

ಗೋಪುರದ ಭಾಗ ಕುಸಿದಿರುವುದರಿಂದ ಭಕ್ತರು ಭಯಭೀತರಾಗಿದ್ದಾರೆ. ಶುಕ್ರನ ಸ್ಥಾನವಾದ ಶ್ರೀರಂಗಂನ ಗೋಪುರದ ಗೋಡೆ ಕುಸಿದಿರುವುದರಿಂದ ಯಾರಿಗಾದರೂ ತೊಂದರೆಯಾಗಬಹುದು ಎಂಬ ಭಯ ಭಕ್ತರಲ್ಲಿದೆ.

ವಿಶ್ವ ವೈಕುಂಡಂ ಎಂದು ಖ್ಯಾತಿ ಪಡೆದಿರುವ ತಿರುಚ್ಚಿ ಶ್ರೀರಂಗಂ ರಂಗನಾಥ ದೇವಸ್ಥಾನವು ಪಶ್ಚಿಮ ರಾಜಗೋಪುರ ಸೇರಿದಂತೆ 21 ಗೋಪುರಗಳನ್ನು ಹೊಂದಿದೆ, ಇದು ಏಷ್ಯಾದ ಅತ್ಯಂತ ಎತ್ತರದ ಗೋಪುರ ಎಂದು ಪರಿಗಣಿಸಲ್ಪಟ್ಟಿದೆ. ಇವುಗಳಲ್ಲಿ ಪೂರ್ವ ದ್ವಾರದ ಪ್ರವೇಶ ಗೋಪುರದ ಮೊದಲ ಹಂತ ಮತ್ತು ಎರಡನೇ ಹಂತದ ಗೋಪುರಗಳು ಬಿರುಕು ಬಿಟ್ಟಿದ್ದು ಅಪಾಯದ ಅಂಚಿನಲ್ಲಿತ್ತು ಇದನ್ನು ದೇವಸ್ಥಾನ ಆಡಳಿತ ಮಂಡಳಿ ದುರಸ್ತಿ ನಡೆಸುವ ಕಾರ್ಯದಲ್ಲಿತ್ತು ಅದಕ್ಕೆಂದು ಬಿರುಕು ಬಿಟ್ಟಿದ್ದ ಜಾಗದಲ್ಲಿ ಹಲಗೆಗಳನ್ನು ಕಟ್ಟಿ ಕುಸಿಯಾದ ರೀತಿಯಲ್ಲಿ ಕಟ್ಟಲಾಗಿತ್ತು ಆದರೆ ಶುಕ್ರವಾರ ರಾತ್ರಿ ಈ ಭಾಗ ಕುಸಿದು ಬಿದ್ದಿದೆ. ಅದೃಷ್ಟವಶಾತ್ ರಾತ್ರಿ ಘಟನೆ ನಡೆದಿರುವುದರಿಂದ ಸಂಭವನೀಯ ಅವಘಡ ತಪ್ಪಿದಂತಾಗಿದೆ.

ಬಿರುಕು ಬಿಟ್ಟ ದಿನದಿಂದ ಈ ಭಾಗದಲ್ಲಿ ಭಕ್ತರು ಬರಲು ಭಯಪಡುತಿದ್ದರು ಆದರೆ ದೇವಸ್ಥಾನದ ಆಡಳಿತ ಮಂಡಳಿಯವರು ಯಾವುದೇ ತುರ್ತು ಕ್ರಮ ಕೈಗೊಂಡದೆ ಇರುವುದರಿಂದ ಈ ಅವಘಡ ಸಂಭವಿಸಿದೆ ಎಂದು ಅಲ್ಲಿನ ಸ್ಥಳೀಯರು ಹೇಳಿದ್ದಾರೆ.

ಈ ದೇವಾಲಯವು 5000 ವರ್ಷಗಳಿಗಿಂತಲೂ ಹಳೆಯದಾಗಿದೆ ಮತ್ತು ಹಲವಾರು ವಿಶೇಷತೆಗಳನ್ನು ಹೊಂದಿದೆ. ಈ ದೇವಾಲಯವನ್ನು ಚೋಳರು, ಪಾಂಡ್ಯರು, ಹೊಯ್ಸಳರು, ವಿಜಯನಗರ ಚಕ್ರವರ್ತಿಗಳಂತಹ ಅನೇಕ ರಾಜ ಮನೆತನಗಳು ದುರಸ್ತಿ ಕಾರ್ಯಗಳನ್ನು ನಡೆಸಿದ್ದಾರೆ. ಈ ರಂಗನಾಥ ದೇವಾಲಯವನ್ನು 14 ನೇ ಶತಮಾನದಲ್ಲಿ ದೆಹಲಿ ಸುಲ್ತಾನರು ಲೂಟಿ ಮಾಡಿದರು ಎನ್ನಲಾಗಿದೆ.

Advertisement

ಇದನ್ನೂ ಓದಿ: Uttarakhand ದೇವಸ್ಥಾನದಲ್ಲಿ ಪ್ರಧಾನಿ ಮೋದಿ – ಯುಪಿ ಸಿಎಂ ಸಹೋದರಿಯರ ಭೇಟಿ

Advertisement

Udayavani is now on Telegram. Click here to join our channel and stay updated with the latest news.

Next