Advertisement

ಕೆರೆಗೆ ಕಲ್ಲೆಸೆದ ವ್ಯಕ್ತಿ; ಕೆರೆ ನೀರನ್ನೇ  ಖಾಲಿ ಮಾಡಿದ ಗ್ರಾಮಸ್ಥರು

02:04 PM Jun 09, 2020 | sudhir |

ರಾಯಚೂರು: ಅನುಮಾನಂ ಪೆದ್ದ ರೊಗಂ ಎನ್ನುವ ಮಾತಿದೆ. ಈ ಗಾದೆ ಮಾತಿಗೆ ಪುಷ್ಟೀಕರಿಸುವಂಥ ಘಟನೆಯೊಂದು ಜಿಲ್ಲೆಯಲ್ಲಿ ನಡೆದಿದೆ. ದಾರಿಹೋಕ ಕುಡಿವ ನೀರಿನ ಕೆರೆ ಕಲ್ಲೆಸೆದಿದ್ದಕ್ಕೆ ಗ್ರಾಮಸ್ಥರು ಅನುಮಾನಗೊಂಡು ಕೆರೆ ನೀರನ್ನೆ ಖಾಲಿ ಮಾಡಿದ್ದಾರೆ.

Advertisement

ಜಿಲ್ಲೆಯ ಸಿರವಾರ ತಾಲೂಕಿನ ಶಾಖಾಪುರ ಗ್ರಾಮಸ್ಥರು ಕೆರೆ ನೀರು ಖಾಲಿ ಮಾಡಿ ಈಗ ಪೇಚಾಡುತ್ತಿದ್ದಾರೆ. ಸಮೀಪದ ಅತ್ತನೂರು ಗ್ರಾಮದ ನಿವಾಸಿ ಆ ಮಾರ್ಗವಾಗಿ ಹೋಗುವಾಗ ಕಲ್ಲೆಸೆದಿದ್ದಾನೆ. ಅದನ್ನು ಗಮನಿಸಿದ ಶಾಖಾಪುರ ಗ್ರಾಮಸ್ಥರು ಏನೋ ವಿಷಪೂರಿತ ವಸ್ತು ಎಸೆದಿರಬಹುದು ಎಂದು ಶಂಕೆಗೊಂಡಿದ್ದಾರೆ. ಕುಡಿವ ನೀರಿಗೆ ಏನೋ ಕಲಬೆರಕೆ ಮಾಡಿದ್ದಾನೆ ಎಂದು ಎಲ್ಲ ನೀರನ್ನು ಪಂಪ್ ಸೆಟ್ ಮೂಲಕ ಖಾಲಿ ಮಾಡಿದ್ದಾರೆ.

ಅಷ್ಟೇ ಅಲ್ಲದೆ ಪ್ರಕರಣ ಠಾಣೆ ಮೆಟ್ಟಿಲೇರಿದೆ. ಗ್ರಾಮಸ್ಥರು, ಸಿರವಾರ ಠಾಣೆ ಪೊಲೀಸರ ಸಮ್ಮುಖದಲ್ಲಿ ಕಲ್ಲೆಸೆದ ವ್ಯಕ್ತಿಯನ್ನು ವಿಚಾರಣೆ ಮಾಡಲಾಗಿದೆ. ಕಲ್ಲೆಸೆದ ವ್ಯಕ್ತಿ ಖುದ್ದು ಕೆರೆಯ ನೀರು ಕುಡಿದಿದ್ದಲ್ಲದೇ, ಕಲ್ಲೆಸೆದಿರುವುದಾಗಿ ಸ್ಪಷ್ಟಪಡಿಸಿದ್ದಾನೆ. ಗ್ರಾಮಸ್ಥರ ದುಡುಕಿನ ನಿರ್ಧಾರದಿಂದ ಈಗ ಕುಡಿವ ನೀರಿಗೆ ಸಮಸ್ಯೆ ತಲೆದೋರಿದೆ.

Advertisement

Udayavani is now on Telegram. Click here to join our channel and stay updated with the latest news.

Next