Advertisement

ದತ್ತು ಬೇಡಿಕೆ ಅರ್ಜಿ ಸ್ಥಿತಿಗತಿ ತಿಳಿಯಲು ಪೋರ್ಟಲ್‌

07:40 AM Oct 23, 2017 | Harsha Rao |

ಹೊಸದಿಲ್ಲಿ: ಅನಿವಾಸಿ ಭಾರತೀಯರು ಮಕ್ಕಳನ್ನು ದತ್ತು ಪಡೆಯುವ ಅರ್ಜಿಯ ಸ್ಥಿತಿಗತಿ ತಿಳಿಯುವ ಪ್ರಕ್ರಿಯೆಯನ್ನು ಸರಳಗೊಳಿಸಲು ನಿರ್ಧರಿಸಿರುವ ದತ್ತು ನಿಯಂತ್ರಣಾ ಮಂಡಳಿ ಸಿಎಆರ್‌ಎ, ಒಂದು ಆನ್‌ಲೈನ್‌ ತಾಣ ಪರಿಚಯಿಸಲು ನಿರ್ಧರಿಸಿದೆ. ಈ ಹಿಂದೆ ತಮ್ಮ ದೇಶದ ದೃಢೀಕೃತ ಏಜೆನ್ಸಿ ನೀಡುವ ಮಾಹಿತಿಯನ್ನೇ ಅವಲಂಬಿಸಬೇಕಾಗಿತ್ತು. ಆದರೆ, ಇನ್ನು ದತ್ತು ಪಡೆಯಲಿಚ್ಛಿಸುವ ಅನಿವಾಸಿ ಭಾರತೀಯರು ಮತ್ತು ವಿದೇಶಿಗರಿಗೆ ನೆರವಾಗಲಿದೆ.

Advertisement

ದೇಶದೊಳಗಿನ ನಾಗರಿಕರು ಸಿಎಆರ್‌ಎ ವೆಬ್‌ಸೈಟ್‌ಗೆ ನೇರವಾಗಿ ಲಾಗಿನ್‌ ಆಗಿ ದತ್ತು ಪಡೆಯುವುದಕ್ಕೆ ಅರ್ಜಿ ಸಲ್ಲಿಸಬಹುದು. ಆದರೆ ವಿದೇಶಿಯರು ಅಥವಾ ಅನಿವಾಸಿ ಭಾರತೀಯರು ಈ ಹಿಂದಿನಂತೆಯೇ ದೃಢೀಕೃತ ವಿದೇಶಿ ದತ್ತಕ ಏಜೆನ್ಸಿಯನ್ನು ಸಂಪರ್ಕಿಸಬೇಕು. ಈ ಹೊಸ ಪೋರ್ಟಲ್‌ ಪರಿಚಯಿಸಿದ ನಂತರ ನೇರವಾಗಿ ಅರ್ಜಿಯ ಸ್ಥಿತಿಗತಿ ತಿಳಿಯಬಹುದಾಗಿದೆ. ಸಾಮಾನ್ಯವಾಗಿ ವಿದೇಶಿ ದತ್ತಕ ಏಜೆನ್ಸಿಯು ಮಾಹಿತಿ ನೀಡಲು ಸಾಧ್ಯವಾಗದೇ ಇದ್ದಾಗ, ಸಂಭಾವ್ಯ ಪಾಲಕರಿಗೆ ನಿರಾಸೆಯಾಗುತ್ತಿತ್ತು. ಇದನ್ನು ತಪ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next