Advertisement

ಕಳಪೆ ಕಾಮಗಾರಿ: ರೈಲ್ವೇ ಮೇಲ್ಸೇತುವೆ ಕುಸಿಯುವ ಭೀತಿ

05:21 PM Oct 10, 2022 | Team Udayavani |

ಹೊಳೆನರಸೀಪುರ: ತಾಲೂಕಿನ ಹಂಗರಹಳ್ಳಿ ರೈಲ್ವೇ ಮೇಲ್ಸೇತುವೆ 1.25 ಕೋಟಿ ವೆಚ್ಚದಲ್ಲಿ ದುರಸ್ತಿ ಗೊಳಿಸಿ ಬೆರಳೆಣಿಕೆ ತಿಂಗಳುಗಳ ಅಂತರದಲ್ಲಿ ಮತ್ತೆ ಕುಸಿಯುತ್ತಾ ಅಪಾಯದ ಮುನ್ಸೂಚನೆ ನೀಡುತ್ತಿದೆ. ಹೊಳೆನರಸೀಪುರ ಪಟ್ಟಣದಿಂದ ಹಾಸನಕ್ಕೆ ತೆರಳುವ ತಾಲೂಕಿನ ಹಂಗರಹಳ್ಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣಗೊಂಡು ಕೆಲವೇ ವರ್ಷಗಳಾಗಿದೆ.

Advertisement

ಈ ಸೇತುವೆ ನಿರ್ಮಾಣದ ಹಂತದಲ್ಲೆ ನಾಲ್ಕಾರು ಭಾರಿ ಕುಸಿದು ಅವಾಂತರಕ್ಕೆ ಕಾರಣಾಗಿತ್ತು.ಆದರೆ ಅಂತು ಇಂತೂ ಸೇತುವೆಯೇನೋ ಸಿದ್ದವಾಗಿ ಎಲ್ಲ ರೀತಿಯ ವಾಹನಗಳ ಸಂಚಾರ ಆರಂಭದಲ್ಲಿ ಎಲ್ಲವು ಸುಖಕರವಾಗಿತ್ತು. ಆದರೆ, ಮೇಲ್ಸೆತುವೆ ಕಾಮಗಾರಿ ಗುಣಮಟ್ಟವಿಲ್ಲದೆ ಹೋಗಿದ್ದರಿಂದ ಕೆಲವೇ ತಿಂಗಳುಗಳಲ್ಲಿ ರಸ್ತೆಗುಂಡಿ ಬಿಳುವ ಹಂತ ತಲುಪಿದೆ. ರಸ್ತೆಗೆ ಹಾಕಿದ್ದ ಕಾಂಕ್ರಿಟ್‌ ಸಂಪೂರ್ಣವಾಗಿ ಕುಸಿಯಲಾರಂಭಿಸಿದೆ. ಈ ರಸ್ತೆಯಲ್ಲಿ ಭಾರೀ ವಾಹನಗಳು ಓಡಾಡಲು ಮೀನಮೇಷ ಎಣಿಸುವಂತೆ ಆಗಿದ್ದರಿಂದ ಜೊತೆಗೆ ರಸ್ತೆಗೆ ಹಾಕಿದ್ದ ಕಾಂಕ್ರಿಟ್‌ ಕಿತ್ತು ಹೋಗಿ ರಸ್ತೆ ಗುಂಡಿಮಯವಾಗಿ ವಾಹನ ಸವಾರರ ಓಡಾಡಕ್ಕೆ ತೀವ್ರ ಅಡಚಣೆಗೆ ಕಾರಣವಾಯಿತು.

