Advertisement

ವಸತಿ ಶಾಲೆಗಳಿಗೆ ಕಳಪೆ ಆಹಾರ ವಸ್ತು ಪೂರೈಕೆ

09:08 AM Jun 28, 2019 | Team Udayavani |

ರಾಮನಗರ: ಜಿಲ್ಲೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಸೇರಿದಂತೆ ಸರ್ಕಾರಿ ಹಾಸ್ಟೆಲ್ಗಳಿಗೆ ಕಳಪೆ ಆಹಾರ ಪದಾರ್ಥಗಳನ್ನು ಪೂರೈಸಲಾಗುತ್ತಿದೆ. ರಾಸಾಯನಿಕಗಳನ್ನು ಬಳಸಿ ಬಣ್ಣ ಕಟ್ಟಿರುವ ರಾಗಿಯನ್ನು ಪೂರೈಸಲಾಗುತ್ತಿದೆ ಎಂದು ತಾಪಂ ಅಧ್ಯಕ್ಷ ಗಾಣಕಲ್ ನಟರಾಜ್‌ ಆರೋಪಿಸಿದರು.

Advertisement

ಇಲ್ಲಿನ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಅವರು ಬಣ್ಣ ಕಟ್ಟಿರುವ ರಾಗಿಯ ಸ್ಯಾಂಪಲ್ಗಳನ್ನು ಪ್ರದರ್ಶಿಸಿ ದೂರಿದರು. ಮೊರಾರ್ಜಿ ವಸತಿ ಶಾಲೆಗೆ ಪೂರೈಕೆಯಾಗಿರುವ ಬಣ್ಣ ಕಟ್ಟಿರುವ ರಾಗಿಯನ್ನು ಪೂರೈಸಲಾಗಿದೆ ಎಂದು ಸ್ಯಾಂಪಲ್ಗಳನ್ನು ಪ್ರದರ್ಶಿಸಿ ಜಿಪಂ ಅಧ್ಯಕ್ಷರು ಮತ್ತು ಸಿಇಒ ಅವರಿಗೆ ಕೊಟ್ಟರು.

ಕ್ರಮಕ್ಕೆ ಸೂಚಿಸಿದರು ಪ್ರಯೋಜನವಿಲ್ಲ: ರಾಸಾಯನಿಕಗಳನ್ನು ಬಳಸಿದ ಆಹಾರ ಪದಾರ್ಥಗಳನ್ನು ಸೇವಿಸುವ ವಿದ್ಯಾರ್ಥಿಗಳಲ್ಲಿ ಆರೋಗ್ಯ ಸಮಸ್ಯೆಗಳು ಉದ್ಬವಿಸಿದರೆ ಹೊಣೆ ಯಾರು ಎಂದು ಪ್ರಶ್ನಿಸಿದರು. ರಾಮನಗರ ತಾಲೂಕಿನಲ್ಲಿರುವ ಎಲ್ಲಾ ವಸತಿ ಶಾಲೆಗಳಿಗೂ ನಾಲ್ಕು ತಿಂಗಳಿನಿಂದ ಸತತವಾಗಿ ಭೇಟಿ ನೀಡಿ, ಮಾಹಿತಿ ಸಂಗ್ರಹಿಸಿರುವುದಾಗಿ, ಅಲ್ಲಿನ ಪ್ರಾಂಶುಪಾಲರು, ಶಿಕ್ಷಕರು, ನಿಲಯ ಪಾಲಕರಿಗೆ, ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಕ್ರಮಕೈಗೊಳ್ಳಿ ಎಂದು ಸೂಚಿಸಿದರು ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ: ಜಿಲ್ಲಾ ಪಂಚಾಯ್ತಿ ಸದಸ್ಯ ಎಸ್‌. ಗಂಗಾಧರ್‌ ಮಾತನಾಡಿ, ಸರ್ಕಾರಿ ಶಾಲೆಗಗಳಿಗೆ ಪೂರೈಕೆ ಆಗುತ್ತಿರುವ ಆಹಾರ ಪದಾರ್ಥಗಳು ಸಹ ಕಳಪೆಯಾಗಿವೆ ಎಂದು ದೂರಿದರು. ಕಳಪೆ ಆಹಾರ ಪದಾರ್ಥಗಳನ್ನು ಪೂರೈಸುತ್ತಿರುವ ಏಜೆನ್ಸಿಗಳು ಮತ್ತು ಅದನ್ನು ಪಡೆಯುತ್ತಿರುವ ವಸತಿ ನಿಲಯಗಳ ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸುವಂತೆ ಒತ್ತಾಯಿಸಿದರು.

ಅಧಿಕಾರಿಗಳಿಗೆ ಮಾಹಿತಿ ಇಲ್ಲ: ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ವೀಣಾಕುಮಾರಿ ಮಾತನಾಡಿ, ಜಿಲ್ಲಾ ಪಂಚಾಯ್ತಿ ಸದಸ್ಯರ ತಂಡವು ಹಲವು ವಸತಿ ಶಾಲೆಗಳಿಗೆ ಭೇಟಿ ನೀಡಿ ಸಂಸದರಿಗೆ ವರದಿ ಸಲ್ಲಿಸಿದ್ದೇವೆ. ಆಹಾರ ಪದಾರ್ಥಗಳು ಎಲ್ಲಿಂದ ಪೂರೈಕೆಯಾಗುತ್ತಿವೆ ಎಂಬುದರ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಇಲ್ಲ, ನಾವು ಪೋನ್‌ ಮಾಡಿದರೂ ಅಧಿಕಾರಿಗಳು ಕರೆ ಸ್ವೀಕರಿಸುವುದಿಲ್ಲ ಎಂದು ದೂರಿದರು.

Advertisement

ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಾತನಾಡಿ ತನಿಖೆ ಮಾಡಿ ವರದಿ ಸಲ್ಲಿಸುವುದಾಗಿ ಹೇಳಿದಾಗ ಸಿಡಿಮಿಡಿಗೊಂಡ ಶಾಸಕ ಎ.ಮಂಜುನಾಥ್‌ ನಾಲ್ಕು ತಿಂಗಳಾದರು ಆಹಾರ ಪದಾರ್ಥ ಪೂರೈಸುತ್ತಿರುವವರು ಯಾರು ಎಂದು ಗೊತ್ತಾಗಲಿಲ್ಲವೇ ಎಂದು ಪ್ರಶ್ನಿಸಿ, ಬೇಜವಾಬ್ದಾರಿ ಬಿಡಿ ಎಂದರು. ಅಧ್ಯಕ್ಷತೆಯನ್ನು ಜಿಪಂ ಅಧ್ಯಕ್ಷ ಎಂ.ಎನ್‌.ನಾಗರಾಜು ವಹಿಸಿದ್ದರು. ವಿಧಾನ ಪರಿಷತ್‌ ಸದಸ್ಯ ಸಿ.ಎಂ.ಲಿಂಗಪ್ಪ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next