ಉಡುಪಿ: ಪೂರ್ಣಪ್ರಜ್ಞ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ತನ್ನ ಹೊಸ ಪ್ರಸ್ತಾವನೆ ಯುವ ಪ್ರಜ್ಞಾ 2024-ಯುತ್ ಆಫ್ ವಾಯ್ಸ ಪಿಐಎಂ ಅಡಿಯಲ್ಲಿ ಕೇಂದ್ರ ಬಜೆಟ್ ವಿಶ್ಲೇಷಣೆ ನಡೆಸಲಾಯಿತು.
ಪಿಐಎಂನ ಎಂಬಿಎ, ಎಂಸಿಎ ವಿದ್ಯಾರ್ಥಿಗಳು ಬಜೆಟ್‌ನ ವಿಶ್ಲೇಷಣೆ ನಡೆಸಿ, ಪ್ರತಿಯೊಂದು ಬಜೆಟ್‌ನ ಭಾಗವನ್ನು 6 ತಂಡಗಳು ವಿಶ್ಲೇಷಣೆ ಮಾಡಿದರು.
ವಿದ್ಯಾರ್ಥಿಗಳು ಬಜೆಟ್‌ನ್ನು ರಚನಾತ್ಮಕ, ಪೂರಕ ಮತ್ತು ದೃಷ್ಟಿಕೋನಾತ್ಮಕ ಬಜೆಟ್ ಎಂದು ಪ್ರಶಂಸಿದರು. ವಿಶ್ಲೇಷಣೆಯನ್ನು ಹಿರಿಯ ತಜ್ಞರ ಸಮಿತಿ ಮತ್ತಷ್ಟು ಸಮೃದ್ಧಗೊಳಿಸಿತು.
ಬಜೆಟ್‌ನ ತೆರಿಗೆ ಮತ್ತು ಜಿಎಸ್‌ಟಿ ಅಂಶಗಳ ಬಗ್ಗೆ ಸಂಕ್ಷಿಪ್ತ ಮತ್ತು ವಿಶ್ಲೇಷಕ ಪರಿಚಯವನ್ನು ಸಿಎ ಲೋಕೇಶ್ ಶೆಟ್ಟಿ, ಬಜೆಟ್‌ನ ಸಕಾರಾತ್ಮಕ ಮತ್ತು ನಕಾರಾತ್ಮಕ ಅಂಶಗಳ ಪ್ರಸ್ತುತಿಯನ್ನು ಡಾ| ವಿಜಯೇಂದ್ರ ರಾವ್, ಬಜೆಟ್‌ನ ಬೇರೆ ಬೇರೆ ಅವಕಾಶಗಳ ಬಗ್ಗೆ ವಿಶ್ಲೇಷಣೆಯನ್ನು ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ನಿರ್ದೇಶಕ ಲಕ್ಷ್ಮಣ್ ಶೆಣೈ, ಹಿಂದಿನ ಬಜೆಟ್‌ನೊಂದಿಗೆ ವಿವರವಾದ ಹೋಲಿಕೆಯನ್ನು ಪತ್ರಕರ್ತ ಎಸ್.ಜಿ. ಕುರ್ಯ, ಬಜೆಟ್‌ನ ಮಾನವೀಯ ಭಾಗದ ಬಗ್ಗೆ ಪಿಐಎಂನ ಹಿರಿಯ ಪ್ರಾಧ್ಯಾಪಕ ಡಾ| ವಿನಯ ಪ್ರಭು ಪ್ರಸ್ತುತಪಡಿಸಿದರು.
ಪಿಐಎಂನ ನಿರ್ದೇಶಕ ಡಾ| ಶ್ರೀರಮಣ ಐತಾಳ್ ಅಧ್ಯಕ್ಷತೆ ವಹಿಸಿದ್ದರು. ಪಿಐಎಂನ ಎಂಬಿಎ ವಿದ್ಯಾರ್ಥಿಗಳ ವಿತ್ತ ವಿಭಾಗದ ಯುವ ಪ್ರಜ್ಞ ಯುತ್ ಆಫ್ ವಾಯ್ಸ ಪಿಐಎಂ ಅಡಿಯಲ್ಲಿ ಆಯೋಜಿಸಲಾದ ಕಾರ್ಯಕ್ರಮವು ಕೇಂದ್ರ ಸರಕಾರದ ವ್ಯಾಪಾರ, ಕೈಗಾರಿಕೆ ಮತ್ತು ನೀತಿ ವಿಷಯಗಳಲ್ಲಿ ಯುವಜನರ ದೃಷ್ಟಿಕೋನವನ್ನು ಸಮರ್ಥಿಸುವ ವೇದಿಕೆಯನ್ನು ಒದಗಿಸಿತು. ತಜ್ಞರ ವಿಭಿನ್ನ ಅಂಶಗಳು ಕೇಂದ್ರ ಬಜೆಟ್-2024ರ ವಿಶ್ಲೇಷಣೆಯನ್ನು ಒಳಗೊಂಡಿತ್ತು.
ಸಂಸ್ಥೆಯ ಶೈಕ್ಷಣಿಕ ಸಂಯೋಜಕಿ ಡಾ| ಭಾರತಿ ಕಾರಂತ್ ಸ್ವಾಗತಿಸಿದರು. ದ್ವಿತೀಯ ಎಂಬಿಎ ವಿದ್ಯಾರ್ಥಿನಿಯರಾದ ಅಶ್ವಿನಿ ಕಾರ್ಯಕ್ರಮ ಸಂಯೋಜಿಸಿ, ಹರ್ಷಪ್ರದಾ ವಂದಿಸಿದರು.