ಮೇಲ್ಸೇತುವೆ ದುರಸ್ತಿಗೆ 1.25 ಕೋಟಿ ವೆಚ್ಚ: ಇದನ್ನು ಮನಗಂಡು ಜಿಲ್ಲೆಯ ಪ್ರಭಾವಿ ಜನಪ್ರತಿ ನಿಧಿಗಳ ಆಸಕ್ತಿಯಿಂದ ಕಳೆದ ಜನವರಿಯಲ್ಲಿ ಇದರ ದುರಸ್ತಿಗೆ ಅಂದಾಜು 1.25 ಕೋಟಿ ಕ್ರೀಯಾಯೋಜನೆ ಮೇಲೆ ಮೇಲ್ಸೇತುವೆ ದುರಸ್ತಿ ಕಾರ್ಯ ಆರಂಭಗೊಂಡು ಸುಮಾರು ಒಂದು ತಿಂಗಳ ಕಾಲ ಈ ರಸ್ತೆಯನ್ನು ಮುಚ್ಚಿ ವಾಹನಗಳ ಸಂಚಾರಕ್ಕೆ ಬೇರೊಂದು ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಲಾಯಿತು. ಆದರೆ, ಈ ಮೇಲ್ಸೇತುವೆ ನಿರ್ಮಾಣಕ್ಕೆ ಸುಮಾರು 35 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಕೆಲವೇ ದಿನಗಳಲ್ಲಿ ಪುನಃ ಇದೀಗ ಈ ರಸ್ತೆ ಕುಸಿಯಲಾರಂಭಿಸಿದೆ. ರಸ್ತೆ ಮಧ್ಯೆ ಗುಂಡಿಗಳು ಬೀಳ ತೊಡಗಿವೆ.

ಮಳೆ ನೀರು ಆವೃತ: ರಸ್ತೆ ಕ್ರಮಬದ್ಧವಾಗಿರದೆ ಏರಿಳಿತಗಳು ಕಾಣಿಸಿಕೊಳ್ಳಲಾರಂಬಿಸಿದೆ. ಈ ಮೇಲ್ಸೇತುವೆಯಲ್ಲಿನ ರಸ್ತೆ ಪಕ್ಕದಲ್ಲಿ ಮಳೆ ನೀರು ಹೊರ ಹೋಗಲು ಇರಬೇಕಾದ ಯಾವೊಂದು ತೂಬುಗಳು ಇಲ್ಲದೆ ಹೋಗಿರುವು ದರಿಂದ ಮಳೆ ನೀರು ಹೊರಹೋಗದ ಕಾರಣ ಸೇತುವೆಗೆ ಹಾಕಿರುವ ಡಾಂಬರ್‌ ರಸ್ತೆ ಕಿತ್ತು ಹಳ್ಳಗಳು ಬೀಳತೊಡ ಗಿದೆ. ಇದನ್ನು ಇದೇ ರೀತಿ ಬಿಟ್ಟರೆ ವಾಹನಗಳ ಓಡಾಟವಿರಲಿ, ದಿನ ನಿತ್ಯ ಅಫಘಾತದ ಜೋನ್‌ ಆಗಲಿದೆ ಎಂಬುದು ವಾಹನ ಚಾಲಕರ ಅನಿಸಿಕೆ ಆಗಿದೆ. ರೈಲ್ವೆ ಇಲಾಖೆ ಈ ರಸ್ತೆ ಬಗ್ಗೆ ತುರ್ತು ಗಮನ ಹರಿಸದೇ ಹೋದಲ್ಲಿ ಜೀವಗಳ ಹಾನಿಗೆ ಆಗುವ ಸಂಭವವಿದೆ. ಈ ರಸ್ತೆ ಬಗ್ಗೆ ಜಿಲ್ಲೆಯ ಪ್ರಭಾವಿತ ಜನ ಪ್ರತಿನಿಧಿಗಳು ಕ್ರಮಕೈಗೊಂಡು ಮುಂದೆ ಆಗಬಹುದಾದ ಜೀವ ಹರಣಗಳನ್ನು ತಡೆಯವರೆ ಎಂಬುದನ್ನು ಕಾದು ನೋಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next