ರಾಮನಗರ: ಮಹಿಳೆಯರಲ್ಲಿ ಮುಟ್ಟಿನ ಪ್ರಕ್ರಿಯೆ ನೈಸರ್ಗಿಕ ಸಹಜ ಪ್ರಕ್ರಿಯೆಯಾಗಿದ್ದು, ಸಮುದಾಯದಲ್ಲಿ ಇದರ ಬಗ್ಗೆ ತಪ್ಪುಗ್ರಹಿಕೆ ಇದೆ. ಇದನ್ನುಹೋಗಲಾಡಿಸಲು ಅರಿವು ಕಾರ್ಯಕ್ರಮ ಆಯೋಜಿಸಿ ದ್ದು, ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಎ ಸ್. ಗಂಗಾಧರ್ ಸಲಹೆ ನೀಡಿದರು.
ರಾಮನಗರ ತಾಲೂಕು ಸುಗ್ಗನಹಳ್ಳಿ ಗ್ರಾಮಾಂತರ ಪ್ರೌಢಶಾಲೆಯಲ್ಲಿ ವಿಶ್ವ ಮುಟ್ಟಿನ ನೈರ್ಮಲ್ಯ ದಿನ ಹಾಗೂ ಜಾಗೃತಿ ಸಪ್ತಾಹದ ಅಂಗವಾಗಿ ಹಮ್ಮಿಕೊಂಡಿದ್ದ ಅರಿವು ಕಾರ್ಯಕ್ರಮದಲ್ಲಿ ಮಾತ ನಾಡಿ, ಮೇ 28ರಂದು ಮುಟ್ಟಿನ ನೈರ್ಮಲ್ಯ ದಿನವನ್ನು ಆಚರಿಸಲಾಗುವುದು. ಈ ಹಿನ್ನೆಲೆ ಜಿಲ್ಲಾದ್ಯಂತ ಜಾಗೃತಿ ಸಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮುಟ್ಟಿನ ಸಮಯದಲ್ಲಿ ನೈರ್ಮಲ್ಯ ನಿರ್ವಹಣೆ ಕುರಿತು ವಿದ್ಯಾರ್ಥಿನಿಯರಲ್ಲಿ ಜಾಗೃತಿ ಮೂಡಿಸುವ ಸದು
ದ್ದೇಶವನ್ನು ಈ ಕಾರ್ಯಕ್ರಮ ಹೊಂದಿದೆ ಎಂದರು.
ಸಾಹಸ್ ಸಂಸ್ಥೆಯ ಯೋಜನಾ ಸಂಯೋಜಕಿ ನಯನ ಮಾತನಾಡಿ, ಜನನೇಂದ್ರಿಯ ಭಾಗದ ಅಶುಚಿತ್ವ, ಶೌಚಾಲಯದ ಶುಚಿತ್ವ ಕಾಪಾಡಿಕೊಳ್ಳದಿರುವುದು, ಕಲುಷಿತ ನೀರು ಬಳಕೆ, ಒದ್ದೆಯಾದ ಪ್ಯಾಡ್ ಹೆಚ್ಚು ಸಮಯ ಬಳಸುವುದರಿಂದ ಸಮಸ್ಯೆ ಕಂಡುಬರುತ್ತವೆ. ಇತರೆ ಜನನೇಂದ್ರಿಯ ಸೋಂಕಿನಿಂದಲೂ ಅನಾರೋಗ್ಯಕ್ಕೆ ಅವಕಾಶವಾಗುತ್ತದೆ ಎಂದು ಎಚ್ಚರಿಸಿದರು.
ಸ್ವಚ್ಛತೆ ಕಾಪಾಡಿಕೊಳ್ಳಿ: ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳುವುದರಿಂದ ಈ ಸಮಸ್ಯೆ ನಿಯಂತ್ರಿಸಬಹುದಾಗಿದೆ. ಶೌಚಕ್ಕೆ ಶುದ್ಧ ನೀರು ಬಳಸುವುದು, ಶೌಚಾಲಯ ಶುಚಿಯಾಗಿಡುವುದು, ಮುಟ್ಟಿನ ಸಮಯದಲ್ಲಿ ಅಗತ್ಯಕ್ಕೆ ತಕ್ಕಂತೆ ಪ್ಯಾಡ್, ಬಟ್ಟೆ ಬದಲಿಸಿಕೊಳ್ಳುವುದು, ಪ್ರತಿದಿನ ಒಳ ಉಡುಪುಗಳನ್ನು ಬದಲಾಯಿಸುವುದು, ಅಲ್ಲದೆ ಅವುಗಳನ್ನು ಚೆನ್ನಾಗಿ ಒಗೆದು ಒಣಗಿಸಿ ಮರುಬಳಕೆ ಮಾಡಬೇಕು ಎಂದರು.
ಅತಿಯಾದ ರಕ್ತಸ್ರಾವ, ರಕ್ತಹೀನತೆಗೆ ದಾರಿ: ಜಿಲ್ಲಾ ಎಸ್‌ಬಿಸಿಸಿ ಸಂಯೋಜಕ ಸುರೇಶ್ ಬಾಬು ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರು ಇಂದಿಗೂ ಮುಟ್ಟಿನ ಸಮಯದಲ್ಲಿ ಅಪವಿತ್ರವೆಂದು ಭಾವಿಸಿ ಶುಭ ಕಾರ್ಯಗಳಲ್ಲಿ ಪಾಲ್ಗೊಳ್ಳುವುದಿಲ್ಲ. ಜೊತೆಗೆ ಇಂತಹ ಸಂದರ್ಭಗಳಲ್ಲಿ ಆತಂಕ, ಭಯ, ಮಾನಸಿಕ ಒತ್ತಡದಿಂದ ಬಳಲುತ್ತಾರೆ. ಅತಿಯಾದ ರಕ್ತಸ್ರಾವದಿಂದ ಮಹಿಳೆಯರಲ್ಲಿ ರಕ್ತಹೀನತೆ ಕಂಡುಬರುತ್ತದೆ. ಹೀಗಾಗಿ, ಪೌಷ್ಟಿಕ ಆಹಾರ ಸೇವನೆ ಅಗತ್ಯವಾಗಿ ಪಾಲಿಸಬೇಕು ಎಂದರು. ಮುಖ್ಯಶಿಕ್ಷಕಿ ಗೀತಾ, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಸುಮಂಗಲ, ಶಿಕ್ಷಕ ಶಿವಕುಮಾರ್, ಗೌರಮ್ಮ, ಜಯರಾಮಯ್ಯ, ಸಾಹಸ ಸಂಸ್ಥೆಯ ತಾತಯ್ಯ, ಆಶಾ ಕಾರ್ಯಕರ್ತೆಯರು ಹಾಗೂ ವಿದ್ಯಾರ್ಥಿನಿಯರು ಇದ್ದರು.