Advertisement
ಮುಳ್ಳುಹಂದಿಗೆ ಅಷ್ಟೊಂದು ಸೈದ್ಧಾಂತಿಕ ಮಟ್ಟದ ಜ್ಞಾನ ಇದ್ದಿರಬಹುದಾದ ಸಾಧ್ಯತೆ ಕಮ್ಮಿಯಲ್ಲ, ಇಲ್ಲವೇ ಇಲ್ಲ! ಮುಳ್ಳುಹಂದಿಗಳು ತಮ್ಮ ದೇಹದಲ್ಲಿನ ದುರ್ವಾಸನೆಯನ್ನು ತೊಡೆದುಹಾಕಲು ತಮ್ಮನ್ನು ತಾವೇ ಉಗಿದುಕೊಳ್ಳುತ್ತವೆ. ಈ ಉತ್ತರ ಹಿಡಿಸದಿದ್ದ ಪಕ್ಷದಲ್ಲಿ ಅಂಥ ಮಡಿವಂತ ಮುಳ್ಳುಹಂದಿಗಳು ಈ ರೀತಿಯಾಗಿ ಓದಿಕೊಳ್ಳಬೇಕು- ಕೆಮಿಕಲ್ ಡಿಯೋಡರೆಂಟ್‌ಗಳನ್ನು ಬಳಸಲಿಚ್ಛಿಸದ ಮುಳ್ಳುಹಂದಿಗಳು ತಮ್ಮ ಎಂಜಲನ್ನು ತಮ್ಮ ಮೇಲೆಯೇ ಪ್ರೇಕ್ಷಿಸಿಕೊಳ್ಳುತ್ತವೆ. ಅಸಲಿಗೆ ಶತ್ರುಗಳು ತಮ್ಮ ಬಳಿ ಸುಳಿಯದಿರಲೆಂದು ಮುಳ್ಳುಹಂದಿಗಳು ಈ ಉಪಾಯ ಹೂಡುವುದು. ಹೀಗೆ ಮಾಡಿದರೆ ಶತ್ರುಗಳು ಹೋಗಲಿ, ಯಾವ ಮಿತ್ರ ತಾನೇ ಬಳಿಗೆ ಬಂದಾನು ಹೇಳಿ? ಶತ್ರುವನ್ನು ದೂರವಿಡಲು ಇದುವೇ ಸರಿಯಾದ ಮಾರ್ಗವಾಗಿದ್ದಿದ್ದರೆ ದೇಶ, ದೇಶಗಳ ನಡುವೆ ಗನ್ನು, ಬಾಂಬುಗಳ ಅವಶ್ಯಕತೆಯೇ ಬೀಳುತ್ತಿರಲಿಲ್ಲ. ಈ “ಸ್ವಯಂ ಎಂಜಲು ಪ್ರೋಕ್ಷನ’ ಮಾತ್ರದಿಂದ ಸಾವು ನೋವಿಲ್ಲದೆ ಮಹಾಯುದ್ಧಗಳು ಕೊನೆಗೊಳ್ಳುತ್ತಿದ್ದವು ಎನ್ನಿ! Advertisement
ಮುಳ್ಳುಹಂದಿ ತನ್ನ ಮೇಲೆ ತಾನೇ ಉಗಿದುಕೊಳ್ಳುವುದೇಕೆ?
11:28 AM Apr 05, 2018 | |
Advertisement
Udayavani is now on Telegram. Click here to join our channel and stay updated with the latest news.