Advertisement

ಕೆಪಿಟಿಸಿಎಲ್‌ ವಸತಿ ಗೃಹಗಳ ದುಸ್ಥಿತಿ

04:16 PM Dec 21, 2019 | Team Udayavani |

ರಾಯಬಾಗ: ಪಟ್ಟಣದ ಹೊರವಲಯದಲ್ಲಿರುವ ಕೆಪಿಟಿಸಿಎಲ್‌ ನೌಕರರ ವಸತಿ ನಿಲಯಗಳು ಸಮರ್ಪಕ ನಿರ್ವಹಣೆ ಇಲ್ಲದ್ದರಿಂದ ಹಾಳಾಗಿದ್ದು, ರಕ್ಷಣಾಗೋಡೆ ಕುಸಿದು ಬಿದ್ದು ಗಿಡಗಂಟೆ ಬೆಳೆದಿವೆ.

Advertisement

ಹೆಸ್ಕಾಂ ಕಚೇರಿ ಆವರಣದಲ್ಲಿ ಕೆಪಿಟಿಸಿಎಲ್‌ ವತಿಯಿಂದ ಸಿಬ್ಬಂದಿಗಾಗಿ ಸುಮಾರು 40 ವರ್ಷಗಳ ಹಿಂದೆ ನಿರ್ಮಿಸಿದ ಸುಮಾರು 19 ವಸತಿ ನಿಲಯಗಳಲ್ಲಿ ಬಹುತೇಕ ಮನೆಗಳು ವಾಸಕ್ಕೆ ಯೋಗ್ಯವಾಗಿಲ್ಲ. ಅಲ್ಪಸ್ವಲ್ಪ ವ್ಯವಸ್ಥಿತವಾಗಿರುವ ಮನೆಗಳಲ್ಲಿ  ಈಗ 8 ಕುಟುಂಬಗಳು ನೆಲೆಸಿದ್ದು, ಇನ್ನುಳಿದ ಮನೆಗಳ ಗೋಡೆ ಬಿರುಕು ಬಿಟ್ಟಿದೆ. ಮೇಲ್ಛಾವಣಿ ಮಳೆಯಿಂದ ಸೋರುತ್ತಿವೆ. ವಸತಿ ನಿಲಯಗಳ ಸುತ್ತಮುತ್ತ ಗಿಡಗಂಟಿಗಳು ಬೆಳೆದಿದ್ದರಿಂದ ವಿಷಜಂತುಗಳ ತಾಣವಾಗಿ ಪರಿಣಮಿಸಿದ್ದು, ಈಗ ಇರುವ ಸಿಬ್ಬಂದಿ ಕುಟುಂಬ ಕೂಡಜೀವ ಭಯದಿಂದಲೇ ವಾಸಮಾಡುವಂತಾಗಿದೆ.

ಕುಸಿದ ರಕ್ಷಣಾಗೋಡೆ: ವಸತಿ ನಿಲಯಗಳ ಸುತ್ತಮುತ್ತಲಿನ ಕೌಂಪೌಂಡ ಅಲ್ಲಲ್ಲಿ ಕುಸಿದು ಬಿದ್ದಿದೆ. ಇದರಿಂದ ರಾತ್ರಿ ಹೊತ್ತು ಕಳ್ಳರ ಭಯ ಒಂದೆಡೆಯಾದರೆ, ಇನ್ನೊಂದೆಡೆ ಹಗಲಿನಲ್ಲಿ ದನಕರುಗಳ ಕಾಟದಿಂದ ವಸತಿ ನಿಲಯದಲ್ಲಿರುವ ನೌಕರರ ಕುಟುಂಬ ಬೇಸತ್ತು ಹೋಗಿವೆ. ರಕ್ಷಣಾಗೋಡೆ ಕುಸಿದು ಬಿದ್ದರಿಂದ ಮತ್ತು ಮುಖ್ಯದ್ವಾರದಲ್ಲಿ ಗೇಟ್‌ ಇಲ್ಲದ್ದರಿಂದ ಹೆಸ್ಕಾಂ ಇಲಾಖೆಯ ಬೆಲೆ ಬಾಳುವ ಸಾಮಗ್ರಿಗಳಿಗೂ ಕೂಡ ರಕ್ಷಣೆಯಿಲ್ಲದಂತಾಗಿದೆ.

ಕೆಪಿಟಿಸಿಎಲ್‌ ಮೇಲಧಿ ಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ವಸತಿ ನಿಲಯಕ್ಕೆ ರಕ್ಷಣಾಗೋಡೆ ನಿರ್ಮಿಸಿ, ಇಲಾಖೆ ಸಿಬ್ಬಂದಿಗಾಗಿ ನೂತನ ಕಟ್ಟಡ ಪುನರ್‌ ನಿರ್ಮಿಸಿ ಸಿಬ್ಬಂದಿ ಭಯರಹಿತ ವಾತಾವರಣದಲ್ಲಿ ನೆಲೆಸುವಂತೆ ಮಾಡಬೇಕೆಂಬುದು ಇಲ್ಲಿನ ಸಿಬ್ಬಂದಿ ಒತ್ತಾಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next