Advertisement

ವೃತ್ತಿ ಜೀವನದ ಕಠಿನ ಓವರ್‌ ನೆನಪಿಸಿದ ಪಾಂಟಿಂಗ್‌

10:39 PM Apr 10, 2020 | Sriram |

ಸಿಡ್ನಿ: ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿರುವ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್‌ ತಮ್ಮ ಟೆಸ್ಟ್‌ ಕ್ರಿಕೆಟ್‌ ವೃತ್ತಿ ಬದುಕಿನಲ್ಲಿ ಎದುರಿಸಿದ ಅತ್ಯಂತ ಕಷ್ಟದ ಓವರ್‌ ಬಗ್ಗೆ ಹೇಳಿಕೊಂಡಿದ್ದಾರೆ.

Advertisement

ಪಾಂಟಿಂಗ್‌ ಅವರು ಆಸ್ಟ್ರೇಲಿಯ ತಂಡಕ್ಕೆ ಎರಡು ಬಾರಿ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಗೆದ್ದು ಕೊಟ್ಟ ಯಶಸ್ವಿ ನಾಯಕರಾಗಿದ್ದಾರೆ. 2005ರಲ್ಲಿ ನಡೆದ ಆ್ಯಶಸ್‌ ಟೆಸ್ಟ್‌ ಸರಣಿಯಲ್ಲಿ ಇಂಗ್ಲೆಂಡ್‌ ತಂಡದ ಆಲ್‌ರೌಂಡರ್‌ ಆ್ಯಂಡ್ರೂé ಫ್ಲಿಂಟಾಫ್ ಎಸೆದ ಒಂದು ಓವರ್‌ ತಮ್ಮ ವೃತ್ತಿ ಜೀವನದ ಅತ್ಯಂತ ಕಠಿನ ಓವರ್‌ ಎಂದು ಟ್ವೀಟ್‌ ಮಾಡಿದ್ದಾರೆ.

ಫ್ಲಿಂಟಾಫ್ ತನ್ನ ಅದ್ಭುತ ರಿವರ್ಸ್‌ ಸ್ವಿಂಗ್‌ ಬೌಲಿಂಗ್‌ ಮೂಲಕ ರಿಕಿ ಪಾಂಟಿಂಗ್‌ ಅವರನ್ನು ಔಟ್‌ ಮಾಡಿದ ವಿಡಿಯೋ ತುಣುಕನ್ನು ಇಂಗ್ಲೆಂಡ್‌ ಮತ್ತು ವೇಲ್ಸ… ಕ್ರಿಕೆಟ್‌ ಮಂಡಳಿ ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಟ್ವೀಟ್‌ ಮಾಡಿದೆ.

ಇದಕ್ಕೆ ಉತ್ತರ ನೀಡಿದ ರಿಕಿ ಪಾಂಟಿಂಗ್‌ ತಮ್ಮ ವೃತ್ತಿ ಬದುಕಿನಲ್ಲಿ ಎದುರಿಸಿದ ಅತ್ಯಂತ ಕಷ್ಟದ ಓವರ್‌ ಇದಾಗಿದೆ. ಸರಿ ಸುಮಾರು ಗಂಟೆಗೆ 150 ಕಿ.ಮೀ. ವೇಗದಲ್ಲಿ ಚೆಂಡು ಬರುತ್ತಿತ್ತು. ಅದು ಅದ್ಭುತ ರಿವರ್ಸ್‌ ಸ್ವಿಂಗ್‌ ಎಂದು ಪಾಂಟಿಂಗ್‌ ಹೇಳಿದ್ದಾರೆ. ಅದರಂತೆ ಈ ಪಂದ್ಯದಲ್ಲಿ ಇಂಗ್ಲೆಂಡ್‌ 2 ರನ್‌ಗಳ ರೋಚಕ ಜಯ ದಾಖಲಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next