Advertisement
ಮಂಗಳವಾರ ಪುಣೆ ಪಿಚ್ ಬಗ್ಗೆ ಬಿಸಿಸಿಐಗೆ ಮ್ಯಾಚ್ ರೆಫ್ರಿ ಕ್ರಿಸ್ ಬ್ರಾಡ್ ವರದಿ ಸಲ್ಲಿಸಿದ್ದಾರೆ. ಇದು ಅತ್ಯಂತ ಕಳಪೆ ಗುಣಮಟ್ಟದ ಪಿಚ್ ಆಗಿದ್ದು, ಹೀಗೇಕಾಯಿತು ಎಂಬುದಕ್ಕೆ 14 ದಿನಗಳಲ್ಲಿ ಸೂಕ್ತ ಉತ್ತರ ನೀಡ ಬೇಕೆಂದು ಸೂಚಿಸಿದ್ದಾರೆ.
ಇದಕ್ಕೆ ಸಂಬಂಧಿಸಿದ ಬಿಸಿಸಿಐ ಹೇಳಿಕೆಯನ್ನು ಐಸಿಸಿ ಜನರಲ್ ಮೆನೇಜರ್ (ಕ್ರಿಕೆಟ್) ಜೆಫ್ ಅಲ್ಲರ್‌ಡೈಸ್ ಮತ್ತು ಐಸಿಸಿ ಎಲೈಟ್ ಪ್ಯಾನಲ್‌ನ ಮ್ಯಾಚ್ ರೆಫ್ರಿ ರಂಜನ್ ಮದುಗಲ್ಲೆ ಪರಿಶೀಲಿಸಲಿದ್ದಾರೆ. ಭಾರತಕ್ಕೆ “ಪಿಚ್ ಸಂಕಟ’ ಎದುರಾದದ್ದು ಇದೇ ಮೊದಲ ಸಲವೇನಲ್ಲ. 2015ರ ದಕ್ಷಿಣ ಆಫ್ರಿಕಾ ವಿರುದ್ಧ ನಾಗ್ಪುರದಲ್ಲಿ ನಡೆದ ತೃತೀಯ ಟೆಸ್ಟ್ ಮೂರೇ ದಿನದಲ್ಲಿ ಮುಗಿದಾಗಲೂ ಇಲ್ಲಿನ ಪಿಚ್ ಬಗ್ಗೆ ಅಪಸ್ವರವೆದ್ದಿತ್ತು; ಐಸಿಸಿ ಕೆಂಗಣ್ಣಿಗೆ ತುತ್ತಾ ಗಿತ್ತು. ಆ ಪಂದ್ಯವನ್ನು ಭಾರತ 124 ರನ್ನುಗಳಿಂದ ಗೆದ್ದಿತ್ತು.
Related Articles
ಪುಣೆ ಪಿಚ್ ಪ್ರಕರಣದ ಬಳಿಕ ಎಲ್ಲರ ದೃಷ್ಟಿ ಯೀಗ ಬೆಂಗಳೂರಿನ “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನತ್ತ ನೆಟ್ಟಿದೆ. ಇಲ್ಲಿ ಸರಣಿಯ ದ್ವಿತೀಯ ಟೆಸ್ಟ್ ನಡೆಯಲಿದೆ. ಈ ಕುರಿತು ಹೇಳಿಕೆಯೊಂದನ್ನು ನೀಡಿರುವ ಕೆಎಸ್‌ಸಿಎ, ಇದೊಂದು ಸ್ಪರ್ಧಾತ್ಮಕ ಪಿಚ್ ಆಗಿರಲಿದೆ; ಬ್ಯಾಟ್- ಬಾಲ್ ನಡುವೆ ಉತ್ತಮ ರೀತಿಯ ಹೋರಾಟ ಕಂಡುಬರಲಿದೆ ಎಂದಿದೆ.
“ಭಾರತ ತಂಡದಿಂದ ನಮಗೆ ಈವರೆಗೆ ಯಾವುದೇ ನಿರ್ದಿಷ್ಟ ಸೂಚನೆ ಬಂದಿಲ್ಲ. ಈ ಪಂದ್ಯ ಎರಡೂವರೆ-ಮೂರು ದಿನಗಳಲ್ಲಿ ಮುಗಿಯುವುದನ್ನು ನಾವು ಯಾವ ಕಾರಣಕ್ಕೂ ಬಯ ಸುವುದಿಲ್ಲ. ನಮ್ಮದು 5 ದಿನಗಳ ಯೋಜನೆ. ಹೀಗಾಗಿ ಬ್ಯಾಟಿಂಗ್, ಬೌಲಿಂಗಿಗೆ ಸಮಾನ ಅವ ಕಾಶ ಲಭಿಸುವಂಥ ಸ್ಪರ್ಧಾತ್ಮಕ ಪಿಚ್ ರೂಪಿಸ ಲಾಗುತ್ತಿದೆ’ ಎಂದು ರಾಜ್ಯ ಕ್ರಿಕೆಟ್ ಮಂಡಳಿ ಕಾರ್ಯದರ್ಶಿ ಸುಧಾಕರ ರಾವ್ ಹೇಳಿದ್ದಾರೆ.
Advertisement
“ಪಿಚ್‌ನಲ್ಲಿ ತೇವಾಂಶವನ್ನು ಉಳಿಸಿಕೊಳ್ಳ ಬೇಕಿದೆ. ಹೀಗಾಗಿ ನೀರು ಹಾಯಿಸುತ್ತಲೇ ಇದ್ದೇವೆ. ಪಂದ್ಯಕ್ಕೆ 2-3 ದಿನಗಳಿರುವಾಗಲೂ ಈ ಪ್ರಕ್ರಿಯೆ ಮುಂದುವರಿಯುತ್ತದೆ. ಬಳಿಕ ಪಿಚ್ ಗುಣಮಟ್ಟ ಗಮನಿಸಿ, ಬೇಕಿದ್ದರೆ ಮತ್ತೆ ಅವಲೋಕಿಸುತ್ತೇವೆ…’ ಎಂದು ರಾವ್ ಮಾಹಿತಿಯಿತ್ತರು.