Advertisement
ಪ್ರತಿ ವರ್ಷವೂ ಗಣೇಶ ಚತುದರ್ಶಿ ಸಂದರ್ಭಗಳಲ್ಲಿ ಪ್ಲಾಸ್ಟರ್ ಆಫ್ ಪ್ಯಾರೀಸ್ (ಪಿಒಪಿ) ಹಾಗೂ ಬಣ್ಣದ ಗಣೇಶ ಮೂರ್ತಿ ನಿಷೇಧಿಸಿದರೂ ಜನ ಈ ಬಗ್ಗೆ ತಲೆಕೆಡಿಸಿ ಕೊಳ್ಳುತ್ತಿರಲಿಲ್ಲ. ಆದರೆ, ಈ ಬಾರಿ ಕೆಎಸ್‌ಪಿಸಿಬಿಯು ರಾಜ್ಯಾದ್ಯಂತ ತನ್ನ ಪ್ರಾದೇಶಿಕ ಕಚೇರಿಗಳ ವ್ಯಾಪ್ತಿಗಳಲ್ಲಿ ಪಿಒಪಿ ತಯಾರಿಸದಂತೆ ಅಭಿಯಾನ ಶುರು ಮಾಡಿದೆ. ಗಣೇಶ ಮೂರ್ತಿ ಉತ್ಪಾದನೆ, ವಿಸರ್ಜನೆ ಹಾಗೂ ಪಿಒಪಿ ಮೂರ್ತಿಗಳಿಂದ ಪರಿಸರಕ್ಕೆ ಆಗುವ ಹಾನಿಯ ಬಗ್ಗೆ ತಿಳಿವಳಿಕೆ ಮೂಡಿಸಲಾಗುತ್ತಿದೆ. ಇನ್ನು ಹಲವು ಕಡೆ ಪಿಒಪಿ ಮೂರ್ತಿ ತಯಾರಿಕಾ ಘಟಕಗಳ ಮೇಲೆ ದಾಳಿ ನಡೆಸಿ ಸಾವಿರಾರು ಮೂರ್ತಿ ಜಪ್ತಿ ಮಾಡಲಾಗಿದೆ.
Related Articles
Advertisement
ಪಿಒಪಿ ಗಣೇಶ ಮೂರ್ತಿಗೆ ಪ್ರಭಾವಿಗಳ ಶ್ರೀರಕ್ಷೆ:
ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪಿಒಪಿ ಗಣೇಶ ಮೂರ್ತಿ ತಯಾರಿಸಿ ದೇಶದ ವಿವಿಧೆಡೆಗೆ ಪೂರೈಸುವ ವ್ಯವಸ್ಥಿತ ಜಾಲವಿದೆ. ಆದರೆ, ಇದುವರೆಗೆ ಪ್ರಭಾವಿಗಳ ಶ್ರೀರಕ್ಷೆಯಿಂದ ಪರಿಸರ ಅಧಿಕಾರಿಗಳು ಕ್ರಮ ಕೈಗೊಳ್ಳದೇ ಕೈ ಕಟ್ಟಿ ಕುಳಿತುಕೊಳ್ಳಬೇಕಿತ್ತು. ಇನ್ನು ಮುಂದೆ ಪಿಒಪಿ ಗಣೇಶ ಮೂರ್ತಿ ಕೂರಿಸುವುದು, ಪ್ರಕೃತಿಗೆ ಹಾನಿ ಮಾಡುವುದು ಗಮನಕ್ಕೆ ಬಂದರೆ ಪುರಸಭೆಯ ಸಿಬ್ಬಂದಿ, ಸಂಬಂಧಿಸಿದ ಅಧಿಕಾರಿಗಳ ಜೊತೆಗೆ ಆ ಜಾಗಕ್ಕೆ ದಾಳಿ ನಡೆಸಿ ಅಲ್ಲಿರುವ ಮೂರ್ತಿಗಳನ್ನು ಜಪ್ತಿ ಮಾಡಲು ಮಂಡಳಿ ನಿರ್ಧರಿಸಿದೆ. ಕೆಎಸ್‌ಪಿಸಿಬಿಯು ತನ್ನ ಅಧಿಕಾರ ಚಲಾಯಿಸಿ ಖಾಸಗಿ ಕ್ರಿಮಿನಲ್ ಕೇಸ್ ದಾಖಲಿಸಲಿದೆ. ನಂತರ ಈ ಬಗ್ಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಿದೆ. ಕೋರ್ಟ್‌ನಲ್ಲಿ ತಪ್ಪಿತಸ್ಥರು ಕಾನೂನು ಉಲ್ಲಂ ಸಿರುವುದು ದೃಢಪಟ್ಟರೆ ಒಂದೂವರೆ ವರ್ಷದಿಂದ 6 ವರ್ಷದವರೆಗೂ ಸಜೆ ನೀಡಲು ಅವಕಾಶವಿದೆ. ಈಗಾಗಲೇ 4 ಕೇಸ್ ದಾಖಲಾಗಿದೆ.
