Advertisement

ಪುಣಚ: ಬಿಜೆಪಿ ಬೂತ್‌ ಸಮಿತಿ ಕಾರ್ಯಕರ್ತರ ಸಮಾವೇಶ

05:02 PM Nov 24, 2017 | Team Udayavani |

ಪುಣಚ: ರಾಜ್ಯ ಸರಕಾರದ ಬಹುತೇಕ ಯೋಜನೆಗಳು ಹಿಂದೂ, ರೈತ ವಿರೋಧಿ, ಅಭಿವೃದ್ಧಿಯ ವಿರೋಧಿಯಾಗಿದ್ದು, ಅವೆಲ್ಲವೂ ವಿಫಲವಾಗಿವೆ. ನಾವು ನಿರೀಕ್ಷಿಸಿದ ಯೋಜನೆಗಳನ್ನು ಕಾರ್ಯಗತಗೊಳಿಸಲು ರಾಜ್ಯದಲ್ಲಿ ಮತ್ತೆ ಬಿಜೆಪಿ ಸರಕಾರ ಆಡಳಿತಕ್ಕೇರಲು ಪ್ರತಿಯೊಬ್ಬ ಕಾರ್ಯಕರ್ತರು ಕ್ರಿಯಾಶೀಲನಾಗಬೇಕು ಎಂದು ರಾಜ್ಯ ಹಿಂದುಳಿದ ಮೋರ್ಚಾ ಕಾರ್ಯದರ್ಶಿ ಸತ್ಯಜಿತ್‌ ಸುರತ್ಕಲ್‌ ಎಚ್ಚರಿಸಿದರು.

Advertisement

ಪುಣಚ ಬಿಜೆಪಿ ಗ್ರಾಮ ಸಮಿತಿಯ 101ನೇ ಬೂತ್‌ ಸಮಿತಿ ಕಾರ್ಯಕರ್ತರ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.  ಸಮಾರಂಭದಲ್ಲಿ ಭಾಗವಹಿಸಿದ ಪುತ್ತೂರು ಮಂಡಲ ಬಿಜೆಪಿ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಹಾಗೂ ಬೂತ್‌ ಉಸ್ತುವಾರಿ ಯಶಸ್ವಿನಿ ಶಾಸ್ತ್ರಿ ನೆಕ್ಕರೆ ಸಂಘಟನಾತ್ಮಕ ವಿಚಾರದ ಬಗ್ಗೆ ಮಾತನಾಡಿದರು.

ವಿಟ್ಲ ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ಸುರೇಶ್‌ ಭಟ್‌ ಇಡ್ಕಿದು, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಸದಸ್ಯೆ ಜಯಶ್ರೀ
ಕೋಡಂದೂರು, ತಾ.ಪಂ. ಸದಸ್ಯೆ ಕವಿತಾ ಸುಬ್ಬ ನಾಯ್ಕ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ರಾಜೀವ ಭಂಡಾರಿ ಭಾಗ
ವಹಿಸಿದ್ದರು. ಕಾಂಗ್ರೆಸ್‌ ಕಾರ್ಯಕರ್ತ ಸೀತಾರಾಮ ಪೂಜಾರಿ ಗರಡಿ ನೀರುಮಜಲು ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಲಾಯಿತು. ಜಗದೀಶ್‌ ಮಾರಮಜಲು ಸ್ವಾಗತಿಸಿ, ಪುಣಚ ಗ್ರಾಮ ಬಿಜೆಪಿ ಸಮಿತಿ ಅಧ್ಯಕ್ಷ ಹರೀಶ್‌ ದಲ್ಕಜೆ ವಂದಿಸಿ, ರಾಜೇಂದ್ರ ರೈ ನಿರೂಪಿಸಿದರು.

ಬೂತ್‌ ಸಶಕ್ತೀಕರಣಗೊಳಿಸಿ
ಪ್ರತಿಯೊಂದು ಬೂತ್‌ ಸಶಕ್ತೀಕರಣಗೊಳಿಸಿದಾಗ ಮಾತ್ರ ಮುಂದಿನ ಮುಖ್ಯಮಂತ್ರಿಯಾಗಿ ಯಡಿಯೂರಪ್ಪನವರನ್ನು ಕಾಣಬಹುದು. ಈ ನಿಟ್ಟಿನಲ್ಲಿ ಕಾರ್ಯಕರ್ತರು ಕಾರ್ಯೋನ್ಮುಖರಾಗಬೇಕು. 
ಚನಿಲ ತಿಮ್ಮಪ್ಪ ಶೆಟ್ಟಿ
  ಪುತ್ತೂರು ಮಂಡಲ ಬಿಜೆಪಿ ಅಧ್ಯಕ್ಷ 

Advertisement

Udayavani is now on Telegram. Click here to join our channel and stay updated with the latest news.

Next