ಬೆಂಗಳೂರು: ಮುಖ್ಯಮಂತ್ರಿಯವರೊಂದಿಗೆ ಸಂಪರ್ಕ ಸಾಧಿಸುವ ಮತ್ತು ಆಡಳಿತದಲ್ಲಿ ಜನರ ನೇರ ಸಹಭಾಗಿತ್ವವನ್ನು ಪ್ರೋತ್ಸಾಹಿಸುವ “ದಿ ಸಿಟಿಜನ್ ಕನೆಕ್ಟ್’ ಹಾಗೂ ರೈತರ ಬೆಳೆ ಸಮೀಕ್ಷೆಯ “ಫಾರ್ಮರ್ಸ್ ಕ್ರಾಪ್ ಸರ್ವೆà’ ಎಂಬ ಮೊಬೈಲ್ ಆ್ಯಪ್‌ಗ್ಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಿದರು.
ಮಂಗಳವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಏರ್ಪಡಿಸಿದ್ದ ಸರಳ ಸಮಾರಂಭದಲ್ಲಿ ಮುಖ್ಯಮಂತ್ರಿ ಎರಡೂ ಆ್ಯಪ್‌ಗ್ಳನ್ನು ಲೋಕಾರ್ಪಣೆಗೊಳಿಸಿದರು. ರೈತ ಬೆಳೆ ಸಮೀಕ್ಷೆ ಆ್ಯಪ್ ಬಗ್ಗೆ ಮಾಹಿತಿ ನೀಡಿದ ಕೃಷಿ ಸಚಿವ ಕೃಷ್ಣಭೈರೇಗೌಡ, ರಾಜ್ಯದಲ್ಲಿ 2.70 ಲಕ್ಷ ಹಿಡುವಳಿಗಳಿದ್ದು, ಹಿಡುವಳಿ ದಾಖಲಾತಿ, ಬಿತ್ತನೆ ಮತ್ತು ಬೆಳೆ ಬಗ್ಗೆ ಕಂದಾಯ ಇಲಾಖೆ ಮಾಹಿತಿ ಸಂಗ್ರಹ ಮಾಡುತ್ತಾ ಬಂದಿದೆ.
ಆದರೆ, ಸಮರ್ಪಕ ಮತ್ತು ಪೂರ್ಣ ಪ್ರಮಾಣದ ನಿಖರ ಮಾಹಿತಿ ಇಲ್ಲ. ನಿಖರ ಮಾಹಿತಿಯಿಲ್ಲದ ಕಾರಣ ಪರಿಹಾರ ವಿತರಣೆಗೆ ಕಷ್ಟವಾಗುತ್ತಿದೆ. ಈ ಎಲ್ಲ ಸಮಸ್ಯೆಗಳ ಪರಿಹಾರ ಕಂಡುಕೊಳ್ಳಲು “ಫಾರ್ಮರ್ಸ್ ಕ್ರಾಪ್ ಸರ್ವೆà’ ಆ್ಯಪ್ ಸಿದ್ದಪಡಿಸಲಾಗಿದೆ. ರೈತರು ಈ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ತಮ್ಮ ಹಿಡುವಳಿ, ಬೆಳೆ ಇನ್ನಿತರ ವಿಷಯಗಳನ್ನು ಅಪ್‌ಲೋಡ್ ಮಾಡಿದರೆ, ಅದು ನೇರವಾಗಿ “ಭೂಮಿ’ ತಂತ್ರಾಂಶಕ್ಕೆ ಸೇರಿಕೊಳ್ಳುತ್ತದೆ.
ಪರಿಹಾರ ವಿತರಣೆಗೆ ಅನುಕೂಲವಾಗುತ್ತದೆ ಎಂದರು. “ದಿ ಸಿಟಿಜನ್ ಕನೆಕ್ಟ್ ಆ್ಯಪ್’ ಬಗ್ಗೆ ಮಾಹಿತಿ ನೀಡಿದ ಸಿಎಂ ಪ್ರಧಾನ ಕಾರ್ಯದರ್ಶಿ ಎಲ್.ಕೆ. ಅತೀಕ್, ಮುಖ್ಯಮಂತ್ರಿಯವರೊಂದಿಗೆ ಜನರ ಸಂಪರ್ಕ ಕಲ್ಪಿಸುವ ಮತ್ತು ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಜನರಿಗೆ ಮಾಹಿತಿ ನೀಡುವ ಉದ್ದೇಶದಿಂದ ಈ ಆ್ಯಪ್ ಸಿದ್ದಪಡಿಸಲಾಗಿದೆ.
ಆ್ಯಪ್ ಕನ್ನಡ, ಇಂಗ್ಲಿಷ್ ಭಾಷೆಯಲ್ಲಿದ್ದು, ಮುಖ್ಯಮಂತ್ರಿಯವರ ಕಾರ್ಯಕ್ರಮಗಳು, ಭಾಷಣಗಳು ಸಿಗಲಿವೆ. ಆ್ಯಪ್ ಮೂಲಕ ಸಾರ್ವಜನಿಕರು ಮುಖ್ಯಮಂತ್ರಿಯವರನ್ನು ಸಂಪರ್ಕಿಸಿ, ಸಮಸ್ಯೆ ಹೇಳಿಕೊಳ್ಳಬಹುದು. ಸಲಹೆ ನೀಡಬಹುದು. ಜೊತೆಗೆ ಅವರ ಕಿರುಪರಿಚಯ, ಸಾಗಿ ಬಂದ ಹಾದಿಯ ಬಗ್ಗೆ ಮಾಹಿತಿ ಸಿಗಲಿದೆ.
ಇದು ಡಿಜಿಟಲ್ ಯುಗ: ಸಿಎಂ
ಇದು ಡಿಜಿಟಲ್ ಯುಗ. ಮೊಬೈಲ್ ಬಹುಉಪಯೋಗಿ ವೇದಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ತಂತ್ರಜ್ಞಾನದ ಮೂಲಕ ಸರ್ಕಾರದ ವಿವಿಧ ಯೋಜನೆಗಳ ಕುರಿತ ಸಮಗ್ರ ಮಾಹಿತಿ ಜನರಿಗೆ ತಲುಪಿಸಿ, ಸಾರ್ವಜನಿಕರು ಪಾಲ್ಗೊಳ್ಳಲು ಅನುವಾಗುವಂತೆ “ದಿ ಸಿಟಿಜನ್ ಕನೆಕ್ಟ್ ಆ್ಯಪ್’ ರೂಪಿಸಲಾಗಿದೆ. ಇದು “ನವಕರ್ನಾಟಕ -ಮುನ್ನೋಟ-2025’ಗೆ ಅನುಕೂಲವಾಗಲಿದೆ. ಅದೇ ರೀತಿ ರೈತರ ಬೆಳೆ ಸಮೀಕ್ಷೆ ಆ್ಯಪ್ ಲ್ಯಾಂಡ್ ಟು ಲ್ಯಾಬ್ ಆಶಯವನ್ನು ಈಡೇರಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.