Advertisement

ತಲಪುರಿಗೆಗಳ ಸಂಶೋಧನೆ ನಡೆಸಿ ಅಭಿವೃದ್ಧಿ : ಸಂಸದ ಬಸವರಾಜು

03:36 PM Jun 23, 2022 | Team Udayavani |

ಕೊರಟಗೆರೆ: ಬರಗಾಲದಲ್ಲೂ ಬತ್ತದ ಜನರ ಜೀವನಾಡಿಯಾಗಿರುವ ತಲಪುರಿಗೆಗಳ ಸಂಶೋಧನೆ ನಡೆಸಿ ಅಭಿವೃದ್ಧಿಪಡಿಸಲಾಗುವುದು ಎಂದು ಸಂಸದ ಬಸವರಾಜು ಭರವಸೆ ನೀಡಿದರು.

Advertisement

ಕುರಂಕೋಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊಲತಾಳು ಗ್ರಾಮದಲ್ಲಿ ನಡೆದ ತಲಪುರಿಗೆ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿ.
ಮಳೆ ಕಡಿಮೆ ಬೀಳುವ ಪ್ರದೇಶಗಳಲ್ಲಿನ ತಲಪುರಿಗೆಗಳು ನೂರಾರು ವರ್ಷಗಳಿಂದ ಕೃಷಿ ಚಟುವಟಿಕೆಯನ್ನು ಉಳಿಸಿದೆ. ಸಂಪೂರ್ಣ ಮಾಹಿತಿಯನ್ನು ಕೇಂದ್ರದ ನೀರಾವರಿ ಸಚಿವರ ಗಮನಕ್ಕೆ ತರುತ್ತೇನೆ ಎಂದರು.

ಪ್ರೊ ಸಿದ್ದಗಂಗಯ್ಯ ಹೊಲತಾಳು ಸಿದ್ದರಬೆಟ್ಟದ ಸುತ್ತಮುತ್ತಲಿನ ಜಲ ಮೂಲಗಳ ಬಗ್ಗೆ ಮಾಹಿತಿ ನೀಡಿದರು. ಸಿದ್ದರಬೆಟ್ಟದ ತಲಪುರಿಗೆಗಳ ಪುನಶ್ಚೇತನ ಗೊಳಿಸಲು ಹಾಗೂ ರೈತರಿಗೆ ಮತ್ತು ಕುಡಿಯುವ ನೀರಿಗಗಾಗಿ ತಲಪುರಿಗೆಗಳಿಂದಾಗುವ ಪ್ರಯೋಜನದ ಬಗ್ಗೆ ವಿವರಿಸಿದರು.

ಸಿದ್ದರಬೆಟ್ಟದ ತಪ್ಪಲಿನ ನೀರು ವಿವಿಧ ರೋಗಗಳನ್ನು ತಡೆಯುವ ಮತ್ತು ನಿವಾರಿಸುವ ಗುಣ ಹೊಂದಿದೆ. ಇಂತಹ ನೀರನ್ನು ವ್ಯವಸ್ಥಿತವಾಗಿ ಅವಶ್ಯಕತೆ ಇರುವವರಿಗೆ ತಲುಪಿಸಬೇಕು ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ನೀರಾವರಿ ಹೋರಾಟಗಾರ ಕುಂದರನಹಳ್ಳಿ ರಮೇಶ್, ಮುಖಂಡರಾದ ವೆಂಕಟೇಶ್, ದೊಡ್ಡನರಸಪ್ಪ ಗ್ರಾಪಂ ಅದ್ಯಕ್ಷೆ ಶೈಲಜಾ, ಉಪಾಧ್ಯಕ್ಷೆ ಸುಶೀಲಮ್ಮ, ನೇಗಲಾಲದ ನಂಜಾರಾಧ್ಯ, ಶಿವರುದ್ರಪ್ಪ, ಸದಸ್ಯರಾದ ಸಿದ್ದರಾಜು, ಕುಮಾರ್ ದೊಡ್ಡಯ್ಯ ಪತ್ರಿಕಾ ವರದಿಗಾರ ಶಿವಾನಂದ್ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next