Advertisement

ಕಣ ಕುತೂಹಲ ಕ್ಷಣ ರೋಚಕ: ಟಾಪ್‌ ಕ್ಷೇತ್ರಗಳ ಕಿರುನೋಟ

10:31 AM May 18, 2019 | keerthan |

ಲೋಕಸಭಾ ಚುನಾವಣೆಯ ಫ‌ಲಿತಾಂಶದ ದಿನ ಹತ್ತಿರವಾಗುತ್ತಿದ್ದು, ಈ ಬಾರಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಇದಷ್ಟೇ ಅಲ್ಲದೆ, ರಾಷ್ಟ್ರೀಯ ಪಕ್ಷಗಳಿಗೆ ಸರಿಸಾಟಿಯಾಗಿ ಪ್ರಾದೇಶಿಕ ಪಕ್ಷಗಳೂ ಅಬ್ಬರಿಸುತ್ತಿವೆ. ದೇಶದ ಎಲ್ಲಾ ಕ್ಷೇತ್ರಗಳೂ ಮಹತ್ವದ್ದಾದರೂ, ಮತದಾರರು, ರಾಜಕೀಯ ಪಂಡಿತರ ಕಣ್ಣು ಕೆಲವು ಕ್ಷೇತ್ರಗಳ ಮೇಲೆ ಹೆಚ್ಚಾಗಿಯೇ ನೆಟ್ಟಿದೆ. ಅಂಥ ಟಾಪ್‌ ಕ್ಷೇತ್ರಗಳ ಕಿರುನೋಟ ಇಲ್ಲಿದೆ.

Advertisement

ಹಾಜೀಪುರ್‌ (ಬಿಹಾರ)
ಪಶುಪತಿ ಕುಮಾರ್‌ ಪರಸ್‌ (ಎಲ್‌ಜೆಪಿ) Vs ಶಿವಚಂದ್ರ ರಾಮ್‌ (ಆರ್‌ಜೆಡಿ)
* ಬರೋಬ್ಬರಿ ನಲವತ್ತು ವರ್ಷಗಳ ಕಾಲ ರಾಂ ವಿಲಾಸ್‌ ಪಾಸ್ವಾನ್‌ ಗೆದ್ದ ಕ್ಷೇತ್ರವಿದು. ಹಾಲಿ ಅವಧಿ ಮುಕ್ತಾಯದ ಬಳಿಕ ಅವರು ರಾಜ್ಯಸಭೆ ಪ್ರವೇಶಿಸಲಿದ್ದಾರೆ.
* ಸದ್ಯ ಕಣದಲ್ಲಿರುವ ಎಲ್‌ಜೆಪಿ ಅಭ್ಯರ್ಥಿಯು ಪಾಸ್ವಾನ್‌ರ ಕಿರಿಯ ಸಹೋದರ.
* ಹಾಲಿ ಸಂಸದರ ಪ್ರಭಾವ ಮತ್ತು ಎನ್‌ಡಿಎ ಅಲೆ ಕ್ಷೇತ್ರದಲ್ಲಿ ಹೆಚ್ಚಿನ ಪ್ರಭಾವ ಬೀರಲಿದೆ ಎಂಬ ವಿಶ್ಲೇಷಣೆ ನಡೆದಿದೆ.

ಭಟಿಂಡಾ (ಪಂಜಾಬ್‌)
ಹರ್‌ಸಿಮ್ರತ್‌ ಕೌರ್‌ ಬಾದಲ್‌ (ಎಸ್‌ಎಡಿ) Vs ಅಮರೀಂದರ್‌ ಸಿಂಗ್‌ ರಾಜಾ ವಾರಿಂಗ್‌ (ಕಾಂಗ್ರೆಸ್‌)


