Advertisement

Pop Ganesh Murti: ಒಂದೇ ದಿನ 10,248 ಪಿಒಪಿ ಗಣಪನ ವಿಸರ್ಜನೆ

07:37 AM Sep 20, 2023 | Team Udayavani |

ಬೆಂಗಳೂರು: ರಾಜ್ಯಾದ್ಯಂತ ಪ್ಲಾಸ್ಟರ್‌ ಆಫ್ ಪ್ಯಾರೀಸ್‌ (ಪಿಒಪಿ) ಗಣೇಶ ಮೂರ್ತಿ ನಿರ್ಬಂಧಿಸಿದ್ದರೂ ರಾಜ್ಯ ರಾಜಧಾನಿಯೊಂದರಲ್ಲೇ ಬರೊಬ್ಬರಿ 10,248 ಪಿಒಪಿ ಗಣೇಶ ಮೂರ್ತಿ ವಿಸರ್ಜಿಸಿರುವುದು ಚರ್ಚೆಗೀಡಾಗಿದೆ.

Advertisement

ಹಬ್ಬದ ವೇಳೆ ಪ್ಲಾಸ್ಟರ್‌ ಆಫ್ ಪ್ಯಾರಿಸ್‌(ಪಿಒಪಿ) ಗಣಪನ ತಯಾರಿಕೆ, ಮಾರಾಟ, ನೀರಿನಲ್ಲಿ ವಿಸರ್ಜನೆ ಮಾಡಿದರೆ 1 ಲಕ್ಷ ರೂ. ದಂಡ, 5 ವರ್ಷ ಜೈಲು ಶಿಕ್ಷೆ ನೀಡುವುದಾಗಿ ಪರಿಸರ ಖಾತೆ ಸಚಿವ ಈಶ್ವರ್‌ ಖಂಡ್ರೆ ಆದೇಶಿಸಿದ್ದರು. ಸರ್ಕಾರದ ಆದೇಶಕ್ಕೆ ಕಿಮ್ಮತ್ತು ನೀಡದ ಜನರು ಮತ್ತೆ ಪಿಒಪಿ ಗಣೇಶನನ್ನೇ ಪೂಜಿಸಿದ್ದಾರೆ. ಪಿಒಪಿ ಗಣೇಶ ಮೂರ್ತಿಯಿಂದ ಪರಿಸರಕ್ಕೆ ಆಗುವ ಅನಾಹುತಗಳ ಕುರಿತ ಜಾಗೃತಿ ಪ್ರಯೋಜನವಾಗಿಲ್ಲ. ಬೆಂಗಳೂರಲ್ಲಿ ಸೋಮವಾರ 10,248 ಪಿಒಪಿ ಗಣೇಶ ಮೂರ್ತಿ ವಿಸರ್ಜನೆ ಮಾಡಿ ರುವುದಾಗಿ ಬಿಬಿಎಂಪಿ ದೃಢಪಡಿಸಿದೆ.

ಇವರ ವಿರುದ್ಧ ಏಕೆ ಕ್ರಮಕೈ ಗೊಂಡಿಲ್ಲ ಎಂದು ಪರಿಸರ ತಜ್ಞರು ಪ್ರಶ್ನಿಸಿದ್ದಾರೆ. ಬಿಬಿಎಂಪಿ ವ್ಯಾಪ್ತಿ ಸೆ.18ರಂದು ವಿವಿಧೆಡೆ ಒಟ್ಟು 1,53,965 ಗಣೇಶ ಮೂರ್ತಿ ವಿಸರ್ಜಿಸಲಾಗಿದೆ.

ಪಿಒಪಿ ವಿಸರ್ಜನೆಗೆ ಏನು ಶಿಕ್ಷೆ ?: ಪಿಒಪಿ ವಿಗ್ರಹಗಳನ್ನು ಯಾವುದೇ ನೀರಿನ ಮೂಲಗಳಿಗೆ ವಿಸರ್ಜಿಸುವುದು ಕಲಂ 24ರ ಸ್ಪಷ್ಟ ಉಲ್ಲಂಘನೆ. ಅಲ್ಲದೆ, ಕಲಂ 41 ಮತ್ತು 43 ರ ಪ್ರಕಾರ ಶಿಕ್ಷಾರ್ಹವೂ ಹೌದು. ಈ ಅಪರಾಧಕ್ಕೆ ಕನಿಷ್ಠ ಒಂದೂವರೆ ವರ್ಷ ಹಾಗೂ ಗರಿಷ್ಠ 6 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಲು ಅವಕಾಶವಿದೆ. ಇನ್ನು ಪಿಒಪಿ ವಿಗ್ರಹ ಉತ್ಪಾದಿಸಿದರೆ 1986 ರ ಕೇಂದ್ರ ಪರಿಸರ ಸಂರಕ್ಷಣೆ ಕಾಯ್ದೆ ಕಲಂ 15 ರಡಿ ಕೂಡ 1 ಲಕ್ಷ ರೂ. ದಂಡ ಮತ್ತು 5 ವರ್ಷದ ಶಿಕ್ಷೆಗೆ ಅವಕಾಶವಿದೆ. ಆದರೆ, ಸಾರ್ವಜನಿಕರಿಗೆ ತೊಂದರೆ ಯಾಗಬಾರದು ಎಂಬ ಕಾರಣಕ್ಕೆ ಅಲ್ಲಲ್ಲಿ ಪಿಒಪಿ ಗಣೇಶ ಮೂರ್ತಿ ತಯಾರಿಸುವ ಘಟಕಗಳಿಗೆ ದಾಳಿ ನಡೆಸಿರುವುದು ಹೊರತು ಪಡಿಸಿದರೆ ಕಠಿಣ ಕ್ರಮಕೈಗೊಂಡಿಲ್ಲ ಎಂದು ತಜ್ಞರು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next