ಬೈಲಹೊಂಗಲ: ಚಿಕ್ಕಬೆಳ್ಳಿಕಟ್ಟಿ ಹಾಸ್ಟೇಲ್ನ ಶೌಚಾಲಯ, ಕಂಪೌಂಡ್, ಅಡುಗೆ ಕೋಣೆ ದುರಸ್ತಿ ಕಾರ್ಯ ಆಮೆ ಗತಿಯಲ್ಲಿದ್ದು, ಗೋಡೆಗಳು ಬಿರುಕು ಬಿಟ್ಟು ಕಳಪೆ ಕಾಮಗಾರಿ ಮಾಡಲಾಗಿದೆ ಎಂದು ತಾಪಂ ಮಾಜಿ ಉಪಾಧ್ಯಕ್ಷ ಬಸನಗೌಡ ಪಾಟೀಲ ಆರೋಪಿಸಿದರು.
ತಾಲೂಕ ಪಂಚಾಯತ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿ, ವಕ್ಕುಂದ ಹಾಸ್ಟೇಲ್ ಅಡುಗೆ ಕೋಣೆ ದುರಸ್ತಿ ಕಾರ್ಯ ಪೂರ್ಣಗೊಂಡಿಲ್ಲ. ಇದಕ್ಕೆ ಸಮಾಜ ಕಲ್ಯಾಣ ಅಧಿಕಾರಿಗಳ, ಎಂಜಿನಿಯರ್ ನಿರ್ಲಕ್ಷವೇ ಕಾರಣವಾಗಿದೆ ಎಂದು ದೂರಿದರು.
ಈ ವೇಳೆ ತಾಪಂ ಇಒ ಸಮೀರ್ ಮುಲ್ಲಾ ಮಾತನಾಡಿ, ಶೀಘ್ರದಲ್ಲೆ ಚಿಕ್ಕಬೆಳ್ಳಿಕಟ್ಟಿ, ವಕ್ಕುಂದ ಹಾಸ್ಟೇಲ್ಗಳಿಗೆ ಭೇಟಿ ನೀಡಿ, ಪರಿಶೀಲಿಸಿ ಎಂಜಿನಿಯರ್ ಮೇಲೆ ನೋಟೀಸ್ ನೀಡಿ, ಕ್ರಮ ಜರುಗಿಸಲಾಗುವುದು ಎಂದರು.
ಸಮಾಜ ಕಲ್ಯಾಣಾಧಿಕಾರಿ ಮಹೇಶ ಉಣ್ಣಿ ಮಾತನಾಡಿ, ಚಿಕ್ಕಬೆಳ್ಳಿಕಟ್ಟಿ, ವಕ್ಕುಂದ ಹಾಸ್ಟೇಲ್ಗಳ ದುರಸ್ತಿ ಕಾರ್ಯ ಶೀಘ್ರದಲ್ಲೆ ಮುಗಿಸಲು ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ತಿಳಿಸಿದರು.
ತಾಪಂ ಸದಸ್ಯ ಸಂಗಯ್ನಾ ದಾಬಿಮಠ ಮಾತನಾಡಿ, ಬೈಲಹೊಂಗಲ-ದೊಡವಾಡ ಮಾರ್ಗದ ಬಸ್ ವ್ಯವಸ್ಥೆ ಸರಿ ಇಲ್ಲ. ಸಾರಿಗೆ ಸಂಸ್ಥೆಯ ಘಟಕ ವ್ಯವಸ್ಥಾಪಕರು ಬಸ್ ವ್ಯವಸ್ಥೆ ಸರಿಪಡಿಸಬೇಕು ಎಂದು ಒತ್ತಾಯಸಿದರು.
ತಾಪಂ ಅಧ್ಯಕ್ಷೆ ನೀಲವ್ವ ಫಕೀರನವರ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಉಪಾಧ್ಯಕ್ಷ ಮಲ್ಲನಾಯ್ಕ ಭಾವಿ, ತಾಲೂಕಾ ವೈದ್ಯಾಧಿಕಾರಿ ಡಾ| ಎಸ್.ಎಸ್. ಸಿದ್ದನ್ನವರ, ತಾ.ಪಂ.ಸದಸ್ಯ ಗೌಸಸಾಬ ಬುಡ್ಡೇಮುಲ್ಲಾ ಹಾಗೂ ತಾಲೂಕಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ತಾ.ಪಂ.ಸದಸ್ಯರು ಉಪಸ್ಥಿತರಿದ್ದರು.