ಅಜೆಕಾರು: ಕಾರ್ಕಳ -ಉಡುಪಿ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯ ಅಭಿವೃದ್ಧಿ ಕಾಮಗಾರಿ ಕಳೆದ 3 ತಿಂಗಳುಗಳ ಹಿಂದೆ ನಡೆದಿದ್ದು ನೀರೆ ಜಡ್ಡಿನಂಗಡಿ ಬಳಿ ಮತ್ತೆ ಹೊಂಡಗಳು ನಿರ್ಮಾಣಗೊಂಡಿವೆ.
ಮೊದಲ ಮಳೆಗಾಲದಲ್ಲಿಯೇ ರಸ್ತೆ ಯಲ್ಲಿ ಇಷ್ಟು ಹೊಂಡಗಳು ಉಂಟಾದರೆ,ಮುಂದಿನ ದಿನಗಳಲ್ಲಿ ರಸ್ತೆಯ ಸ್ಥಿತಿ ಯಾವ ರೀತಿ ಇರಬಹುದೆಂದು ವಾಹನ ಸವಾರರು ಕಾಮಗಾರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನೀರೆ ಜಡ್ಡಿನಂಗಡಿ ಬಳಿ ಸುಮಾರು 200 ಮೀಟರ್ ವ್ಯಾಪ್ತಿಯಲ್ಲಿ ಹೊಂಡಗಳು ನಿರ್ಮಾಣವಾಗಿದ್ದು ಮಳೆ ನೀರು ಈ ಹೊಂಡಗಳಲ್ಲಿ ತುಂಬಿಕೊಂಡಿ ರುವುದರಿಂದ ವಾಹನಗಳು ನಿತ್ಯ ಅಪಘಾತಕ್ಕಿಡಾಗುತ್ತಿವೆ. ಇದು ಉಡುಪಿ ಕಾರ್ಕಳ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿ ರುವುದರಿಂದ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚಾರ ನಡೆಸುತ್ತವೆ. ಹೊಂಡಗಳನ್ನು ತ್ವರಿತವಾಗಿ ಮುಚ್ಚುವ ಕೆಲಸ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಮಳೆ ಬಂದ ಸಂದರ್ಭ ರಸ್ತೆ ಡಾಮರು ಕಾಮಗಾರಿ ನಡೆಸಿರುವುದರಿಂದ ಈಗ ರಸ್ತೆಯ ಡಾಮರು ಕಿತ್ತು ಹೋಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಬೈಲೂರು ಪಳ್ಳಿ ಕ್ರಾಸ್‌ನಿಂದ ಗುಡ್ಡೆಯಂಗಡಿ ವರೆಗೆ ಮಳೆಗಾಲದ ಮೊದಲು ರಸ್ತೆ ಡಾಮರು ಕಾಮಗಾರಿ ಹಲವೆಡೆ ಗುಂಡಿಗಳು ಬಿದ್ದಿರುವುದರಿಂದ ದ್ವಿಚಕ್ರ ವಾಹನಗಳು ಅಪಘಾತಕ್ಕೊಳಗಾಗುತ್ತಿವೆ. ತ್ವರಿತವಾಗಿ ಹೊಂಡಗಳನ್ನು ಮುಚ್ಚುವ ಕಾರ್ಯ ಮಾಡಿದ್ದಲ್ಲಿ ರಸ್ತೆ ಸಂಪೂರ್ಣ ಹಾಳಾಗುವುದನ್ನು ತಡೆಯಬಹುದಾಗಿದೆ.
– ಶಂಕರ್ ಶೆಟ್ಟಿ, ನೀರೆ
ರಸ್ತೆಯಲ್ಲಿರುವ ಗುಂಡಿ ಮುಚ್ಚುವ ಕೆಲಸ ತ್ವರಿತವಾಗಿ ನಡೆಸಲಾಗುವುದು. ಮಳೆಗಾಲ ಮುಗಿದ ಬಳಿಕ ಮರು ಡಾಮರು ಕಾಮಗಾರಿ ನಡೆಸಲಾಗುವುದು.
–ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಅಧಿಕಾರಿ