ದೇವನಹಳ್ಳಿ: ಬಯಲು ಸೀಮೆ ಪ್ರದೇಶವಾಗಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ದಾಳಿಂಬೆಗೆ ದುಂಡಾಣು ಮತ್ತು ಚುಕ್ಕಿ ರೋಗ ಕಾಣಿಸಿಕೊಂಡಿದ್ದು ರೈತರಲ್ಲಿ ಆತಂಕ ಮನೆ ಮಾಡಿದೆ.
ದಾಳಿಂಬೆ ಲಾಭದಾಯಕ ಬೆಳೆಯಾಗಿದ್ದು, ಬಯಲು ಸೀಮೆ ಪ್ರದೇಶಕ್ಕೆ ಹೊಂದುವ ಬೆಳೆಯಾಗಿದೆ. ದಾಕ್ಷಿ ಮತ್ತು ತರಕಾರಿ ಮತ್ತು ಹೂ, ಹಣ್ಣು ಬೆಳೆಗಳನ್ನು ಬೆಳೆದು ರೈತರು ಜೀವನ ಸಾಗಿಸುತ್ತಿದ್ದಾರೆ.
ರೋಗ ತಡೆಗೆ ಕ್ರಮ ವಹಿಸಿ: ರೋಗ ರಹಿತ ಸಸಿಗಳನ್ನು ನಾಟಿಗೆ ಉಪಯೋಗಿಸಬೇಕು. ಶಿಫಾರಸ್ಸು ಮಾಡಿದ ಪೋಷಕಾಂಶಗಳು ಜೊತೆಗೆ ಕೊಟ್ಟಿಗೆ ಗೊಬ್ಬರ ಅಥವಾ ಎರೆ ಹುಳುವಿನ ಗೊಬ್ಬರ ಹೆಚ್ಚಾಗಿ ಬಳಸುವುದರಿಂದ ರೋಗದ ತೀವ್ರತೆ ಕಡಿಮೆ ಗೊಳಿಸಬಹುದು. ದಾಳಿಂಬೆ ತೋಟ ಸ್ವತ್ಛವಾಗಿ ಡುವುದು. ರೋಗ ಪೀಡಿತ ಎಲೆ, ಕಾಂಡ ಮತ್ತು ಕಾಯಿಗಳನ್ನು ಕಿತ್ತು ಸುಡಬೇಕು. ಇದರಿಂದ ರೋಗ ತಡೆಗಟ್ಟ ಬಹುದು. ರೋಗ ತಗಲಿದ ಎಲೆಗಳ ಸೋಂಕನ್ನು ಕಡಿಮೆ ಮಾಡಲು ಶೇ.ಒಂದರ ಬೋರ್ಡ್ ದ್ರಾವಣ ಸಿಂಪಡಿಸುವುದು. ಪ್ರತಿ ಲೀ.ನೀರಿಗೆ 2.0 ರಿಂದ 2.5 ಇಧೆÅàಲ್ ಬೆಳೆಸಿ ಸಿಂಪಡಿಸಿ ಎಲೆ ಉದುರಿ ಸಬೇಕು. ಪ್ರತಿ ಜೀವ ನಾಶಕ (ದುಂಡಾಣು ನಾಶಕ)ದ ಸಿಂಪಡಣೆ ನಂತರ ಸತುವಿನ ಸಲ್ಫೆಟ್ ಒಂದು ಗ್ರಾಂ ಮೆಗ್ನೆಶಿಯಂ ಸಲ್ಫೆಟ್ ಒಂದು ಗ್ರಾಂ ಸುಣ್ಣದ ಸಲ್ಫೆಟ್ ಹಾಗೂ ಬೋರಾನ್ ಒಂದು ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಣೆ ಮಾಡುವುದರಿಂದ ಸಸ್ಯಗಳಲ್ಲಿ ರೋಗ ನಿರೋಧಕತೆ ಹೆಚ್ಚಿಸಿ ರೋಗದ ತೀವ್ರತೆ ಕಡಿಮೆಗೊಳಿಸಬಹುದು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಲಹೆ ನೀಡಿ ದ್ದಾರೆ.
ರೋಗ ಬಾಧೆ ಹೆಚ್ಚಳ: ಬೆಂಗಳೂರು ಗ್ರಾಮಾಂತರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಅತಿಹೆಚ್ಚು ದಾಳಿಂಬೆ, ಪಪ್ಪಾಯಿ, ದ್ರಾಕ್ಷಿ ಇತರೆ ಬೆಳೆ ಬೆಳೆಯಲು ಪೈಪೋಟಿಯಿದ್ದು, ಇಂತಹ ವೇಳೆ ದಾಳಿಂಬೆ ಬೆಳೆಗೆ ದುಂಡಾಣು ಮತ್ತು ಚುಕ್ಕೆ ರೋಗ ಕಾಣಿಸಿಕೊಂಡಿದ್ದು ಬಹು ತೇಕ ಬೆಳೆ ಕೈ ಸುಟ್ಟಿದೆ. ಹಾಗಾಗಿ ಗಿಡ ಅಗೆದು ಹಾಕಲು ರೈತರು ಮುಂದಾ ಗಿ ದ್ದಾರೆ. ಬೆಂ.ಗ್ರಾಮಾಂತರ ಜಿಲ್ಲೆ ಯಷ್ಟೇ ಅಲ್ಲ ದೇ ಚಿಕ್ಕಬಳ್ಳಾಪುರ, ಕೋಲಾರ, ಗ್ರಾಮಾಂತರ, ಪ್ರದೇಶಗಳಲ್ಲಿ ಸಾಕಷ್ಟು ಹಣ ಖರ್ಚು ಮಾಡಿ ದಾಳಿಂಬೆ ಬೆಳೆ ನಾಟಿ ಮಾಡಿದ್ದಾರೆ.
