Advertisement

ಪೂಂಚ್‌ ಎಲ್‌ಓಸಿ ಬಸ್‌ ಸೇವೆ 16ನೇ ವಾರವೂ ಅಮಾನತು

03:36 PM Oct 23, 2017 | udayavani editorial |

ಜಮ್ಮು : ಪಾಕಿಸ್ಥಾನ ಪದೇ ಪದೇ ನಡೆಸುತ್ತಿರುವ ಕದನ ವಿರಾಮ ಉಲ್ಲಂಘನೆಯ ಪರಿಣಾಮವಾಗಿ ನಿರಂತರ 16ನೇ ವಾರದಲ್ಲೂ  ಪೂಂಚ್‌ – ರಾವಲ್‌ಕೋಟ್‌ ಮಾರ್ಗದಲ್ಲಿನ ಜಮ್ಮು-ಕಾಶ್ಮೀರ ಮತ್ತು ಪಿಓಕೆ ನಡುವಿನ ಎಲ್‌ಓಸಿ ಬಸ್‌ ಸೇವೆಯು ಅಮಾನತುಗೊಂಡಿದೆ.

Advertisement

ಪಾಕಿಸ್ಥಾನದ ಕಡೆಯಿಂದ ಭಾರೀ ಗುಂಡಿನ ಮತ್ತು ಶೆಲ್‌ ದಾಳಿ ನಡೆಯುತ್ತಿದ್ದ  ಕಾರಣ ಕಳೆದ ಜು.10ರಿಂದ ಎಲ್‌ಓಸಿ ಬಸ್‌ ಸೇವೆಯನ್ನು ಅಮಾನತು ಮಾಡಲಾಗಿತ್ತು. 

ಪೂಂಚ್‌ – ರಾವಲ್‌ಕೋಟ್‌ ಮಾರ್ಗದ ಸಾಪ್ತಾಹಿಕ ಎಲ್‌ಓಸಿ ಬಸ್‌ ಸೇವೆ ಕಳೆದ ಹದಿನಾರು ವಾರಗಳಿಂದ ಅಮಾನತಾಗಿದ್ದು  ಇಂದು ಕೂಡ ಅದು ಅಮಾನತುಗೊಂಡಿದೆ ಎಂದು ಪೂಂಚ್‌ನಲ್ಲಿನ ಎಲ್‌ಓಸಿ ವಾಣಿಜ್ಯ ಉಸ್ತುವಾರಿದಾರ ಮೊಹಮ್ಮದ್‌ ತನ್ವೀರ್‌ ಹೇಳಿದರು. 

ಚಕನ್‌ ದಾ ಬಾಗ್‌ ಮಾರ್ಗವಾಗಿ ಸಾಗುವ ಈ ಎಲ್‌ಓಸಿ ಬಸ್‌ ಸೇವೆ ಪುನಃ ಯಾವಾಗ ಆರಂಭವಾದೀತು ಎಂಬುದನ್ನು ಹೇಳಲಾಗದು ಎಂದವರು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next