Advertisement

ಪೂನಂ ನೇಮಕ

12:30 AM Jan 28, 2019 | Team Udayavani |

ಹೊಸದಿಲ್ಲಿ: ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ದಕ್ಷಿಣ ಏಷ್ಯಾ ವಲಯಕ್ಕೆ ಪ್ರಾದೇಶಿಕ ನಿರ್ದೇಶಕರನ್ನಾಗಿ ಪೂನಂ ಖೇತ್ರಪಾಲ್‌ ಸಿಂಗ್‌ ಅವರನ್ನು ಎರಡನೇ ಅವಧಿಗೆ ನೇಮಿಸಲಾಗಿದೆ.

Advertisement

ಶನಿವಾರ ನಡೆದ ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಈ ಬಗ್ಗೆ ಅವಿರೋಧವಾಗಿ ನಿರ್ಧಾರ ಕೈಗೊಳ್ಳಲಾಗಿದೆ. ಅವರ ಅಧಿಕಾರದ ಅವಧಿ ಐದು ವರ್ಷಗಳಾಗಿರಲಿವೆ. ಇದೇ ಮೊದಲ ಬಾರಿಗೆ ದಕ್ಷಿಣ ಏಷ್ಯಾ ವಲಯದ ಪ್ರಾದೇಶಿಕ ನಿರ್ದೇಶಕರ ಹುದ್ದೆಗೆ ಮಹಿಳೆ ನೇಮಕವಾಗಿದ್ದಾರೆ. ಈ ಬಗ್ಗೆ ಡಬುÉ éಎಚ್‌ಒ ಮಹಾ ನಿರ್ದೇಶಕ ಟೆಡೋರ್ಸ್‌ ಅಧನೋಂ ಗೆಬರ್ಸಸ್‌ ಅಭಿನಂದನೆ ಸಲ್ಲಿಸಿದ್ದಾರೆ.
 

Advertisement

Udayavani is now on Telegram. Click here to join our channel and stay updated with the latest news.

Next