ಕೀಟ ಬಾಧೆ ತಡೆಯೇ ಸವಾಲು: ದಾಳಿಂಬೆ ಗಿಡದ ಎಲೆ ಮತ್ತು ಕಾಯಿಗಳ ಮೇಲೆ ಕಪ್ಪು ಚುಕ್ಕೆ ಆಕಾರದಲ್ಲಿ ಕಾಣಿಸುವ ದುಂಡಾಣು ರೋಗ ದಿನದಿಂದ ದಿನಕ್ಕೆ ವ್ಯಾಪಿಸುತ್ತಿದೆ. ಅತಿಯಾದ ಮಳೆ, ಬಿಸಿಲು ರೈತರಿಗೆ ಶಾಪವಾಗಿ ಪರಿಣಮಿಸಿದೆ. ದುಂಡಾಣು ರೋಗದ ಜತೆಗೆ ಈ ಬಾರಿ ಕಾಯಿ ಕೊರಕ ರೋಗ ಕಾಣಿಸಿಕೊಂಡಿದ್ದು ಬಹುತೇಕ ರೈತರು ನೂರಾರು ಕ್ವಿಂಟಲ್ ದಾಳಿಂಬೆ ಹಣ್ಣು ಕಿತ್ತು ತಿಪ್ಪೆಗೆ ಹಾಕಿರುವುದು ಕಂಡುಬಂದಿದೆ. ಇದು ದಾಳಿಂಬೆ ಬೆಳೆಗಾರರು ಕುಸಿಯುವಂತೆ ಮಾಡಿದೆ. ತಿಂಗಳಿಗೆ 25 ಸಾವಿರ ಹಣ ನೀಡಿ ಕ್ರಿಮಿನಾಶಕ ಸಿಂಪಡಣೆ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದರೂ ನೂರಾರು ಟನ್ ದಾಳಿಂಬೆ ಹಾನಿಗೀಡಾಗಿದೆ. ಹವಾಮಾನ ಆಧರಿತ ರೋಗಾಣು ನಿಯಂತ್ರಣ ಸವಾಲಾಗಿ ಪರಿಣಮಿಸಿದೆ.
ದಾಳಿಂಬೆ ಬೆಳೆಯನ್ನು ದೇವನಹಳ್ಳಿ ತಾಲೂಕಿನಲ್ಲಿ ಹೆಚ್ಚು ರೈತರು ಬೆಳೆಯುತ್ತಿದ್ದಾರೆ. ದುಂಡಾಣು ಮತ್ತು ಚುಕ್ಕ ರೋಗವು ಜಿಲ್ಲೆಯಲ್ಲಿ ಶೇ.30ರಷ್ಟಿದೆ. ಈ ರೋಗ ಬಂದಾಗ ರೈತರ ಸಾಕಷ್ಟು ಸಮಗ್ರ ನಿರ್ವಹಣೆಗಾಗಿ ಅನುಸರಿಸಬೇಕಾದ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಈ ರೋಗಗಳು ಅಷ್ಟು ಪರಿಣಾಮಕಾರಿಯಾಗಿಲ್ಲ. ದುಂಡಾಣು ಮತ್ತು ಚುಕ್ಕೆ ರೋಗ ಸಂಬಂಧಪಟ್ಟಂತೆ ರೈತರಿಗೆ ತರಬೇತಿಗಳನ್ನು ನೀಡುವುದರ ಮೂಲಕ ಅರಿವು ಮೂಡಿಸಲಾಗುವುದು
. – ಗುಣವಂತ, ಉಪನಿರ್ದೇಶಕರು ಜಲ್ಲಾ ತೋಟಗಾರಿಕೆ ಇಲಾಖೆ
ದುಂಡಾಣು ಮತ್ತು ಚುಕ್ಕೆ ರೋಗದ ಬಗ್ಗೆ ತೋಟಗಾರಿಕೆ ಅಧಿಕಾರಿಗಳು ರೈತರಿಗೆ ಹೆಚ್ಚಿನ ಮಾಹಿತಿ ನೀಡಬೇಕು. ದಾಳಿಂಬೆ ಬೆಳೆಯನ್ನು ಸಾಲ ಸೋಲ ಮಾಡಿ ಬೆಳೆಯುತ್ತಿದ್ದೇವೆ. ಇಂತಹ ರೋಗಗಳು ರೈತರನ್ನು ಕಾಡುತ್ತಿದೆ. ದಾಳಿಂಬೆ ಬೆಳೆಯು ಲಾಭದಾಯಕ ಬೆಳೆಯಾಗಿದೆ.
– ವಿನಯ್, ದಾಳಿಂಬೆ ಬೆಳೆಗಾರ
– ಎಸ್.ಮಹೇಶ್