Advertisement
ತಮ್ಮ ಕಚೇರಿ ಸಭಾಂಗಣದಲ್ಲಿ ನಡೆದ ಗಣೇಶ ಚತುರ್ಥಿ ಹಾಗೂ ಇತರೆ ಹಬ್ಬಗಳ ಕುರಿತ ಮುನ್ನೆಚರಿಕೆ ಕ್ರಮದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡದರು. ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಬ್ರಿಟಿಷರ ವಿರುದ್ಧ ಹೊರಾಡಲು ಬಾಲಗಂಗಾಧರನಾಥ ತಿಲಕರು ಎಲ್ಲಾ ಧರ್ಮದವರನ್ನುಒಗ್ಗೂಡಿಸಲು ಗಣೇಶ ಚತುರ್ಥಿಯನ್ನು ಪ್ರಾರಂಭಿಸಿದರು ಎಂದರು. ಪ್ಲಾಸ್ಟರ್ ಆಫ್ ಪ್ಯಾರೀಸ್ ಹಾಗೂ ರಾಸಾನಿಕಯುಕ್ತ ಸಿಂಥೆಟಿಕ್ ಬಣ್ಣಗಳ ಗಣಪತಿ ವಿಗ್ರಹಗಳನ್ನು ಪ್ರತಿಷ್ಠಾಪನೆ ಮಾಡಿ ಅವುಗಳನ್ನು ಕೆರೆ ಕಟ್ಟೆಗಳಲ್ಲಿ, ನದಿಗಳಲ್ಲಿ ವಿಸರ್ಜನೆ ಮಾಡುವುದರಿಂದ ನೀರು ಕಲುಷಿತಗೊಂಡು ಪಶು,
ಪಕ್ಷಿ, ಪ್ರಾಣಿ ಹಾಗೂ ಜಲಚರಗಳ ಜೀವಕ್ಕೆ ಕುತ್ತು ಉಂಟಾಗುವುದರ ಜೊತೆಗೆ ಸಾರ್ವಜನಿಕರ ಆರೋಗ್ಯಕ್ಕೆ ದಕ್ಕೆಯಾಗುತ್ತದೆ. ಬಣ್ಣವಿಲ್ಲದ, ಗಾತ್ರದಲ್ಲಿ ಚಿಕ್ಕದಾದ ರಾಸಾಯನಿಕ ಬಳಕೆ ಇಲ್ಲದ ಪರಿಸರ ಸ್ನೇಹಿ ಗಣಪತಿ ವಿಗ್ರಹಗಳನ್ನು ಪ್ರತಿಸ್ಥಾಪನೆ ಮಾಡಲು ಮುಂದಾಗಬೇಕು ಎಂದರು. ಗಣಪತಿ ವಿಗ್ರಹಗಳ ವಿಸರ್ಜನೆ ಸಮಯದಲ್ಲಿ ಸ್ಥಳೀಯ ಸಂಸ್ಥೆಗಳು ನಿಗಧಿ ಪಡಿಸಿರುವ ಸ್ಥಳಗಳಲ್ಲಿ ಅವುಗಳನ್ನು ವಿಸರ್ಜಸಬೇಕು. ಗಣಪತಿ ಪೆಂಡಾಲ್‌ಗಳಲ್ಲಿ ಕರ್ಕಶವಾದ ಶಬ್ದ ಹೊರಡಿಸುವ ಧ್ವನಿ ವರ್ಧಕಗಳನ್ನು ಬಳಸಬಾರದು ಎಂದು ಹೇಳಿದರು.