* ಶಿರೋಮಣಿ ಅಕಾಲಿ ದಳದ ಪ್ರಭಾವಿ ನಾಯಕಿಗೆ ಈ ಬಾರಿ ಕೊಂಚ ಕಠಿಣ ಸ್ಥಿತಿ ಇದೆ.
* ಅಕಾಲಿ ದಳ-ಬಿಜೆಪಿ ಅಧಿಕಾರದಲ್ಲಿದ್ದಾಗ ಗುರು ಗ್ರಂಥ ಸಾಹಿಬ್‌ಗ ಅವಮಾನದ ಪ್ರಕರಣ ಮುಂದಿಟ್ಟು ಪ್ರತಿಪಕ್ಷಗಳ ಪ್ರಚಾರ.
* ಹರ್‌ಸಿಮ್ರತ್‌ ಕೌರ್‌ ಅವರಿಗೆ ಮೋದಿ ಪ್ರಭಾವಳಿ, ಕೇಂದ್ರ ಯೋಜನೆಗಳು ಆಸರೆಯಾಗಿದ್ದರೆ, ಕಾಂಗ್ರೆಸ್‌ಗೆ ಕೇಂದ್ರ ಸರ್ಕಾರದ ವೈಫ‌ಲ್ಯವೇ ಪ್ರತ್ಯಸ್ತ್ರ.

ಛಿಂದ್ವಾರಾ (ಮಧ್ಯಪ್ರದೇಶ)
ನಕುಲ್‌ನಾಥ್‌ (ಕಾಂಗ್ರೆಸ್‌) Vs ನಥನ್‌ ಸಾಹಾ (ಬಿಜೆಪಿ)
* ಕಮಲ್‌ನಾಥ್‌ 9 ಬಾರಿ ಲೋಕಸಭೆಯಲ್ಲಿ ಪ್ರತಿನಿಧಿಸಿದ್ದ ಕ್ಷೇತ್ರವಿದು. ಹೀಗಾಗಿ ಇದೂ ಕಾಂಗ್ರೆಸ್‌ನ ಭದ್ರಕೋಟೆಯೇ ಹೌದು.
* ಬಿಜೆಪಿಯಿಂದ ನಥನ್‌ಗೆ ಟಿಕೆಟ್‌ ಕೊಡುವಲ್ಲಿ ಎದುರಾದ ಭಿನ್ನಮತ ಪಕ್ಷದ ಮತ ಗಳಿಕೆಯ ಪ್ರಭಾವ ಬೀಳಬಹುದು ಎಂಬ ವಿಶ್ಲೇಷಣೆ.
* ಈಗ ಕಾಂಗ್ರೆಸ್‌ ಆಡಳಿತವೂ ಇರುವುದರಿಂದ ಅಲ್ಲಿ ಸಿಎಂ ಪುತ್ರ ನಕುಲ್‌ನಾಥ್‌ಗೆ ಜಯ ಸುಲಭ ಎಂಬ ಮಾತುಗಳು ಕೇಳಿ ಬರುತ್ತಿವೆ.

ಸುಲ್ತಾನ್‌ಪುರ (ಉತ್ತರ ಪ್ರದೇಶ)
ಮನೇಕಾ ಗಾಂಧಿ (ಬಿಜೆಪಿ) Vs ಚಂದ್ರ ಬದ್ಧ ಸಿಂಗ್‌ (ಬಿಎಸ್‌ಪಿ)
* ಫಿಲಿಭೀತ್‌ ಸಂಸದೆ ಮನೇಕಾ ಈ ಬಾರಿ ಸುಲ್ತಾನ್‌ಪುರದಿಂದ ಆಯ್ಕೆ ಬಯಸಿದ್ದಾರೆ.
* ಎಸ್‌ಪಿ-ಬಿಎಸ್‌ಪಿ ಮೈತ್ರಿ ಮನೇಕಾ ವಿರುದ್ಧ ಸ್ಪರ್ಧೆ ನಡೆಸಿರುವುದು ಹಾಲಿ ಸಾಲಿನ ಪ್ರಮುಖ ಅಂಶ.
* 35 ವರ್ಷ ಬಳಿಕ ಇಲ್ಲಿ ಸ್ಪರ್ಧಿಸಿರುವ ಮನೇಕಾಗೆ ಸಂಜಯ ಗಾಂಧಿ ಸ್ನೇಹಿತ ಕಾಂಗ್ರೆಸ್‌ನ ಸಂಜಯ ಸಿಂಗ್‌ ಜತೆ ಸ್ಪರ್ಧೆ ಮಾಡುವ ಅನಿವಾರ್ಯತೆ.

