ಕಾಪು: ಇಲ್ಲಿನ ಪೊಲಿಪು ಮಕ್ಕಳ ಶ್ರೀ ಮಹಾಲಕ್ಷ್ಮೀ ಭಜನ ಮಂದಿರದ ಸುವರ್ಣ ಮಹೋತ್ಸವ, ಬ್ರಹ್ಮಕಲಶದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಂದಿರ ಸ್ಥಾಪನೆೆಯ ಸಂದರ್ಭ ಆರಾಧನೆಗೆ ಸಹಕಾರ ನೀಡಿದ ಮತ್ತು ಪ್ರಸ್ತುತ ಮಂದಿರದ ಸ್ಥಳದಾನಿಗಳನ್ನು ಸಮ್ಮಾನಿಸಲಾಯಿತು.
ಸ್ಥಾಪನೆಯ ಕಾಲಘಟ್ಟದಲ್ಲಿ ಸಹಕರಿಸಿದ ತಬರ ಮನೆ ವಸಂತಿ ಮೋನಪ್ಪ ಕೋಟ್ಯಾನ್, ನಕ್ರಮನೆ ಪಾಂಡು ಸುವರ್ಣ, ಸ್ಥಳದಾನಿಗಳಾದ ಚಂದು ಕರ್ಕೇರ ಮನೆ ಅಂಗರಿ ಕರ್ಕೇರ, ಚಂದ್ರಿಕಾ ಗಂಗಾಧರ ಸಾಲ್ಯಾನ್ ದಂಪತಿ ಇವರನ್ನು ಸಮ್ಮಾನಿಸಲಾಯಿತು.
ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಉಚ್ಚಿಲ ಇದರ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು.
ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ| ನಿ.ಬಿ. ವಿಜಯ ಬಲ್ಲಾಳ್, ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ದ.ಕ. ಜಿಲ್ಲಾ ಮೀನುಗಾರಿಕೆ ಫೆಡರೇಶನ್‌ನ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಉದ್ಯಮಿ ಯೋಗೀಶ್ ಶೆಟ್ಟಿ ಬಾಲಾಜಿ, ಕಾಪು ಶ್ರೀ ಹಳೇ ಮಾರಿಯಮ್ಮ ದೇಗುಲದ ಆಡಳಿತ ಮೋಕ್ತೇಸರ ಪ್ರಸಾದ್ ಗೋಕುಲ್‌ದಾಸ್ ಶೆಣೈ, ಉದ್ಯಮಿ ಪ್ರಭಾಕರ ಪೂಜಾರಿ, ಕಾಪು ಬಿಲ್ಲವರ ಸಹಾಯಕ ಸಂಘದ ಅಧ್ಯಕ್ಷ ವಿಕ್ರಮ್, ಕಾಪು ಪುರಸಭೆ ಸದಸ್ಯ ವಿಜಯ ಕರ್ಕೇರ, ನ್ಯಾಯವಾದಿ ಸಹನಾ ಕುಂದರ್ ಸೂಡ, ಮತೊÕéàದ್ಯಮಿ ಪಿ.ಎಸ್.ಕೆ., ಕಾಪು ಮೊಗವೀರ ಮಹಾಸಭಾ ಅಧ್ಯಕ್ಷ ಪಾಂಡುರಂಗ ಜೆ. ಕೋಟ್ಯಾನ್, ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷ ಮೋಹನ್ ಎಂ. ಬಂಗೇರ, ಗೌರವಾಧ್ಯಕ್ಷ ತಾರಾನಾಥ್ ಕೋಟ್ಯಾನ್, ಮಕ್ಕಳ ಶ್ರೀ ಮಹಾಲಕ್ಷ್ಮೀ ಭಜನ ಮಂದಿರದ ಅಧ್ಯಕ್ಷ ಭಾಸ್ಕರ ಅಮೀನ್, ಮುಂಬಯಿ ಬಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಟಿ.ಜೆ. ಮೆಂಡನ್, ಕುಶಲ ಅಮೀನ್, ಶ್ರೀ ಮಹಾಲಕ್ಷ್ಮೀ ಮಹಿಳಾ ಮಂಡಳಿಯ ಅಧ್ಯಕ್ಷೆ ಸುಲೋಚನಿ ಕುಂದರ್ ಉಪಸ್ಥಿತರಿದ್ದರು.