Advertisement

Video: ಮೀಟಿಂಗ್ ವೇಳೆ ಅಧಿಕಾರಿಗಳ ಮೇಲೆ ಕೋಪ… ಕಡತವನ್ನು ಬಿಸಾಡಿ ಆಕ್ರೋಶ ಹೊರ ಹಾಕಿದ ಮೇಯರ್

11:24 AM Jun 14, 2024 | Team Udayavani |

ಕಾನ್ಪುರ: ಕಾನ್ಪುರದಲ್ಲಿ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳ ಸಭೆಯೊಂದರಲ್ಲಿ ಕಾನ್ಪುರದ ಮೇಯರ್ ಪ್ರಮೀಳಾ ಪಾಂಡೆ ಅವರು ಕೋಪಗೊಂಡು ಕಡತವನ್ನು ಎತ್ತಿ ಬಿಸಾಡಿ ಆಕ್ರೋಶ ಹೊರಹಾಕಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

Advertisement

ಮೇಯರ್ ಪ್ರಮೀಳಾ ಪಾಂಡೆ ಅವರು ಮಹಾನಗರ ಪಾಲಿಕೆ ಮತ್ತು ಜಲ ನಿಗಮದ ಎಲ್ಲಾ ಅಧಿಕಾರಿಗಳೊಂದಿಗೆ ನಿರಂತರವಾಗಿ ಪರಿಶೀಲನಾ ಸಭೆಗಳನ್ನು ನಡೆಸುತ್ತಿದ್ದಾರೆ ಜೊತೆಗೆ ಸ್ವಚ್ಛತೆಯ ವ್ಯವಸ್ಥೆಗಳ ಬಗ್ಗೆ ನಿರ್ದೇಶನಗಳನ್ನು ನೀಡುತ್ತಿದ್ದಾರೆ. ಅದರಂತೆ ಬುಧವಾರ ಮಹಾನಗರ ಪಾಲಿಕೆಯ ಪ್ರಧಾನ ಕಚೇರಿಯಲ್ಲಿ ನಗರದ ಚರಂಡಿಗಳ ಸ್ವಚ್ಛತೆ ಕುರಿತು ಇಂಜಿನಿಯರ್ ಸೇರಿದಂತೆ ಅಧಿಕಾರಿಗಳ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ಎಂಜಿನಿಯರಿಂಗ್ ವಿಭಾಗ, ನಗರ ಆರೋಗ್ಯ ಅಧಿಕಾರಿಗಳು ಮತ್ತು ಎಲ್ಲಾ ವಲಯಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಮಹಾನಗರ ಪಾಲಿಕೆ ನೌಕರರು ಕೆಲಸದಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದು, ಸಭೆ ನಡೆಸಿದಾಗ ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿಕೊಳ್ಳುತ್ತಾರೆ. ಹೀಗಾಗಿ ಇಂಜಿನಿಯರಿಂಗ್ ಮತ್ತು ಆರೋಗ್ಯ ವಿಭಾಗದ ಅಧಿಕಾರಿಗಳು ಮುಖಾಮುಖಿ ಕುಳಿತು ಮಾತುಕತೆ ನಡೆಸಿ ಎಲ್ಲೆಲ್ಲಿ ಸಮಸ್ಯೆಗಳು ಇದೆ ಎಂಬ ಮಾಹಿತಿ ಪಡೆದು ಎಲ್ಲರಿಗೂ ಮಾರ್ಗದರ್ಶನ ನೀಡುವುದರ ಜೊತೆಗೆ ಮಳೆಗಾಲಕ್ಕೂ ಮುನ್ನ ನಗರದಲ್ಲಿರುವ ಚರಂಡಿ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಮಾಡಲಾಗುತ್ತದೆ ಎಂದು ಸಭೆ ಕರೆದಿದ್ದರು. ಈ ಸಭೆಯಲ್ಲಿ ಅಧಿಕಾರಿಗಳು ಕಾಮಗಾರಿ ನಡೆಸಿರುವ ಕುರಿತು ಕಡತಗಳನ್ನು ನೀಡಿದ್ದಾರೆ ಆದರೆ ಇದರಲ್ಲಿ ಅಧಿಕಾರಿಗಳು ತಪ್ಪು ತಪ್ಪು ಮಾಹಿತಿಯನ್ನು ನೀಡಿದ್ದಾರೆ ಎನ್ನಲಾಗಿದೆ ಇದರಿಂದ ಕೋಪಗೊಂಡ ಮೇಯರ್ ಅಧಿಕಾರಿಗಳು ನೀಡಿದ ಕಡತವನ್ನು ಬಿಸಾಡಿ ಆಕ್ರೋಶ ಹೊರಹಾಕಿದ್ದಾರೆ.
ಮೇಯರ್ ಅಧಿಕಾರಿಗಳ ವಿರುದ್ಧ ಕೋಪಗೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ, ಅಲ್ಲದೆ ಮೇಯರ್ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Parliament Monsoon Session: ಜುಲೈ 22ರಿಂದ ಆಗಸ್ಟ್ 9ರವರೆಗೆ ಸಂಸತ್ತಿನ ಮುಂಗಾರು ಅಧಿವೇಶನ

Advertisement
Advertisement

Udayavani is now on Telegram. Click here to join our channel and stay updated with the latest news.

Next