Advertisement

ವರ್ಷ ಕಳೆದಂತೆ ಪಿಒಪಿ ಬಳಕೆ ಕಡಿಮೆಯಾಗಿದೆ

12:59 AM Sep 01, 2019 | Lakshmi GovindaRaj |

ಬೆಂಗಳೂರು: ವರ್ಷ ಕಳೆದಂತೆ ನಗರದಲ್ಲಿ ಪಿಒಪಿ ಗಣಪತಿ ಮೂರ್ತಿ ಬಳಕೆದಾರರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಮೇಯರ್‌ ಗಂಗಾಂಬಿಕೆ ಹೇಳಿದರು.

Advertisement

ಬಾಂಧವ್ಯ ಸಂಸ್ಥೆ, ಶನಿವಾರ ಜಯನಗರದ ವಿಶ್ವೇಶ್ವರಯ್ಯ ಸಂಕೀರ್ಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಜೇಡಿ ಮಣ್ಣಿನ ಗೌರಿ-ಗಣೇಶ ಮೂರ್ತಿ ಉಚಿತವಾಗಿ ವಿತರಿಸಿ ಮಾತನಾಡಿದ ಅವರು, ಪರಿಸರದ ದೃಷ್ಟಿಯಿಂದ ಮಣ್ಣಿನ ಮೂರ್ತಿಗಳನ್ನು ಬಳಕೆ ಮಾಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಮೊಬೈಲ್‌ ಟ್ಯಾಂಕ್‌ಗಳನ್ನು ಬಳಸಿ ನಗರದಲ್ಲಿ ಗಣೇಶ ವಿಸರ್ಜನೆಗೆ ಪಾಲಿಕೆ ಮುಂದಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಪರಿಸರ ಮಾಲಿನ್ಯ ಇಲಾಖೆ ನಿರ್ದೇಶನದಂತೆ ಆಯುಕ್ತರು ಕೂಡ ಸಭೆ ನಡೆಸಿದ್ದಾರೆ ಎಂದರು.

ಶಾಸಕಿ ಸೌಮ್ಯಾರೆಡ್ಡಿ ಮಾತನಾಡಿ, ಪಿಒಪಿ ಮೂರ್ತಿ ಬಳಕೆಯಿಂದ ನಗರದ ಕೆರೆಗಳು ಕಲುಷಿತಗೊಳ್ಳಲಿವೆ. ಆ ಹಿನ್ನೆಲೆಯಲ್ಲಿ ಪರಿಸರ ಪ್ರೇಮಿ ಮೂರ್ತಿಗಳನ್ನು ಕೊಳ್ಳುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು. ಶಾಸಕ ರಾಮಲಿಂಗಾ ರೆಡ್ಡಿ, ಬಾಂಧವ್ಯ ಸಂಸ್ಥೆಯ ಮುಖ್ಯಸ್ಥ ಎನ್‌.ನಾಗರಾಜ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next