ನವ ದೆಹಲಿ : ಕೋವಿಡ್ 19 ಲಸಿಕೆಗಳ ಪೂರೈಕೆಯ ಬಗ್ಗೆ ಇರುವ ಬೇಡಿಕೆ ಹಾಗೂ ಒತ್ತಡದ ಕಾರಣದಿಂದಾಗಿ ಲಂಡನ್ ಗೆ ತೆರಳಿದ್ದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಸಿಇಒ ಆದರ್ ಪೂನವಾಲಾ ಮತ್ತೆ ಭಾರತಕ್ಕೆ ಮರಳುವುದಾಗಿ ಹೇಳಿದ್ದಾರೆ.
‘ದಿ ಟೈಮ್ಸ್’ ಗೆ ನೀಡಿದ ಸಂದರ್ಶನದಲ್ಲಿ, ಪೂನವಾಲ್ಲಾ ಅವರು ಭಾರತದಲ್ಲಿ ಬೆದರಿಕೆಗಳು ಬರುತ್ತಿದ್ದ ಕಾರಣದಿಂದಾಗಿ ಮತ್ತು ಕೋವಿಡ್ 19 ಲಸಿಕೆಗಳ ಬೇಡಿಕೆಯ ಮೇಲೆ “ಒತ್ತಡ ಮತ್ತು ಬೆದರಿಕೆಗಳು ಬರುತ್ತಿವೆ ಎಂದು ಪೂನಾವಾಲ ಆರೋಪಿಸಿದ್ದರು. ಅಷ್ಟಲ್ಲದೇ, ಸದ್ಯದ ಪರಿಸ್ಥಿತಿಯಲ್ಲಿ ನಾನು ಭಾರತಕ್ಕೆ ಹಿಂದಿರುಗುವುದಿಲ್ಲವೆಂದು ಅವರು ಹೇಳಿದ್ದರು.
ಇನ್ನು, ಶನಿವಾರ ತಡರಾತ್ರಿ ಟ್ವೀಟ್ ಮಾಡಿದ ಪೂನವಾಲಾ, ಕೋವಿಶೀಲ್ಡ್ – ಆಕ್ಸ್‌ಫರ್ಡ್ / ಅಸ್ಟ್ರಾಜೆನೆಕಾದ ಕೋವಿಡ್ -19 ಲಸಿಕೆ ಭಾರತದ ಸೀರಮ್ ಇನ್ ಸ್ಟಿಟ್ಯೂಟ್ ಉತ್ಪಾದಿಸುತ್ತಿದೆ – ಪುಣೆಯಲ್ಲಿನ ಎಸ್ ಐ ಐ ಸೌಲಭ್ಯದಲ್ಲಿ ಪೂರ್ಣ ಪ್ರಗತಿಯಲ್ಲಿದೆ. “ಪುಣಿಯಲ್ಲಿ ಕೋವಿಶೀಲ್ಡ್ ಉತ್ಪಾದನೆಯು ಭರದಿಂದ ಸಾಗುತ್ತಿದೆ ಎಂದು ಹೇಳಲು ಸಂತೋಷವಾಗಿದೆ. ಕೆಲವೇ ದಿನಗಳಲ್ಲಿ ನಾನು ಭಾರತಕ್ಕೆ ಹಿಂದಿರುಗಿದ ನಂತರ ಕಾರ್ಯಾಚರಣೆಗಳನ್ನು ಪರಿಶೀಲಿಸಲು ಎದುರು ನೋಡುತ್ತಿದ್ದೇನೆ” ಎಂದು ಬರೆದುಕೊಂಡಿದ್ದಾರೆ.
ಆದಾಗ್ಯೂ, ಅವರು ಭಾರತಕ್ಕೆ ಯಾವಾಗ ಮರಳುತ್ತಾರೆ ಎಂದು ಹೇಳಲಿಲ್ಲ.
ಈ ಪರಿಸ್ಥಿತಿಯಲ್ಲಿರಲು ನಾನು ಬಯಸುವುದಿಲ್ಲ ಮತ್ತು ನಿಮಗೆ X, Y ಅಥವಾ Z ನ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗದ ಕಾರಣ, ಅವರು ಏನು ಮಾಡಲಿದ್ದಾರೆಂದು ಊಹಿಸಲು ಸಾಧ್ಯವಿಲ್ಲ. ಎಲ್ಲವೂ ನನ್ನ ಹೆಗಲ ಮೇಲೆ ಭಾರವಾಗುವಾಗ ಒಬ್ಬನಿಂದ ಎಲ್ಲವನ್ನೂ ಸಾಧ್ಯವಿಲ್ಲ ಎಂದಿದ್ದರು.
ಇನ್ನು ಸಂದರ್ಶನದಲ್ಲಿ ನಿರೂಪಕರು, ಭಾರತದಲ್ಲಿನ ಕೋವಿಡ್ ಎರಡನೇ ಅಲೆಯ ಮೇಲೆ ‘ಕುಂಭಮೇಳ’ ಮತ್ತು ವಿಧಾನಸಭಾ ಚುನಾವಣೆಯ ಪ್ರಭಾವದ ಬಗ್ಗೆ ಕೇಳಿದಾಗ, ಅಂತಹ “ಸೂಕ್ಷ್ಮ” ವಿಷಯದ ಬಗ್ಗೆ ಉತ್ತರಿಸಿದರೆ ನನ್ನ “ತಲೆ ಕತ್ತರಿಸಲಾಗುತ್ತದೆ” ಎಂದು ಕೂಡ ಪೂನವಾಲ್ಲಾ ಹೇಳಿದ್ದರು.
ಪೂನಾವಾಲ ಹೇಳಿಕೆ ದೇಶದಲ್ಲಿ ಸಾಕಷ್ಟು ದೊಡ್ಡ ಮಟ್ಟಿಗೆ ಚರ್ಚೆಗೆ ಒಳಗಾಗಿತ್ತು. ಪರ ವಿರೋಧ ಚರ್ಚೆಗೂ ಕಾರಣವಾಗಿತ್ತು.