Advertisement

ಹಗರಣ ಸಹಿಸೆವು: ಪೋಪ್‌

06:01 AM Oct 07, 2018 | |

ವ್ಯಾಟಿಕನ್‌ ಸಿಟಿ/ಕೊಟ್ಟಾಯಂ: ಚರ್ಚ್‌ಗಳಲ್ಲಿ ನಡೆಯುವ ಲೈಂಗಿಕ ಹಗರಣಗಳನ್ನು ಇನ್ನೆಂದಿಗೂ ಸಹಿಸಿಕೊಳ್ಳುವ ಪ್ರಮೇಯವೇ ಇಲ್ಲ ಎಂದು ಕ್ರೈಸ್ತ ಧರ್ಮದ ಪರಮೋಚ್ಚ ಗುರು, ಪೋಪ್‌ ಫ್ರಾನ್ಸಿಸ್‌ ತಿಳಿಸಿದ್ದಾರೆ. ಶನಿವಾರ ವ್ಯಾಟಿಕನ್‌ನಿಂದ ಹೊರಬಿದ್ದಿರುವ ಪ್ರಕಟಣೆಯಲ್ಲಿ ಈ ರೀತಿ ನುಡಿದಿರುವ ಅವರು, ಚರ್ಚುಗಳಲ್ಲಿ ಕ್ರೈಸ್ತ ಸನ್ಯಾಸಿನಿ ಅಥವಾ ಮತ್ಯಾವುದೇ ಸ್ತ್ರೀಯರನ್ನು ದುರ್ಬಳಕೆ ಮಾಡಿಕೊಳ್ಳುವುದು, ಅಂಥ ಪ್ರಕರಣಗಳನ್ನು ಮುಚ್ಚಿಹಾಕಲು ಯತ್ನಿಸುವಂಥ ಪ್ರಯತ್ನಗಳನ್ನು ಸಹಿಸಿಕೊಳ್ಳಲಾಗದು ಎಂದಿದ್ದಾರೆ. 

Advertisement

ಈ ಮೂಲಕ, ಚರ್ಚ್‌ಗಳಲ್ಲಿನ ಲೈಂಗಿಕ ಹಗರಣಗಳ ಬಗ್ಗೆ ದೂರು ನೀಡಿದರೂ ಪೋಪ್‌ ಜಾಣ ಕಿವುಡು ಪ್ರದರ್ಶಿಸುತ್ತಿದ್ದಾರೆಂದು ಸಂತ್ರಸ್ತ ಮಹಿಳೆಯರ ಪರ ದನಿಯೆತ್ತಿರುವ ಕಾರ್ಯಕರ್ತರು ಮಾಡಿದ್ದ ಆರೋಪಕ್ಕೆ, ಹೀಗೆ ಉತ್ತರ ನೀಡಿದ್ದಾರೆ. ವಾಷಿಂಗ್ಟನ್‌ನ ಥಿಯೋಡೊರ್‌ ಮೇಕರಿಕ್‌ ಪ್ರಕರಣ ಸೇರಿ ವ್ಯಾಟಿಕನ್‌ನ ನೇರ ಪ್ರಭಾವವಿರುವ ಚರ್ಚುಗಳಲ್ಲಿ ನಡೆದಿವೆ ಎನ್ನಲಾದ ಕೆಲವು ಲೈಂಗಿಕ ಹಗರಣ ತನಿಖೆ ಶುರುವಾಗಿರುವ ಹಿನ್ನೆಲೆಯಲ್ಲಿ ಪೋಪ್‌ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಬಂಧನ ಅವಧಿ ವಿಸ್ತರಣೆ: ಕ್ರೈಸ್ತ ಸನ್ಯಾಸಿನಿ ಅತ್ಯಾಚಾರ ಆರೋಪದಲ್ಲಿ ಬಂಧಿತರಾರುವ ಬಿಷಪ್‌ ಫ್ರಾಂಕೊ ಮುಲಕ್ಕಲ್‌ರ ನ್ಯಾಯಾಂಗ ಬಂಧನದ ಅವಧಿಯನ್ನು ಕೇರಳದ ನ್ಯಾಯಾಲಯ 14 ದಿನಗಳ ಕಾಲ ವಿಸ್ತರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next