Advertisement

ನೆರವಿನ ನಿರೀಕ್ಷೆಯಲ್ಲಿ ಬಡ ಕುಟುಂಬ

08:23 PM May 12, 2019 | sudhir |

ಎಣ್ಮಕಜೆ : ಕಾಸರಗೋಡು ಜಿಲ್ಲೆ ಮಂಜೇಶ್ವರ ತಾಲೂಕಿನ ಎಣ್ಮಕಜೆ ಗ್ರಾಮದ ಸಾಯ ಬಾವಲಿಮೂಲೆಯ ಐತ ಮಾಯಿಲ ಅವರ ಪುತ್ರ ಆನಂದ (24) ಅವರು ತೀವ್ರವಾದ ಅನಾರೋಗ್ಯದಿಂದ ಬಳಲುತ್ತಿದ್ದಾರೆ.

Advertisement

ಕಳೆದ 2 ವರ್ಷಗಳಿಂದ ಸೊಂಟದಿಂದ ಕೆಳಗಿನ ಸಂಪೂರ್ಣ ಬಲವನ್ನು ಕಳೆದುಕೊಂಡಿರುವ ಆನಂದ ಅವರು ಹಾಸಿಗೆ ಹಿಡಿದಿದ್ದಾರೆ. ಇವರ ತಂದೆ ಮತ್ತು ತಾಯಿ ಕಮಲಾ ಇಬ್ಬರೂ ಕ್ಷಯರೋಗಿಗಳಾಗಿದ್ದು, ತಂಗಿ ಅನುಪಮಾ ಮಧುಮೇಹದಿಂದ ಬಳಲುತ್ತಿ¨ªಾರೆ. ಕುಟುಂಬವನ್ನು ನಡೆಸುವವರು ಎಲ್ಲರೂ ಅನಾರೋಗ್ಯ ಪೀಡಿತರಾಗಿರುವ ಕಾರಣ ಕುಟುಂಬ ಸಂಕಷ್ಟದಲ್ಲಿದೆ.

ದುಡಿಯುವ ಸಾಮರ್ಥ್ಯ ಇಲ್ಲದ ಈ ಕುಟುಂಬ ತಮ್ಮ 4 ಜನರ ವೈದ್ಯಕೀಯ ವೆಚ್ಚ ಭರಿಸಲಾಗದೇ ಕಷ್ಟಪಡುತ್ತಿವೆೆ. ಇವರು ವಾಸಿಸುತ್ತಿರುವ ಮನೆಯೂ ದುರ್ಬಲವಾಗಿದ್ದು, ಅತ್ತ ಮನೆಯನ್ನು ಸರಿಪಡಿಸಿಕೊಳ್ಳಲು ಕುಟುಂಬಕ್ಕೆ ಸಾಧ್ಯವಾಗುತ್ತಿಲ್ಲ. ಮನೆಯ ಸದಸ್ಯರೆಲ್ಲರೂ ಅನಾರೋಗ್ಯ ಪೀಡಿತವಾಗಿರುವ ಕಾರಣ ಇದೀಗ ತಮ್ಮ ಚಿಕಿತ್ಸೆಗಾಗಿ ಕುಟುಂಬ ಸಹೃದಯ ದಾನಿಗಳ ಸಹಾಯದ ನಿರೀಕ್ಷೆಯಲ್ಲಿದೆ. ಸಹಾಯ ಮಾಡಲು ಇಚ್ಛಿಸುವವರು ಆನಂದ ಎಂಬವರ ತಂದೆ ಐತ ಮಾಯಿಲಾ ಅವರ ಬ್ಯಾಂಕ್‌ ಖಾತೆಗೆ ಹಣ ನೀಡಬಹುದು. ವಿಜಯ ಬ್ಯಾಂಕ್‌ ಕಾಟುಕುಕ್ಕೆ ಶಾಖೆ, ಬ್ಯಾಂಕ್‌ ಖಾತೆ ಸಂಖ್ಯೆ 205201231000328, IFSC Code: VIJB0002052 ಖಾತೆಗೆ ಮಾಡಬಹುದು.

Advertisement

Udayavani is now on Telegram. Click here to join our channel and stay updated with the latest news.

Next