Advertisement
ಈ ರಸ್ತೆ ಜಿಲ್ಲಾ ಪಂಚಾಯತ್ ರಸ್ತೆಯಾಗಿದ್ದು, ಪರಿಶಿಷ್ಟ ಪಂಗಡದ 25 ಲಕ್ಷ ರೂ. ಅನುದಾನದಲ್ಲಿ ಉಲ್ಲಗುಡ್ಡೆ ರಸ್ತೆಯನ್ನು ಕಾಂಕ್ರೀಟ್ ಕಾಮಗಾರಿಗೆ ಸೋಮವಾರ ಆರಂಭವಾಗಿತ್ತು. ಮಂಗಳವಾರ ಬೆಳಗ್ಗೆ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ, ಕರ್ನಾಟಕ -ಕೇರಳ, ದಲಿತ ಸ್ವಾಭಿಮಾನ ಹೋರಾಟ ಸಮಿತಿ ಹಾಗೂ ಅಲ್ಲಿನ ಗ್ರಾಮಸ್ಥರು ಆ ಕಾಮಗಾರಿ ಕಳಪೆ ಕಾಮಗಾರಿಯಾಗಿದೆ ಎಂದು ತಡೆದಿದ್ದಾರೆ.
ಈ ರಸ್ತೆಯೂ ಉಪಯೋಗಕ್ಕೆ ಯೋಗ್ಯವಾಗಿದ್ದು. ಇದನ್ನು ಕಾಂಕ್ರೀಟ್ ಮಾಡುವ ಅಗತ್ಯವಿರಲಿಲ್ಲ. ಈ ಪ್ರದೇಶದಲ್ಲಿ ಪರಿಶಿಷ್ಟ ಪಂಗಡದ ಮೂರು ಮನೆಗಳು ದುಃ ಸ್ಥಿತಿಯಲ್ಲಿವೆ. ಆ ಹಣವನ್ನು ಇದಕ್ಕಾಗದರೂ ಉಪಯೋಗಿಸಬಹುದಿತ್ತು. 3 ವರ್ಷಗಳ ಹಿಂದೆ ಈ ಮನೆಗಳ ರಿಪೇರಿಗೆ ಗ್ರಾಮ ಪಂಚಾಯತ್‌ಗೆ ಅರ್ಜಿ ನೀಡಿಲಾಗಿದೆ. ಪಂಚಾಯತ್ ಮನೆಯ ಜಾಗ ನಿಮ್ಮ ಹೆಸರಿನಲ್ಲಿಲ್ಲ. ಇದರಿಂದ ರಿಪೇರಿ ಮತ್ತು ಹೊಸ ಮನೆ ನಿರ್ಮಾಣ ಸಾಧ್ಯವಿಲ್ಲ. ಎಂದು ಹೇಳಿದೆ. ನಾವು ಕಳೆದ 40 ವರ್ಷಗಳಿಂದ ವಾಸವಾಗಿದ್ದೇವೆ. ಇಲ್ಲಿ ನಾಲ್ಕು ಮನೆಗಳಿದ್ದು ಒಂದು ಬಿದ್ದು ಹೋಗಿದೆ. ಅಲ್ಲಿಯವರು ನಮ್ಮ ಮನೆಯಲ್ಲಿದ್ದಾರೆ. ಎಂದು ಅಲ್ಲಿನ ನಿವಾಸಿ ಉಷಾ ತಿಳಿಸಿದ್ದಾರೆ. ಅವರ ಮನೆಯಲ್ಲಿ ಎರಡು ಕುಟುಂಬಗಳು ವಾಸವಾಗಿದ್ದಾರೆ. ಒಟ್ಟು 9 ಮಂದಿದ್ದಾರೆ. ಮೀನಾ ಮನೆಯಲ್ಲಿ 4 ಮಂದಿ ಮತ್ತು ಗುರುವ ಅವರ ಮನೆಯಲ್ಲಿ ಮೂರು ಮಂದಿದ್ದಾರೆ. ಮೀನಾ ಅವರ ಮನೆ ಈಗಾಗಲೇ ಬೀಳುವ ಸ್ಥಿತಿಯಲ್ಲಿವೆ.
Related Articles
ಈ ಮೂರು ಮನೆಗೆ ಈಗ ಒಂದೇ ಶೌಚಾಲಯವಿದೆ. ಬೇರೆ ಮನೆಗಳ ಶೌಚಾಲಯಗಳು ಉಪಯೋಗಕ್ಕಿಲ್ಲದ ಪರಿಸ್ಥಿತಿಯಲ್ಲಿದೆ. ಪಂಚಾಯತ್ ರೀಪೇರಿಗೆ 15 ಸಾವಿರ ರೂ. ಕೊಡುತ್ತದೆ ಎಂದು ಹೇಳಿದ್ದರು. 25 ಸಾವಿರ ಖರ್ಚಾಗಿದೆ. ಬಾಕಿ 10 ಸಾವಿರ ರೂ. ನಮ್ಮಲ್ಲಿಲ್ಲ ಎಂದು ಉಷಾ ಹೇಳಿದ್ದಾರೆ.
Advertisement
ಉಪಯೋಗಕ್ಕೆ ಯೋಗ್ಯವಾದ ರಸ್ತೆಯನ್ನು ಅಗೆದು, ಅದನ್ನು ಅಲ್ಲಿಯೇ ಹಾಕಿ. ಅದರ ಮೇಲೆ ಬೆಡ್ ಹಾಕದೇ ನೇರವಾಗಿ ಕಾಂಕ್ರೀಟ್ ಹಾಕಲಾಗಿದೆ. 6 ಇಂಚಿನ ಕಾಂಕ್ರೀಟ್ ಕಾಮಗಾರಿ ಕಳಪೆಯಾಗಿದ್ದು, ಅದು ಈಗಾಲೇ ಎದ್ದು ಹೋಗುವ ಪರಿಸ್ಥಿತಿಯಲ್ಲಿದೆ ಎಂದು ನಾವು ಕಾಮಗಾರಿಯನ್ನು ತಡೆದಿದ್ದೇವೆ ಎಂದು ಸಂಘಟನೆ ಹಾಗೂ ಗ್ರಾಮಸ್ಥರು ತಿಳಿಸಿದ್ದಾರೆ.
ಫೋಟೋ ತೆಗೆಸಿದರುಪಂಚಾಯತ್ ಸದಸ್ಯರು ಈ ರಸ್ತೆ ಹಾಳಾಗಿದೆ ಎಂದು ಹೇಳಿ ನಮ್ಮನ್ನು ನಿಲ್ಲಿಸಿ ಫೋಟೋ ತೆಗೆಸಿದರು. ರಸ್ತೆಗೆ ಬಂದ ಹಣ ಇಲ್ಲದಿದ್ದರೆ ಹಿಂದೆ ಹೋಗುತ್ತದೆ. ನಿಮ್ಮ ಮನೆ ಬೇರೆ ಅನುದಾನದಲ್ಲಿ ರಿಪೇರಿ ಮಾಡಿಸುವ ಎಂದು ಹೇಳಿದ್ದಾರೆ ಎಂದು ಉಪಾ ಪತ್ರಿಕೆಗೆ ತಿಳಿಸಿದ್ದಾರೆ.