Advertisement
ಹಳೆಯಂಗಡಿಯಿಂದ ಕದಿಕೆ ಭಂಡಾರ ಮಂದಿ ರದ ತಿರುವಿನಿಂದ ಕದಿಕೆ ಸೇತುವೆಯ ವರೆಗೆ ಒಂದು ಕಿ.ಮೀ. ದೂರದ ರಸ್ತೆಯ ಡಾಮರು ಕಿತ್ತು ಹೋಗಿ, ಜಲ್ಲಿ ರಸ್ತೆಯಾಗಿ ಇದೀಗ ಮಣ್ಣಿನ ರಸ್ತೆಯಾಗಲು ತಯಾರಾಗಿದೆ. ಹಳೆಯಂಗಡಿಯಿಂದ ಬೀಚ್ ಹಾಗೂ ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನ ಮತ್ತು ಸಸಿಹಿತ್ಲು ಗ್ರಾಮವನ್ನು ತಲುಪುವ ಏಕೈಕ ಸಂಪರ್ಕ ರಸ್ತೆ ಇದಾಗಿದ್ದು, ಸಾಕಷ್ಟು ವಾಹನಗಳು, ಮೀನುಗಾರರು, ಪ್ರವಾಸಿಗರು, ಭಕ್ತರು, ನಿತ್ಯ ಸಂಚಾರಿಗಳು ಸಂಚರಿಸುತ್ತಾರೆ. ಸಂಜೆಯ ಹೊತ್ತಿನಲ್ಲಿ ಸೇತುವೆಯಲ್ಲಿ ಗಾಳ ಹಾಕಿ ಮೀನು ಹಿಡಿಯುವವರೂ ಸಹ ಇದೇ ರಸ್ತೆಯನ್ನು ಅವಲಂಬಿಸಬೇಕಾಗಿದೆ.
ಇದೇ ರಸ್ತೆಯಲ್ಲಿ ಸಂಸದರು, ಶಾಸಕರು, ಜಿಲ್ಲಾಧಿ ಕಾರಿಗಳು ಬೀಚ್ ವೀಕ್ಷಣೆಗೆ ಹಲವಾರು ಬಾರಿ ತೆರಳಿದ್ದರೂ ಸಹ ರಸ್ತೆಯ ಅವ್ಯವಸ್ಥೆಗೆ ಸ್ಪಂದನೆ ಇಲ್ಲ, ರಿûಾ ಚಾಲಕರು ಈ ರಸ್ತೆಯಾಗಿ ಬರಲು ಹಿಂದೇಟು ಹಾಕುತ್ತಾರೆ. ರಾತ್ರಿ ಸಮಯದಲ್ಲಿ ಹಲವಾರು ಬಾರಿ ರಸ್ತೆಯ ಅವ್ಯವಸ್ಥೆಯಿಂದ ಅವಘಡಗಳು ಸಂಭವಿಸಿದೆ. ಕನಿಷ್ಟ ದುರಸ್ತಿ ಮಾಡಲು ಒಂದು ವಾರ ಕಾಯುತ್ತೇವೆ ಇಲ್ಲದಿದ್ದಲ್ಲಿ ಗ್ರಾಮಸ್ಥರೇ ಸೇರಿಕೊಂಡು ಶ್ರಮದಾನದ ಮೂಲಕ ದುರಸ್ತಿ ಮಾಡುತ್ತೇವೆ ಎಂಬುದು ಸ್ಥಳೀಯರ ಅಭಿಪ್ರಾಯ. ಇದನ್ನೂ ಓದಿ : ಶಿವ ಶಿವ ಎನ್ನದೇ ವಿಧಿಯಿಲ್ಲ; ಸಹಸ್ರ ಲಿಂಗಗಳಿಗೆ ರಕ್ಷಣೆಯಿಲ್ಲ!
Related Articles
ಜಿಲ್ಲೆಯ ಪ್ರಸಿದ್ಧ ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದಲ್ಲಿ ಮಾ. 17ರಿಂದ ನಡಾವಳಿ ಮಹೋತ್ಸವ ನಡೆಯಲಿದೆ. ಈ ಸಂದರ್ಭ ಸಾವಿರಾರು ಭಕ್ತರು ದೇಗುಲಕ್ಕೆ ಭೇಟಿ ನೀಡುವುದರಿಂದ ಹೆಚ್ಚಾಗಿ ಇದೇ ರಸ್ತೆಯನ್ನು ಬಳಸುವುದರಿಂದ ಕನಿಷ್ಠ ದುರಸ್ತಿಯನ್ನಾದರೂ ಮಾಡಲು ಮನವಿ ಮಾಡಿಕೊಂಡಿದ್ದಾರೆ.
Advertisement
ದುರಸ್ತಿಗೆ ಪ್ರಯತ್ನಪ್ರಧಾನ ಮಂತ್ರಿ ಗ್ರಾಮೀಣ ಸಡಕ್ ಯೋಜನೆಯಲ್ಲಿ ಯೋಜನ ವಿಭಾಗದಿಂದ ಐದು ವರ್ಷದ ಹಿಂದೆ ರಸ್ತೆಯನ್ನು ನಿರ್ಮಿಸಲಾಗಿದೆ. ಇದೀಗ ಈ ರಸ್ತೆಯನ್ನು ಜಿ.ಪಂ.ಗೆ ಇತ್ತೀಚೆಗಷ್ಟೇ ಹಸ್ತಾಂತರಿಸಲಾಗಿದೆ. ರಸ್ತೆಯು ಹದಗೆಟ್ಟಿರುವ ಬಗ್ಗೆ ಈಗಾಗಲೇ ಮಾಹಿತಿ ಪಡೆದುಕೊಳ್ಳಲಾಗಿದೆ. ಹೊಸ ರಸ್ತೆ ಸಾಧ್ಯವಾಗದಿದ್ದರೂ ಕನಿಷ್ಟ ವ್ಯವಸ್ಥಿತವಾಗಿ ದುರಸ್ತಿ ಕಾರ್ಯ ನಡೆಸಲು ಪ್ರಯತ್ನ ನಡೆಸಲಾಗುವುದು.
– ಪ್ರಶಾಂತ್ ಆಳ್ವ, ಸಹಾಯಕ ಎಂಜಿನಿಯರ್, ದ.ಕ.ಜಿ.ಪಂ. – ನರೇಂದ್ರ ಕೆರೆಕಾಡು