ಪರಿಸರ ಸ್ನೇಹಿ ಗಣಪ ತಯಾರಿ ತರಬೇತಿ:
ಬೆಂಗಳೂರು: ಬಿ.ಪ್ಯಾಕ್ ಹಾಗೂ ಬಿ.ಕ್ಲಿಪ್ ಅಲ್ಯೂಮ್ನಿ ಅಸೋಸಿಯೇಷನ್‌ನಿಂದ ಹಲಸೂರು ಕೆರೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪರಿಸರ ಸ್ನೇಹಿ ಮಣ್ಣಿನ ಗಣಪ ತಯಾರಿಸುವ ಕಾರ್ಯಾಗಾರದಲ್ಲಿ 500ಕ್ಕೂ ಹೆಚ್ಚಿನ ಮಕ್ಕಳು ಪಾಲ್ಗೊಂಡರು.
ಶಾಸಕ ರಿಜ್ವಾನ್ ಅರ್ಷಾದ್ ಮಾತನಾಡಿ, ಇಲ್ಲಿ ಸೇರಿರುವ ಜನಮೂಹದ ಪರಿಸರ ಪ್ರಜ್ಞೆ ಕಂಡು ಅತೀವ ಸಂತಸವಾಗುತ್ತಿದೆ. ಪಿಒಪಿ ಗಣಪತಿ ಮೂರ್ತಿಗಳಿಂದಾಗಿ ಜಲಮೂಲಗಳ ಮಾಲಿನ್ಯವಾಗುತ್ತಿದೆ. ಎಲ್ಲರೂ ಪಿಒಪಿ ಗಣಪತಿ ಮೂರ್ತಿಗಳ ಬದಲಾಗಿ ಮಣ್ಣಿನಲ್ಲಿ ಮಾಡಿದ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಬೇಕು. ಇಂತಹ ಕಾರ್ಯಕ್ರಮಗಳು ನಗರದಲ್ಲಿ ಇನ್ನೂ ಹೆಚ್ಚು ನಡೆಯಬೇಕು ಎಂದರು.
ಕಾರ್ಯಾಗಾರದಲ್ಲಿ ಮಣ್ಣಿನ ಗಣಪ ತಯಾರಿ ಸುವುದನ್ನು ಮಕ್ಕಳಿಗೆ ತಿಳಿಸಿಕೊಡಲಾಯಿತು. ಸ್ಥಳೀಯರು, ವಿದ್ಯಾರ್ಥಿಗಳು ಮಣ್ಣಿನ ಗಣಪನನ್ನು ಹೇಗೆ ಮಾಡಬೇಕೆಂದು ಕಲಿತು, ತಮ್ಮ ಸ್ವಕ್ಷೇತ್ರಗಳಲ್ಲಿ ಮಣ್ಣಿನ ಗಣಪ ಕಾರ್ಯಗಾರ ಹಮ್ಮಿಕೊಳ್ಳುವುದು ಇದರ ಮುಖ್ಯ ಉದ್ದೇಶವಾಗಿದೆ. ನಗರದಲ್ಲಿ 100ಕ್ಕೂ ಹೆಚ್ಚು ವಾರ್ಡ್‌ಗಳಲ್ಲಿ ಪ್ರದೇಶಗಳಲ್ಲಿ ಇಂತಹ ಕಾರ್ಯಾಗಾರಗಳು ನಡೆಸಲು ಉದ್ದೇಶಿಸಲಾಗಿದೆ. ಸಂಸದ ಪಿ.ಸಿ.ಮೋಹನ್, ಎಸ್‌ಐಟಿಕೆ ಉಪಾಧ್ಯಕ್ಷ ರಾಜೀವ್‌ಗೌಡ, ಬಿ.ಪ್ಯಾಕ್ ಸಿಇಒ ರೆವತಿ ಅಶೋಕ್ ಮತ್ತಿತರರು ಉಪಸ್ಥಿತರಿದ್ದರು.
ಅನುಮತಿ ನೀಡಲು 63 ಏಕಗವಾಕ್ಷಿ ಕೇಂದ್ರ:
ಬೆಂಗಳೂರು: ಶಾಂತಿಯುತ ಗಣೇಶ ಹಬ್ಬ ಆಚರಣೆಗೆ ಬಿಬಿಎಂಪಿ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಜತೆಗೆ ಗಣೇಶ ಪೆಂಡಾಲ್‌ಗಳಿಗೆ ಅನುಮತಿ ನೀಡಲು 63 ಏಕಗವಾಕ್ಷಿ ಕೇಂದ್ರಗಳನ್ನು ಸ್ಥಾಪಿಸಿದೆ. ಹಾಗೆಯೇ ಪರಿಸರ ಸ್ನೇಹಿ ಗಣೇಶ ಹಬ್ಬಕ್ಕಾಗಿ ವಲಯ ಅಧಿಕಾರಿ ಗಳು ಮುಂಜಾಗ್ರತಾ ಕ್ರಮ ಕೈಗೊಳ್ಳು ವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೂಚನೆ ನೀಡಿದ್ದಾರೆ. ಗಣೇಶ ಮೂರ್ತಿಯ ತಯಾರಿಕೆಗಾಗಿ ಬಳಸುವ ರಾಸಾಯನಿಕ ಬಣ್ಣಗಳು, ಥರ್ಮಾಕೋಲ್ ಹಾಗೂ ಪ್ಲಾಸ್ಟರ್ ಆಫ್ ಪ್ಯಾರೀಸ್‌ಗಳ ಬಳಕೆ ಸಂಪೂರ್ಣವಾಗಿ ನಿಲ್ಲಿಸಿ, ನಿರ್ಬಂಧಿಸುವುದರ ಕುರಿತು ಹಾಗೂ ಈ ರೀತಿಯ ವಸ್ತುಗಳನ್ನು ಬಳಸಿ ತಯಾರಿಕೆಯಾಗುವ ಗಣೇಶ ಮೂರ್ತಿಗಳನ್ನು ವಶಪಡಿಸಿಕೊಂಡು ನಿಯಾಮಾ ನು ಸಾರ ವಿಲೇವಾರಿ ಮಾಡುವ ಕುರಿ ತಂತೆ ಕ್ರಮ ಕೈಗೊಳ್ಳಿ ಎಂದು ಹಿರಿಯ ಅಧಿಕಾರಿಗಳಿಗೆ ತಾಕೀತು ಮಾಡಿ ದ್ದಾರೆ. ಪಾಲಿಕೆ ವ್ಯಾಪ್ತಿಯಲ್ಲಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಹಾಗೂ ಕಾರ್ಯಕ್ರಮ ಆಯೋಜಿಸುವ ಸಂಬಂ ಧ, ಬಿಬಿಎಂಪಿ, ಬೆಸ್ಕಾಂ, ಪೊಲೀಸ್ ಹಾಗೂ ಆಗ್ನಿಶಾಮಕ ಇಲಾಖೆಗಳನ್ನು ಒಳಗೊಂಡಂತೆ 63 ಉಪ ವಿಭಾಗಗಳಲ್ಲಿ ಏಕಗವಾಕ್ಷಿ ಕೇಂದ್ರಗಳ ಮೂಲಕ ಪೂರ್ವಾನುಮತಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದಿದ್ದಾರೆ.
ಮಂಡಳಿಯ ಸಿಬ್ಬಂದಿಗೆ ಸಾಥ್ ನೀಡುವಂತೆ ಬೆಂಗಳೂರು ಪೊಲೀಸ್ ಆಯುಕ್ತರು, ರಾಜ್ಯ ಡಿಜಿಪಿಗೆ ಪತ್ರ ಬರೆಯಲಾಗಿದೆ. ಪರಿಸರಕ್ಕೆ ಹಾನಿಯಾಗುವ ಮಾದರಿಯಲ್ಲಿ ಪಟಾಕಿ ಹೊಡೆಯಲು, ಪಿಓಪಿ ಗಣೇಶ ಕೂರಿಸಲು, ಹೆಚ್ಚಿನ ಶಬ್ದಮಾಲಿನ್ಯ ಉಂಟಾಗುವಂತಹ ಧ್ವನಿವಧìಕ ಹಾಕಲು ಅವಕಾಶ ಕೊಡಬೇಡಿ ಎಂದು ಪೊಲೀಸರಿಗೆ ಮಂಡಳಿ ಕೋರಿಕೊಂಡಿದೆ.-ಯತೀಶ್, ಹಿರಿಯ ಪರಿಸರ ಅಧಿಕಾರಿ. ಕೆಎಸ್‌ಪಿಸಿಬಿ.
– ಅವಿನಾಶ ಮೂಡಂಬಿಕಾನ