Advertisement
ತಾಲೂಕಿನ ಬಡದಾಳ ಗ್ರಾಮದ ಬಿಸಿಎಂ ವಸತಿ ನಿಲಯದಲ್ಲಿ ಸುಮಾರು ದಿನಗಳಿಂದ ಮಕ್ಕಳಿಗೆ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ. ಸುಮಾರು ದಿನಗಳಿಂದ ಮಕ್ಕಳು ಸಮಸ್ಯೆ ಯಾರಿಗೂ ಹಂಚಿಕೊಂಡಿಲ್ಲ. ಆದರೆ ಈಗ ತೊಗರಿ ಬೆಳೆ, ಕಡಲೆ ಬೆಳೆಯಲ್ಲಿ ಹುಳ ತುಂಬಿಕೊಂಡಿವೆ. ಹುಳ ತುಂಬಿಕೊಂಡ ಬೆಳೆ ಕಾಳಿನಿಂದ ಸಾಂಬಾರ ಮಾಡಿ ಹಾಕಲಾಗುತ್ತಿದೆ. ತರಕಾರಿ ಹಾಕುತ್ತಿಲ್ಲ. ಊಟ ಸರಿಯಾಗಿಲ್ಲ ಎಂದು ಮಕ್ಕಳು ಹೇಳಿದರೆ ಮುಖ್ಯ ಅಡುಗೆರಾದ ಬಸವರಾಜ ಪೂಜಾರಿ ಹೆದರಿಸುತ್ತಿದ್ದಾರೆ ಎಂದು ಗ್ರಾಮಸ್ಥರಾದ ವಿನೋದ ಅತನುರ, ಹಸನಸಾಬ್ ಮುಲ್ಲಾ, ಹಣಮಂತ ತೋಟನಾಕ, ಲಕ್ಷ್ಮೀಪುತ್ರ ಮಾತಾರಿ ಆರೋಪಿಸಿದ್ದಾರೆ.
ಬಸವರಾಜ ಪೂಜಾರಿಗೆ ಎಚ್ಚರಿಸಿದ್ದರೂ ಪ್ರಯೋಜನವಾಗಿಲ್ಲ. 20 ವರ್ಷಗಳಿಂದ ನಾನಿಲ್ಲಿ ಕೆಲಸ ಮಾಡುತ್ತಿದ್ದೇನೆ. ನನಗೆ ಯಾರು
ಏನು ಮಾಡುತ್ತಾರೆ ಎಂದು ಬಸವರಾಜ ಪೂಜಾರಿ ಪ್ರಶ್ನಿಸುತ್ತಾನೆ. ವಾರದೊಳಗೆ ಬಸವರಾಜ ಪೂಜಾರಿಯನ್ನು ಇಲ್ಲಿಂದ ತೆಗೆದು
ಹಾಕಬೇಕು ಎಂದು ವಸತಿ ನಿಲಯಕ್ಕೆ ಬಾಡಿಗೆ ನೀಡಿದ ಮನೆ ಯಜಮಾನ ಭೀಮಶಾ ಸವಳಿ ಹೇಳುತ್ತಾರೆ. ವಸತಿ ನಿಲಯಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿದ ನಿಲಯ ಪಾಲಕ ಗಂಗಾಧರ, ನಾನು ಅನೇಕ ಬಾರಿ ಮಕ್ಕಳ ಬಾಯಿಂದ ಬಸವರಾಜ ಪೂಜಾರಿ ದುರ್ವರ್ತನೆ ಬಗ್ಗೆ ಕೇಳಿದ್ದೇನೆ. ಹೀಗಾಗಿ ಈ ಬಾರಿ ಅವನ ಉದ್ದಟತನದ ಬಗ್ಗೆ ಮೇಲಾಧಿಕಾರಿಗಳಿಗೆ ಪತ್ರ ಬರೆಯುತ್ತಿದ್ದೇನೆ ಎಂದು ಹೇಳಿದರು.
Related Articles
Advertisement