ವ್ಯಾಟಿಕನ್ ಸಿಟಿ: ಈ ಹಿಂದೆ ಬದ್ಧ ವೈರಿಗಳಾಗಿದ್ದ ದಕ್ಷಿಣ ಸುಡಾನ್‌ನ ಇಬ್ಬರು ನಾಯಕರ ಪಾದಗಳನ್ನು ಪೋಪ್ ಫ್ರಾನ್ಸಿಸ್ ಶುಕ್ರವಾರ ಚುಂಬಿಸಿದ್ದಾರೆ. ಸಾಮಾನ್ಯ ವಾಗಿ ಗುರುವಾರದಂದು ಕೈದಿಗಳ ಪಾದ ತೊಳೆಯುತ್ತಿದ್ದ ಪೋಪ್ ಫ್ರಾನ್ಸಿಸ್ ಹಿಂದೆಂದೂ ಯಾವುದೇ ವ್ಯಕ್ತಿಯ ಪಾದ ಚುಂಬಿಸಿರಲಿಲ್ಲ. ಇದೇ ಮೊದಲ ಬಾರಿ ಶಾಂತಿ ಕಾಪಾಡು ವಂತೆ ಕೋರಿ ಪೋಪ್ ಇಂಥದ್ದೊಂದು ವಿಶೇಷ ನಡೆ ತೋರಿದ್ದಾರೆ. ದಕ್ಷಿಣ ಸುಡಾನ್‌ನಲ್ಲಿ 2013 ರಲ್ಲಿ ನಡೆದ ಹಿಂಸಾಚಾರದಿಂದಾಗಿ ಸುಮಾರು 4 ಲಕ್ಷ ಜನರು ಪ್ರಾಣ ಕಳೆದುಕೊಂಡಿದ್ದರು. ಅಧ್ಯಕ್ಷ ಸಾಲ್ವಾ ಕೀರ್ ಮತ್ತು ವಿಪಕ್ಷ ನಾಯಕ ರೀಕ್ ಮಚರ್ ನಡೆಸಿದ ದಂಗೆ ಇದಕ್ಕೆ ಕಾರಣ ವಾಗಿತ್ತು. ಅನಂತರದಲ್ಲಿ ಇಬ್ಬರೂ ನಾಯಕರು ಶಾಂತಿ ಕಾಪಾಡಲು ಒಪ್ಪಂದ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಶಾಂತಿ ಕಾಪಾಡುವಂತೆ ಕೀರ್, ರೀಕ್ ಮಚರ್ ಮತ್ತು ಮೂವರು ಉಪಾಧ್ಯಕ್ಷರ ಪಾದವನ್ನು ಫ್ರಾನ್ಸಿಸ್ ಚುಂಬಿಸಿದ್ದಾರೆ.