Advertisement

ಕನೌ°ಜ್‌ (ಉತ್ತರ ಪ್ರದೇಶ)
ಡಿಂಪಲ್‌ ಯಾದವ್‌ (ಎಸ್‌ಪಿ)Vs ಶುಭ್ರತ್‌ ಪಾಠಕ್‌ (ಬಿಜೆಪಿ)


* ಇಲ್ಲಿಂದಲೇ ಅಖೀಲೇಶ್‌ ಮೂರು ಬಾರಿ, ಮುಲಾಯಂ 1 ಬಾರಿ ಗೆದ್ದಿದ್ದಾರೆ, ಡಿಂಪಲ್‌ 2 ಬಾರಿ ಗೆದ್ದಿದ್ದಾರೆ.
* ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಬಿಜೆಪಿಯೇ ಗೆದ್ದಿದೆ. ಇದರಿಂದ ಬಿಜೆಪಿ ಅಭ್ಯರ್ಥಿಗೆ ಈ ಬಾರಿ ಗೆಲ್ಲಬಹುದೆಂಬ ವಿಶ್ವಾಸ.
*ಎಸ್‌ಪಿ-ಬಿಎಸ್‌ಪಿ ಜತೆಗೂಡಿರುವುದರಿಂದ ಮತಗಳ ಧ್ರುವೀಕರಣವಾಗುವ ಸಾಧ್ಯತೆ ಅಧಿಕ.

ಮುಝಾಫ‌ರ್‌ನಗರ್‌ (ಉತ್ತರ ಪ್ರದೇಶ)
ಡಾ.ಸಂಜೀವ್‌ ಕುಮಾರ್‌ ಬಾಲ್ಯಾನ್‌ (ಬಿಜೆಪಿ) Vs ಚೌಧರಿ ಅಜಿತ್‌ ಸಿಂಗ್‌ (ಆರ್‌ಎಲ್‌ಡಿ)
* ಜಾಟ್‌ ಸಮುದಾಯದ ಮತ ವಿಭಜನೆಯ ಆಧಾರದಲ್ಲಿ ಬಿಜೆಪಿ ಗೆಲುವಿನ ಲೆಕ್ಕಾಚಾರ ಹಾಕುತ್ತಿದೆ. ಜತೆಗೆ ಮೋದಿ ಅಲೆ, ಕೇಂದ್ರದ ಯೋಜನೆಗಳೇ ಶ್ರೀರಕ್ಷೆ
* ಮಾಜಿ ಸಚಿವ ಅಜಿತ್‌ ಸಿಂಗ್‌ಗೆ ಎಸ್‌ಪಿ-ಬಿಎಸ್‌ಪಿ ಮೈತ್ರಿ ಕೆಲಸ ಮಾಡಬಹುದೆಂಬ ಯೋಚನೆ.
* 2013ರ ನಂತರದ ವಾತಾವರಣ ಬಿಜೆಪಿಗೆ ಅನುಕೂಲಕರವಾಗಿ ಪರಿಣಮಿಸಿತ್ತು.

