Advertisement
ಎನ್ನೆಸೆಸ್ ಘಟಕದವರು, ಗ್ರಾಮ ಪಂಚಾಯತ್‌ನವರು ಪರಿಶೀಲಿಸಿ ತೋರಿಸಿರುವಂತೆ, ಪುತ್ತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂಪಿಗೆಯ ಕುಲ್ಲಂಗಲ್ಲು ವೀರಪ್ಪ ಮೂಲ್ಯ ಹಾಗೂ ಕುಂಗೂರು ಚಾವಡಿ ಮನೆ ರಸ್ತೆಯ ವಾಸು ಹಾಗೂ ಸುನಂದಾ ಇವರ ಮನೆಗಳು ತೀರಾ ಶಿಥಿಲವಾಗಿದ್ದು ಮಳೆಗಾಲದಲ್ಲಿ ಸೋರುತ್ತಿರುವುದನ್ನು ಗಮನಿಸಿದರು.
Related Articles
Advertisement
ವೀರಪ್ಪ ಮೂಲ್ಯರಿಗೆ ಜಾಗದ ಹಕ್ಕು ಪತ್ರ ಇಲ್ಲ , ತಕರಾರು ಇದೆ. ಪತಿ, ಪತ್ನಿ ಮಾತ್ರ ಇದ್ದಾರೆ, ಬಿಪಿಎಲ್ ಕಾರ್ಡು ಇದೆ, ವೃದ್ಧಾಪ್ಯ ವೇತನ ಬರುತ್ತಿದೆ. ಬೇರೆ ಆದಾಯ ಮೂಲಗಳಿಲ್ಲ.
ವಾಸು ಅವರೂ ಬಿಪಿಎಲ್ ಕಾರ್ಡು ಹೊಂದಿರುವವರು. ಅಪರೂಪಕ್ಕೆ ಕೂಲಿ ಕೆಲಸಕ್ಕೆ ಹೋಗುವ ಸ್ಥಿತಿ ಇದೆ. ಪತ್ನಿ ಬೀಡಿ ಕಟ್ಟುತ್ತಾರೆ, ಪಿಯುಸಿ ಮತ್ತು ಐದನೇ ತರಗತಿಯಲ್ಲಿ ಓದುವ ಮಕ್ಕಳಿದ್ದಾರೆ. ತಾಯಿಗೆ ಅಂಗವಿಕಲರ ವೇತನ ಬರುತ್ತಿದೆ.
ಮೂರನೇ ಮನೆ ಕುಂಗೂರು ಗ್ರಾಮದ ೫ ಸೆಂಟ್ಸ್ ಕಾಲನಿಯ ಸುನಂದಾ ಅವರದ್ದು. ಸುನಂದಾ, ಅವರ ತಮ್ಮ ಸಂಜೀವ ಇಬ್ಬರು ಮಕ್ಕಳಿದ್ದಾರೆ. ಪುತ್ರಿ ಗೇರುಬೀಜ ಕಾರ್ಖಾನೆಗೆ, ಪುತ್ರ ಶಾಲೆಗೆ ಹೋಗುತ್ತಿದ್ದು ಸಂಜೀವ ಕೂಲಿ ಕೆಲಸ ಮಾಡುತ್ತಾರೆ. ಈ ಮನೆಗೆ ಹಕ್ಕು ಪತ್ರ ಇಲ್ಲ, ಹಾಗಾಗಿ ಪಂಚಾಯತ್ ಸೌಲಭ್ಯಗಳಿಲ್ಲ. ಸಣ್ಣ ಗುಡಿಸಲು ಇದೆ, ಸೂರು ಸೋರುತ್ತಲಿದೆ.