Advertisement

ಶತ್ರು ಪತ್ನಿ ಪೂನಂ ಎಸ್‌ಪಿ ಸೇರ್ಪಡೆ; ಲಕ್ನೋದಿಂದ ರಾಜನಾಥ್‌ ಸಿಂಗ್‌ ಎದುರು ಕಣಕ್ಕೆ

09:43 AM Apr 17, 2019 | Team Udayavani |

ಲಕ್ನೋ : ರಾಜಕಾರಣಿಯಾಗಿ ಪರಿವರ್ತಿತರಾಗಿರುವ ನಟ ಶತ್ರುಘ್ನ ಸಿನ್ಹಾ ಅವರ ಪತ್ನಿ ಪೂನಮ್‌ ಸಿನ್ಹಾ ಇಂದು ಮಂಗಳವಾರ ಸಮಾಜವಾದಿ ಪಕ್ಷ ಸೇರಿದರು.

Advertisement

ಪೂನಂ ಅವರು ಎಸ್‌ ಪಿ ಮುಖ್ಯಸ್ಥ ಅಖೀಲೇಶ್‌ ಯಾದವ್‌ ಅವರ ಪತ್ನಿ ಡಿಂಪಲ್‌ ಯಾದವ್‌ ಅವರನ್ನು ಲಕ್ನೋದಲ್ಲಿನ ಆಕೆಯ ನಿವಾಸದಲ್ಲಿ ಭೇಟಿಯಾದರು. ಈ ವಿದ್ಯಮಾನವನ್ನು ಸಮಾಜವಾದಿ ಪಕ್ಷ ಟ್ವಿಟರ್‌ನಲ್ಲಿ ದೃಢಪಡಿಸಿದೆ.

ಪೂನಂ ಅವರು ಲಕ್ನೋ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರೆದುರು ಎಸ್‌ಪಿ-ಬಿಎಸ್‌ಪಿ-ಆರ್‌ಎಲ್‌ಡಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಸೆಣಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ ಪಕ್ಷ ಸಿನ್ಹಾ ಅವರನ್ನು ಬೆಂಬಲಿಸುವ ನಿರೀಕ್ಷೆ ಇದೆ ಎಂದು ಮೂಲಗಳು ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next