ಅಸನ್‌ಸೋಲ್‌ (ಪಶ್ಚಿಮ ಬಂಗಾಳ)
ಬಾಬುಲಾಲ್‌ ಸುಪ್ರಿಯೋ (ಬಿಜೆಪಿ) Vs ಮೂನ್‌ ಮೂನ್‌ ಸೇನ್‌ (ಟಿಎಂಸಿ)
* ಈ ಕ್ಷೇತ್ರದಲ್ಲಿ ಮೊದಲ ಬಾರಿಗೆ ಬಿಜೆಪಿ ಗೆದ್ದಿದೆ. ಪ.ಬಂಗಾಳದಲ್ಲಿ ಹಿಂದಿನ ಚುನಾವಣೆಯಲ್ಲಿ ಗೆದ್ದಿರುವ 2 ಕ್ಷೇತ್ರಗಳಲ್ಲಿ ಇದೂ ಒಂದು.
* 2021ರಲ್ಲಿ ನಡೆಯಲಿರುವ ಪ.ಬಂ. ವಿಧಾನಸಭೆ ಚುನಾವಣೆ ಕೇಂದ್ರೀಕರಿಸಿ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲ್ಲುವ ಇರಾದೆ ಬಿಜೆಪಿಯದ್ದು
* ಸಿಪಿಎಂ, ಟಿಎಂಸಿ ಕೂಡ ಪ್ರಭಾವಯುತವಾಗಿಯೂ ಈ ಕ್ಷೇತ್ರದಲ್ಲಿ ಪ್ರಬಲ ಸ್ಪರ್ಧೆ ನೀಡುತ್ತಿವೆ.

ಅನ್ರೋಹಾ (ಉತ್ತರ ಪ್ರದೇಶ)
ಕನ್ವರ್‌ ಸಿಂಗ್‌ ತನ್ವರ್‌ (ಬಿಜೆಪಿ) Vs ಕುನ್ವರ್‌ ಡ್ಯಾನಿಷ್‌ ಅಲಿ (ಬಿಎಸ್‌ಪಿ)
* ಹಲವು ಪಕ್ಷಗಳು ಈ ಕ್ಷೇತ್ರವನ್ನಾಳಿವೆ. ಮುಸ್ಲಿಂ ಸಮುದಾಯದ ಮತದಾರರು ಹೆಚ್ಚಿದ್ದಾರೆ.
* ಜೆಡಿಎಸ್‌ನಲ್ಲಿದ್ದ ಕುನ್ವರ್‌ ಡ್ಯಾನಿಷ್‌ ಅಲಿ ಬಿಎಸ್‌ಪಿ ಅಭ್ಯರ್ಥಿಯಾಗಿರುವುದು ಈ ಬಾರಿಯ ವಿಶೇಷತೆ .
* ಐದು ವಿಧಾನಸಭಾ ಕ್ಷೇತ್ರಗಳ ಪೈಕಿ 4ರಲ್ಲಿ ಬಿಜೆಪಿ, 1ರಲ್ಲಿ ಎಸ್‌ಪಿ ಇದೆ. ಉತ್ತರ ಪ್ರದೇಶದ ಮೈತ್ರಿ ಪ್ರಭಾವ ಬಿಎಸ್‌ಪಿ ಮೇಲೆ ಹೆಚ್ಚು ಪ್ರಭಾವ ಬೀರುವ ಸಾಧ್ಯತೆ.

ಪೂರ್ವ ಚಂಪಾರಣ್‌ (ಬಿಹಾರ)
ರಾಧಾಮೋಹನ್‌ ಸಿಂಗ್‌ (ಬಿಜೆಪಿ) Vs ಆಕಾಶ್‌ ಪ್ರಸಾದ್‌ ಸಿಂಗ್‌ (ಆರ್‌ಎಲ್‌ಎಸ್‌ಪಿ)
* ನಾಲ್ಕು ದಶಕಗಳಿಗೂ ಅಧಿಕ ಕಾಲದ ಸಂಸದೀಯ ಅನುಭವದ ಸಿಂಗ್‌ ಎದುರಾಳಿಯಾಗಿ 27 ವರ್ಷದ ಆಕಾಶ್‌ ಪ್ರಸಾದ್‌ ಸ್ಪರ್ಧೆ.
* ಆರು ವಿಧಾನಸಭಾ ಕ್ಷೇತ್ರಗಳ ಪೈಕಿ 5ರಲ್ಲಿ ಬಿಜೆಪಿ, ಎಲ್‌ಜೆಪಿ ಪಕ್ಷಗಳ ಶಾಸಕರು ಇರುವುದು ಕೇಂದ್ರ ಸಚಿವರಿಗೆ ಧನಾತ್ಮಕ ಅಂಶ.
* ಜಾತಿ ಲೆಕ್ಕಾಚಾರವೂ ಕ್ಷೇತ್ರದಲ್ಲಿ ಅಭ್ಯರ್ಥಿಯ ಮೇಲೆ ಹೆಚ್ಚು ಪ್ರಭಾವ ಬೀರಲಿದೆ.

