Advertisement

ಬಹುಗ್ರಾಮ ಕುಡಿಯುವ ನೀರು ಅಂತಿಮ ಹಂತದಲ್ಲಿ: ಸಚಿವ ಪ್ರಮೋದ್‌

07:10 AM Aug 13, 2017 | Team Udayavani |

ಬ್ರಹ್ಮಾವರ: ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅಂತಿಮ ಹಂತ ತಲುಪಿದೆ. ಉಡುಪಿ ವಿಧಾನ ಸಭಾ ಕ್ಷೇತ್ರದ ಚಾಂತಾರು ವಲಯ ದಲ್ಲಿ 48 ಕೋಟಿ ರೂ. ಹಾಗೂ ತೆಂಕನಿಡಿಯೂರು ವಲಯದಲ್ಲಿ 35 ಕೋಟಿ ರೂ.ಗಳ ಯೋಜನೆ ತಯಾ ರಿಸಲಾಗಿದೆ. ಸದ್ಯದಲ್ಲಿ ಟೆಂಡರ್‌ ಕರೆದು ಕಾರ್ಯಾರಂಭವಾಗಲಿದೆ ಎಂದು ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದರು.

Advertisement

ಅವರು ಗುರುವಾರ ಕೊಕ್ಕರ್ಣೆ ಶಿವಗಿರಿ ನಾರಾಯಣಗುರು ಸಭಾಭವನದಲ್ಲಿ ಪೆಜಮಂಗೂರು ಗ್ರಾಮ ಮಟ್ಟದ ಜನಸಂಪರ್ಕ ಸಭೆ ಉದ್ಘಾಟಿಸಿ ಮಾತ ನಾಡಿದರು. ಉಡುಪಿ ಕ್ಷೇತ್ರದಲ್ಲಿ ಸುಮಾರು 16,000 ಬಿಪಿಎಲ್‌ ಕಾರ್ಡ್‌ ವಿತರಿಸಲಾಗಿದೆ. ಬಿಪಿಎಲ್‌ ಕಾರ್ಡ್‌ನಿಂದ ಹತ್ತು ಹಲವು ಸೌಲಭ್ಯಗಳು ದೊರೆಯಲಿವೆ ಎಂದರು.

ಲಕ್ಷಾಂತರ ರೂ. ಅನುದಾನ
ಪ್ರಾರಂಭದಲ್ಲಿ ಹಕ್ಕುಪತ್ರ, ಅನಂತರ ಮನೆ, ಹಟ್ಟಿ , ಬಾವಿ ರಚನೆಗೆ ಅನುದಾನ, ಹೈನುಗಾರಿಕೆ, ಕುಕ್ಕುಟೋದ್ಯ ಮಕ್ಕೆ ಸಹಾಯಧನ, ಉಚಿತ ವಿದ್ಯುತ್‌ ಸಂಪರ್ಕ, ಹತ್ತು ಹಲವು ಯೋಜನೆ ಗಳು. ಹೀಗೆ ಕುಟುಂಬವೊಂದಕ್ಕೆ ಲಕ್ಷಾಂತರ ರೂ. ಅನುದಾನವನ್ನು ರಾಜ್ಯ ಸರಕಾರ ನೀಡುತ್ತಿದೆ ಎಂದು ಸಚಿವ ಪ್ರಮೋದ್‌ ಹೇಳಿದರು. ಜಿ.ಪಂ. ಸದಸ್ಯ ಮೈರ್ಮಾಡಿ ಸುಧಾಕರ ಶೆಟ್ಟಿ, ಅಕ್ರಮ ಸಕ್ರಮ ಬಗರ್‌ ಹುಕುಂ ಸಮಿತಿ ಅಧ್ಯಕ್ಷ ಮೈರ್ಮಾಡಿ ಅಶೋಕ್‌ ಕುಮಾರ್‌ ಶೆಟ್ಟಿ, ತಾ.ಪಂ. ಸದಸ್ಯರಾದ ಭುಜಂಗ ಶೆಟ್ಟಿ, ಡಾ| ಸುನೀತಾ ಡಿ. ಶೆಟ್ಟಿ, ಪಂಚಾಯತ್‌ ಅಧ್ಯಕ್ಷೆ ಆಶಾಲತಾ, ಉಪಾಧ್ಯಕ್ಷೆ ದೇವಕಿ ಕೋಟ್ಯಾನ್‌, ಸದಸ್ಯರು, ವಿಶೇಷ ತಹಶೀಲ್ದಾರ್‌ ಪ್ರದೀಪ್‌ ಕುಡೇìಕರ್‌, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಮೋಹನ್‌ರಾಜ್‌ ಮತ್ತಿತರರು ಉಪಸ್ಥಿತರಿದ್ದರು.

ವಿವಿಧ ಫಲಾನುಭವಿಗಳಿಗೆ ಸವಲತ್ತು ವಿತರಿಸಲಾಯಿತು. ಕಂದಾಯ ನಿರೀಕ್ಷಕ ಲಕ್ಷ್ಮೀನಾರಾ ಯಣ ಭಟ್‌ ಸ್ವಾಗತಿಸಿ, ತಾ.ಪಂ. ಮಾಜಿ ಅಧ್ಯಕ್ಷ ನಿತ್ಯಾನಂದ ಶೆಟ್ಟಿ ಹಾರಾಡಿ ಪ್ರಸ್ತಾವನೆಗೈದರು. ಪಿಡಿಒ ಪ್ರದೀಪ್‌ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next