Advertisement

ರಸ್ತೆ ಸುರಕ್ಷತೆಗಾಗಿ ಜನಜಾಗೃತಿ

12:33 PM Jan 12, 2018 | |

ಮುದ್ದೇಬಿಹಾಳ: ಪಟ್ಟಣದಲ್ಲಿ ಜ.12ರಿಂದ 16ರ ವರಗೆ ರಸ್ತೆ ಸುರಕ್ಷತೆ ಕುರಿತು ಜನಜಾಗೃತಿ ಮೂಡಿಸಲಾಗುತ್ತಿದೆ
ಎಂದು ಸಿಪಿಐ ರವಿಕುಮಾರ ಕಪ್ಪತ್ತ ನವರ ಹೇಳಿದರು.

Advertisement

ತಾಲೂಕಿನ ತಂಗಡಗಿ ಹತ್ತಿರ ಇರುವ ಹುನಗುಂದ-ತಾಳಿಕೋಟೆ ರಾಜ್ಯ ಹೆದ್ದಾರಿ ಕಾಮಗಾರಿ ನಿರ್ವಹಿಸುತ್ತಿರುವ
ಅಶೋಕಾ ಬಿಲ್ಡ್‌ಕಾನ್‌ ಕ್ಯಾಂಪ್‌ನಲ್ಲಿ ಅಶೋಕಾ ಬಿಲ್ಡಕಾನ್‌, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ, ಪೊಲೀಸ್‌ ಇಲಾಖೆ
ಸಂಯುಕ್ತ ಆಶ್ರಯದಲ್ಲಿ ನಡೆದ ರಸ್ತೆ ಸುರಕ್ಷತಾ ಸಪ್ತಾಹ-2018 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಶಾಲಾ ಕಾಲೇಜುಗಳಲ್ಲಿ ಕಾರ್ಯಕ್ರಮ ನಡೆಸಿ ವಿದ್ಯಾರ್ಥಿಗಳ ಮೂಲಕ ಆಯಾ ಪಾಲಕರಿಗೆ ಸಂದೇಶ ರವಾನಿಸಲಾಗುತ್ತದೆ.

ಪ್ರಮುಖ ಸ್ಥಳಗಳಲ್ಲಿ ಬ್ಯಾನರ್‌, ಬಂಟಿಂಗ್ಸ್‌ ಅಳವಡಿಸಿ ಕರಪತ್ರ ಹಂಚುವ ಮೂಲಕ ನಿಯಮಗಳ ಪಾಲನೆಗೆ
ಮನವಿ ಮಾಡಿಕೊಳ್ಳಲಾಗುತ್ತದೆ. ಪ್ರಮುಖ ಸ್ಥಳಗಳಲ್ಲಿ ರಸ್ತೆ ನಿಯಮ ಕುರಿತ ಚಲನಚಿತ್ರ ಪ್ರದರ್ಶಿಸಿ ಜಾಗೃತಿ ಮೂಡಿಸಲಾಗುತ್ತದೆ ಎಂದು ಹೇಳಿದರು.

ಜ.17ರಿಂದ ಕಡ್ಡಾಯವಾಗಿ ಹೆಲ್ಮೆಟ್‌ ಧರಿಸದೆ ಸಂಚರಿಸುವ ದ್ವಿಚಕ್ರ ವಾಹನ ಸವಾರರಿಗೆ ಎಂವಿ ಆ್ಯಕ್ಟ್ ಅಡಿ ದಂಡ
ವಿಧಿಸಲು ಪೊಲೀಸ್‌ ಇಲಾಖೆಯಿಂದ ಕ್ರಮ ಕೈಕೊಳ್ಳಲಾಗುತ್ತದೆ. ರಸ್ತೆ ಸುರಕ್ಷತಾ ನಿಯಮ ಪಾಲಿಸುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ.

ರಸ್ತೆ ಸುರಕ್ಷತೆಯಲ್ಲಿ ಸಾರ್ವಜನಿಕರ ಭವಿಷ್ಯ ಅಡಗಿದೆ. ಅಶೋಕಾ ಬಿಲ್ಡಕಾನ್‌ ಕಂಪನಿ ಇಂಜಿನಿಯರುಗಳು ರಸ್ತೆ
ನಿರ್ಮಿಸುವಾಗ ಅಗತ್ಯವಿರುವ ಕಡೆ ಉಬ್ಬು ನಿರ್ಮಿಸಿ ಆಯಾ ಸ್ಥಳಗಳಲ್ಲಿ ಅಗತ್ಯ ಸೂಚನಾ ಫಲಕ ಕಡ್ಡಾಯವಾಗಿ
ಅಳವಡಿಸುವ ಮೂಲಕ ನಿಯಮ ಪಾಲನೆಗೆ ಸಹಕರಿಸಬೇಕು ಎಂದು ಹೇಳಿದರು.

Advertisement

ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಕಾರ್ಯನಿರ್ವಾಹಕ ಇಂಜಿನಿಯರ್‌ ರವೀಂದ್ರನಾಥ, ಅಶೋಕಾ ಕಂಪನಿ
ಸುರಕ್ಷತಾ ಅಧಿಕಾರಿ ಸುಜಿತ್‌ಕುಮಾರ, ಪರಿಸರ ಅಭಿಯಂತರ ಲೋಕೇಶ, ದೇವಬ್ರತ್‌ಸಿಂಗ್‌ ರಸ್ತೆ ಸುರಕ್ಷತೆ ಮತ್ತು ಅಶೋಕಾ ಕಂಪನಿ ಪಾಲಿಸುತ್ತಿರುವ ರಸ್ತೆ ನಿಯಮಗಳ ಕುರಿತು ಮಾತನಾಡಿದರು. 

ರಸ್ತೆ ಅಭಿವೃದ್ಧಿ ನಿಗಮದ ಎಇಇ ಬಿ.ಸಿ. ಪಾಟೀಲ, ಟೀಮ್‌ ಲೀಡರ್‌ ಸತೀಶಬಾಬು, ಅಶೋಕಾ ಕಂಪನಿ ಹೆಚ್ಚುವರಿ ಜನರಲ್‌ ಮ್ಯಾನೇಜರ್‌ ಗಣೇಶಕುಮಾರ, ಮಾನವ ಸಂಪನ್ಮೂಲ ಮುಖ್ಯಸ್ಥ ರೋಹಿತ್‌ ಜಗತಾಪ್‌ ಇದ್ದರು.

ಕಾರ್ಯಕ್ರಮದಲ್ಲಿ ರಸ್ತೆ ನಿಯಮ ಕಡ್ಡಾಯವಾಗಿ ಪಾಲಿಸುವುದಾಗಿ ಎಲ್ಲರೂ ಪ್ರತಿಜ್ಞಾವಿ ಧಿ ಸ್ವೀಕರಿಸಿದರು. ರಸ್ತೆ ಸುರಕ್ಷತೆಗೆ ಅಗತ್ಯವಾದ ಸಾಮಗ್ರಿಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಅಶೋಕಾ ಬಿಲ್ಡಕಾನ್‌ ಕಂಪನಿ ಅ ಧಿಕಾರಿ ವರ್ಗ, ಸಿಬ್ಬಂದಿ ಮತ್ತು ತಂಗಡಗಿ ಗ್ರಾಮದ ಹಿರಿಯರು, ಯುವ ಮುಖಂಡರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next