ಘಾಜಿಯಾಬಾದ್‌ (ಉತ್ತರ ಪ್ರದೇಶ)
ವಿ.ಕೆ.ಸಿಂಗ್‌ (ಬಿಜೆಪಿ) Vs ಸುರೇಶ್‌ ಬನ್ಸಾಲ್‌ (ಕಾಂಗ್ರೆಸ್‌)
* 2009ರ ಚುನಾವಣೆಯಲ್ಲಿ ರಾಜನಾಥ್‌ ಸಿಂಗ್‌ ಗೆದ್ದಿದ್ದ ಕ್ಷೇತ್ರವಿದು. ಈಗ ಎಸ್‌ಪಿ-ಬಿಎಸ್‌ಪಿ ಮೈತ್ರಿ ಇರುವ ಹಿನ್ನೆಲೆಯಲ್ಲಿ ಕೇಂದ್ರ ಸಚಿವರಿಗೆ ಕೊಂಚ ಕಠಿಣ ಸ್ಥಿತಿ ಸಾಧ್ಯತೆ
* ಗೆಲುವಿನ ಭರವಸೆಯಲ್ಲಿದ್ದಾರೆ ವಿ.ಕೆ. ಸಿಂಗ್‌
* ಗುಜ್ಜರ್‌ ಸಮುದಾಯ ಶೇ.11, ಮುಸ್ಲಿಮರು ಶೇ.25.34 ಇದ್ದಾರೆ. ಈ ವ್ಯಾಪ್ತಿಯ ಎಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯೇ ಗೆದ್ದಿದೆ.

ಅರುಣಾಚಲ ಪ್ರದೇಶ ಪಶ್ಚಿಮ
ಕಿರಣ್‌ ರಿಜಿಜು (ಬಿಜೆಪಿ) Vs ನಬಂ ಟುಕಿ (ಕಾಂಗ್ರೆಸ್‌)
* ರಿಜಿಜುಗೆ ಹಾಲಿ ಸಾಲಿನದ್ದು ಲೋಕಸಭೆಯಲ್ಲಿ 2ನೇ ಅವಧಿ. ಅವರಿಗೆ ಕಾಂಗ್ರೆಸ್‌ನ ನಬಂ ಟುಕಿಯಿಂದ ಪ್ರಬಲ ಪೈಪೋಟಿ ಇದೆ.
* ವಿಧಾನಸಭೆ ಚುನಾವಣೆಯೂ ಜತೆಗೇ ನಡೆದಿರುವುದರಿಂದ ಆಡಳಿತ ವಿರೋಧಿ ಅಲೆಯೂ ರಿಜಿಜುಗೆ ಇದೆ ಎನ್ನಲಾಗುತ್ತದೆ.
* ರೊಹಿಂಗ್ಯಾ ಸಮಸ್ಯೆ, ಈಶಾನ್ಯ ರಾಜ್ಯಗಳ ಸಮಸ್ಯೆ ಪರಿಹರಿಸುವತ್ತ ತೋರಿದ್ದ ಮುತುವರ್ಜಿ ಅವರಿಗೆ ಧನಾತ್ಮಕ ಅಂಶ.

Advertisement

Udayavani is now on Telegram. Click here to join our channel and stay updated with the latest news.

Next