Advertisement

Porsche case: ಲಂಚ ಪಡೆಯುತ್ತಿದ್ದ ಆಸ್ಪತ್ರೆ ಸಿಬಂದಿ ವೀಡಿಯೋ ಲಭ್ಯ

12:52 AM Jun 15, 2024 | Team Udayavani |

ಪುಣೆ: ಪೋರ್ಶ್‌ ಅಪಘಾತ ಪ್ರಕರಣದಲ್ಲಿ ಅಪ್ರಾಪ್ತನ ರಕ್ತದ ಮಾದರಿ ಬದಲು ಮಾಡಿದ ಆರೋಪಕ್ಕೆ ಗುರಿಯಾಗಿರುವ ಆಸ್ಪತ್ರೆ ಸಿಬಂದಿ ಲಂಚ ಪಡೆದಿದ್ದಾರೆ ಎಂದು ಆರೋಪಿಸಲಾಗಿತ್ತು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ವೀಡಿಯೋ ಲಭ್ಯವಾಗಿದೆ. ಮಧ್ಯವರ್ತಿ ಅಶ³ಕ್‌ ಮಕಂದರ್‌ ಆಸ್ಪತ್ರೆ ಸಿಬಂದಿ ಅತುಲ್‌ ಘಟ್ಕಾಂಬ್ಳೆ ಅವರಿಗೆ ಲಂಚ ನೀಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಬಾಲ ನ್ಯಾಯ ಮಂಡಳಿ ಆವರಣದಲ್ಲಿ 3 ಲಕ್ಷ ರೂ. ಲಂಚ ನೀಡಲಾಗಿದೆ ಎಂದು ವರದಿಯಾಗಿದೆ. ರಕ್ತಮಾದರಿ ಬದಲು ಮಾಡಿದ ಆರೋಪದಲ್ಲಿ ಈಗಾಗಲೇ ಆಸ್ಪತ್ರೆಯ ವಿಧಿವಿಜ್ಞಾನ ವಿಭಾಗದ ಮುಖ್ಯಸ್ಥರಾಗಿದ್ದ ಡಾ| ಅಜಯ್‌ ತವಾರೆ, ಅಪಘಾತ ವೈದ್ಯಕೀಯ ಅಧಿಕಾರಿ ಡಾ| ಶ್ರೀಹರಿ ಹಾಲೂ°ರ್‌ ಜತೆಗೆ ಅತುಲ್‌ ಘಟ್ಕಾಂಬ್ಳೆ ಅವರನ್ನೂ ಬಂಧಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next