Advertisement

ಇವು ಅತ್ಯಂತ ಹಾಟ್‌ ಲೋಕಸಭಾ ಕ್ಷೇತ್ರಗಳು

11:22 AM May 17, 2019 | Team Udayavani |

ಸ್ಪರ್ಧೆಯಲ್ಲಿರುವ ಇಬ್ಬರು ನಾಯಕರು ಸಮಬಲರೇ ಆಗಿರುವ  ಅತ್ಯಂತ ಹಾಟ್‌ ಲೋಕಸಭಾ ಕ್ಷೇತ್ರಗಳು ಇವು

Advertisement

ಅಮೇಠಿ (ಉತ್ತರ ಪ್ರದೇಶ)
ರಾಹುಲ್‌ ಗಾಂಧಿ (ಕಾಂಗ್ರೆಸ್‌) Vs ಸ್ಮತಿ ಇರಾನಿ (ಬಿಜೆಪಿ)
* ರಾಯ್‌ಬರೇಲಿಯಂತೆ ಇದೂ ಕಾಂಗ್ರೆಸ್‌ನ ಕ್ಷೇತ್ರ. 98-99ರ ಅವಧಿಯಲ್ಲಿ ಮಾತ್ರ ಬಿಜೆಪಿ ಗೆದ್ದಿತ್ತು
* ಕಳೆದ ಬಾರಿ ರಾಹುಲ್‌ ಗೆದ್ದ ಮತಗಳ ಅಂತರ 1,08,173 ಮಾತ್ರ. ಜತೆಗೆ ಇರಾನಿಗೆ ಕ್ಷೇತ್ರದ ಜನತೆ ಜತೆಗೆ ನಿಕಟ ಸಂಪರ್ಕವಿದೆ
* ಪ್ರಧಾನಿ ಮೋದಿ, ಅಮಿತ್‌ ಶಾ ಇರಾನಿ ಪರ ಪ್ರಚಾರ ನಡೆಸಿದ್ದಾರೆ. ಹೀಗಾಗಿ, ತುರುಸಿನ ಸ್ಪರ್ಧೆ ಇದೆ.

ಭೋಪಾಲ (ಮಧ್ಯಪ್ರದೇಶ)
ಸಾಧ್ವಿ ಪ್ರಜ್ಞಾ ಸಿಂಗ್‌ (ಬಿಜೆಪಿ) Vs ದಿಗ್ವಿಜಯ ಸಿಂಗ್‌ (ಕಾಂಗ್ರೆಸ್‌)
* ದಿಗ್ವಿಜಯ ಸಿಂಗ್‌ಗೆ ಕಠಿಣ ಚುನಾವಣೆ ಇದು ಎಂಬ ವಿಶ್ಲೇಷಣೆ ಎಲ್ಲೆಡೆ ಕೇಳಿ ಬರುತ್ತಿದೆ
*1989ರಿಂದಲೂ ಈ ಕ್ಷೇತ್ರದಲ್ಲಿ ಬಿಜೆಪಿಯೇ ಗೆಲ್ಲುತ್ತಿದೆ. ಇದರ ಜತೆಗೆ ವಿಧಾನಸಭೆ ಚುನಾವಣೆಯಲ್ಲಿಯೂ 8 ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ ಗೆದ್ದದ್ದು 2ರಲ್ಲಿ ಮಾತ್ರ
* ಹಿಂದೂ ಭಯೋತ್ಪಾದನೆ ಎಂದಿದ್ದ ಸಿಂಗ್‌ ವಿರುದ್ಧ ಪ್ರಜ್ಞಾರನ್ನು ನಿಲ್ಲಿಸಿದ್ದು ಬಿಜೆಪಿಯ ವ್ಯೂಹಾತ್ಮಕ ನಿರ್ಧಾರವೆನ್ನಲಾಗುತ್ತಿದೆ.

