Advertisement

ಪಾಲಿಟೆಕ್ನಿಕ್ ಪ್ರವೇಶ; ಸೆ.20ರವರೆಗೆ ಕಾಲಾವಕಾಶ

06:28 PM Sep 02, 2021 | Team Udayavani |

ಬೆಂಗಳೂರು: 2021-22ನೇ ಸಾಲಿನ ಡಿಪ್ಲೊಮಾ ಪ್ರಥಮ ಸೆಮಿಸ್ಟರ್ ಪ್ರವೇಶಕ್ಕೆ ಮೊದಲ ಬಂದವರಿಗೆ ಆದ್ಯತೆ ನೀಡಲಾಗುತ್ತಿದ್ದು, ಈ ತಿಂಗಳ 20 ರವರೆಗೆ ಪ್ರವೇಶಾವಕಾಶ ವಿಸ್ತರಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.

Advertisement

ಈ ಬಗ್ಗೆ ಹೇಳಿಕೆ ನೀಡಿರುವ ಅವರು, ರಾಜ್ಯದ 62 ಸರಕಾರಿ, 34 ಅನುದಾನಿತ ಪಾಲಿಟೆಕ್ನಿಕ್ʼಗಳಲ್ಲಿ ಪ್ರವೇಶಾವಕಾಶವನ್ನು ಸೆ. 20ರ ಸಂಜೆ ಕಚೇರಿ ಅವಧಿವರೆಗೂ ವಿಸ್ತರಿಸಲಾಗಿದೆ. ವಿದ್ಯಾರ್ಥಿಗಳು ಈ ಅವಕಾಶ ಪಡೆದುಕೊಂಡು ದಾಖಲಾಗಬೇಕು  ಎಂದು ಸಚಿವರು ತಿಳಿಸಿದ್ದಾರೆ.

ಪ್ರವೇಶಾವಧಿಯನ್ನಿ ವಿಸ್ತರಣೆ ಮಾಡುವಂತೆ ಎಲ್ಲ ಪಾಲಿಟೆಕ್ನಿಕ್ʼಗಳ ಪ್ರಾಂಶುಪಾಲರು ಕೋರಿಕೆ ಸಲ್ಲಿಸಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next