Advertisement

ಅಂಗನವಾಡಿ ಕಟ್ಟಡದಲ್ಲಿ ಕಳಪೆ ಕಾಮಗಾರಿ?

03:28 PM May 03, 2019 | Suhan S |

ದೋಟಿಹಾಳ: ಹೈದರಾಬಾದ್‌ ಕರ್ನಾಟಕ ಪ್ರದೇಶಿಕ ಅಭಿವೃದ್ಧಿ ಮಂಡಳಿಯವರು ಹೊಸ ಅಂಗನವಾಡಿ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ಅಪಾರ ಅನುದಾನ ಬಿಡುಗಡೆ ಮಾಡುತ್ತಿದ್ದರೂ ಗುತ್ತಿಗೆ ಪಡೆದ ಗುತ್ತಿಗೆದಾರರು ಗುಣಮಟ್ಟದ ಕೆಲಸ ಮಾಡದೇ ಕಳಪೆ ಕಾಮಗಾರಿಗೆ ಬಿಜಕಲ್ ಗ್ರಾಮದ ಒಂದನೇ ಅಂಗನವಾಡಿ ಕೇಂದ್ರ ತಾಜ ಉದಾಹರಣೆಯಾಗಿದೆ.

Advertisement

ಬಿಜಕಲ್ ಗ್ರಾಮದ ಒಂದನೇ ಅಂಗನವಾಡಿ ಕೇಂದ್ರದ ಬಾಗಿಲು ತೆರದು ಅಂಗನವಾಡಿ ಕಾರ್ಯಕರ್ತೆ ಮಕ್ಕಳನ್ನು ಒಳಗಡೆ ಕರೆದುಕೊಂಡು ಹೋಗವಾಗ ಕಟ್ಟಡ ಮೇಲ್ಛಾಣಿಗೆ (ಸೀಲಿಂಗ್‌) ಕೆಳಗೆ ಬಿದಿದ್ದೆ. ಕೂದಲೆಳೇ ಅಂತರದಲ್ಲಿ ಸಣ್ಣ ಮಕ್ಕಳು ಬಚಾವ್‌ ಆಗಿರುವ ಘಟನೆ ಈಚೆಗೆ ನಡೆದಿದೆ. ಕೂಡಲೇ ಕೇಂದ್ರ ಸುತ್ತಮುತ್ತಲಿದ್ದ ಗ್ರಾಮಸ್ಥರು ಓಡಿ ಬಂದು ಮಕ್ಕಳನ್ನು ಪಕ್ಕದ ಹಳೇ ಕಟ್ಟಡದಲ್ಲಿ ಕೂರಿಸುವಂತೆ ತಿಳಿಸಿದ್ದಾರೆ.

ಬಿಜಕಲ್ ಗ್ರಾಮದ ಪ್ರಾಥಮಿಕ ಶಾಲಾ ಆವರಣದಲ್ಲಿ ನೂತನ ಅಂಗನವಾಡಿ ಕಟ್ಟಡವನ್ನು 2016-17 ಸಾಲಿನ ಹೈದ್ರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಮೈಕ್ರೊ ಯೋಜನೆಯಲ್ಲಿ ಸುಮಾರು 13.75 ಲಕ್ಷ ರೂಪಾಯಿಯ ವೆಚ್ಚದಲ್ಲಿ ಜಿಲ್ಲಾ ಲ್ಯಾಂಡ್‌ ಆರ್ಮಿ ಇಲಾಖೆಯವರು ನಿರ್ಮಾಣ ಮಾಡಿ ಕಳೆದ ನವೆಂಬರ್‌ನಲ್ಲಿ ಉದ್ಘಾಟನೆ ಮಾಡಲಾಗಿದೆ. ಈ ಕೇಂದ್ರದಲ್ಲಿ ಸುಮಾರು 56 ಮಕ್ಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ.

ಕಳಪೆ ಕಾಮಗಾರಿ: ಅಂಗನವಾಡಿ ಕೇಂದ್ರ ಉದ್ಘಾಟನೆಗೊಂಡ ನಾಲ್ಕೈದು ತಿಂಗಳಲ್ಲೇ ಕಟ್ಟಡದ ಮೇಲ್ಛಾಣಿ ಕುಸಿದು ಬಿದ್ದಿದೆ. ಸಂಬಂಧಿಸಿದ ಅಧಿಕಾರಿಗಳು ಕಟ್ಟಡದ ಕಾಮಗಾರಿ ಗುಣಮಟ್ಟ ಪರಿಶೀಲಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಕೇಂದ್ರದ ಕಟ್ಟಡ ಕಾಮಗಾರಿ ಕೆಲಸ ಮಾಡಿದವರಿಗೆ ಇದರ ಬಗ್ಗೆ ಗಮನಕ್ಕೆ ತಂದರೂ ಅವರು ಕಿವಿಗೊಂಡಲ್ಲಿಲ್ಲ. ಇಂದು ಕೇಂದ್ರದ ಬಾಗಿಲ ತೆಗೆದು ಒಳಗೆ ಹೋಗುವ ವೇಳೆ ಮೇಲ್ಛಾವಣಿಯ ಸೀಲಿಂಗ್‌ ಉದುರಿಬಿದ್ದತು. ಇಂಹತ ಕಟ್ಟಡದಲ್ಲಿ ಸಣ್ಣ ಮಕ್ಕಳನ್ನು ಕೂಡಿಸಿಕೊಂಡು ಪಾಠ ಮಾಡುವುದು ಕಷ್ಟವಾಗುತ್ತಿದೆ. ಹೀಗಾಗಿ ಸದ್ಯ ಪಕ್ಕ ಹಳೇ ಕಟ್ಟಡದಲ್ಲಿ ಕೇಂದ್ರವನ್ನು ಆರಂಭಿಸುತ್ತೇವೆ. ಅಧಿಕಾರಿಗಳು ಬಂದು ಸೂಕ್ತ ಕೈಗೊಂಡ ಮೇಲೆ ಈ ಕೇಂದ್ರಕ್ಕೆ ಬರುತ್ತೇವೆ ಎಂದು ಅಂಗನವಾಡಿ ಕಾರ್ಯಕರ್ತೆ ಗೀತಾ ಕುಲಕರ್ಣಿ ತಿಳಿಸಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next