ರಾಮ್‌ಪುರ (ಉತ್ತರ ಪ್ರದೇಶ)
ಜಯಪ್ರದಾ (ಬಿಜೆಪಿ) Vs ಆಜಂ ಖಾನ್‌ (ಎಸ್‌ಪಿ)
* ಎಸ್‌ಪಿಯಿಂದ 2 ಬಾರಿ ಆಯ್ಕೆಯಾಗಿದ್ದ ಕ್ಷೇತ್ರದಲ್ಲಿ ಮತ್ತೆ ಬಿಜೆಪಿಯಿಂದ ಜಯಾ ಸ್ಪರ್ಧೆ
* ಸದ್ಯ ಅಲ್ಲಿ ಬಿಜೆಪಿ ಸಂಸದರೇ ಇದ್ದರೂ, ಎಸ್‌ಪಿ ಪ್ರಭಾವ ಹೆಚ್ಚಾಗಿಯೇ ಇದೆ. ಹಿಂದಿನ ಬಾರಿ ಜಯಪ್ರದಾಗೆ ಗೆಲ್ಲಲು ನೆರವಾಗಿದ್ದರು ಆಜಂಖಾನ್‌.
* ಎಸ್‌ಪಿ-ಬಿಎಸ್‌ಪಿ ಮೈತ್ರಿ ಮಾಜಿ ಸಚಿವ ಅಜಂಖಾನ್‌ಗೆ ನೆರವಾಗುವುದಿ ದ್ದರೆ, ಜಯಪ್ರದಾಗೆ ಮೋದಿ ಪ್ರಭಾವಳಿ ಇದೆ.

ತಿರುವನಂತಪುರ (ಕೇರಳ)

Advertisement


ಶಶಿ ತರೂರ್‌ (ಕಾಂಗ್ರೆಸ್‌) Vs ಕುಮ್ಮನಮ್‌ ರಾಜಶೇಖರನ್‌ (ಬಿಜೆಪಿ)
* 2 ಬಾರಿ ಸಂಸದರಾಗಿರುವ ತರೂರ್‌ ವಿರುದ್ಧ ಕುಮ್ಮನಮ್‌ರನ್ನು ಕಣಕ್ಕೆ ಇಳಿಸಲಾಗಿದೆ. ಹಿಂದಿನ ಗೆಲವಿನ ಅಂತರ 15 ಸಾವಿರ ಮತ.
* ಶಬರಿಮಲೆ ವಿವಾದ ಮುಂದಿಟ್ಟುಕೊಂಡು ಸ್ಪರ್ಧೆ ಮಾಡಿರುವ ಬಿಜೆಪಿ ಈ ಕ್ಷೇತ್ರದ ಮೂಲಕ ಖಾತೆ ತೆರೆಯಲು ಮುಂದಾಗಿದೆ.
* ಹಿಂದಿನ ಬಾರಿಯ ಮತದಾನದಲ್ಲಿ ಬಿಜೆಪಿಯ ಶೇಕಡಾವಾರು ಮತ ವೃದ್ಧಿಸಿದ್ದರೆ, ಕಾಂಗ್ರೆಸ್‌ನದ್ದು ಇಳಿಕೆಯಾಗಿತ್ತು.

ಪಾಟ್ನಾ ಸಾಹಿಬ್‌ (ಬಿಹಾರ)


ರವಿಶಂಕರ ಪ್ರಸಾದ್‌ (ಬಿಜೆಪಿ) Vsಶತ್ರುಘ್ನ ಸಿನ್ಹಾ (ಕಾಂಗ್ರೆಸ್‌)
* ಬಿಜೆಪಿಯಲ್ಲಿದ್ದ ಶತ್ರುಘ್ನ ಸಿನ್ಹಾ ಕಾಂಗ್ರೆಸ್‌ ಸೇರಿದ್ದಾರೆ. ಕೇಂದ್ರ ಸಚಿವ ರವಿಶಂಕರ ಪ್ರಸಾದ್‌ ಬಿಜೆಪಿ ಹುರಿಯಾಳು.
* ಇಬ್ಬರು ನಾಯಕರು ಕಾಯಸ್ಥ ಸಮುದಾಯದವರೇ ಆಗಿರುವುದರಿಂದ ಜನರ ಆಯ್ಕೆಯ ಬಗ್ಗೆ ಕುತೂಹಲವಿದೆ.
* ಆರು ವಿಧಾನಸಭಾ ಕ್ಷೇತ್ರಗಳಲ್ಲಿ 4ರಲ್ಲಿ ಬಿಜೆಪಿ, 1ರಲ್ಲಿ ಜೆಡಿಯು ಶಾಸಕರು ಇರುವುದು ರವಿಶಂಕರ್‌ ಪ್ರಸಾದ್‌ಗೆ ಧನಾತ್ಮಕ ಬೆಳವಣಿಗೆ.

Advertisement

Udayavani is now on Telegram. Click here to join our channel and stay updated with the latest news.

Next