Advertisement

Assam: ಅಸ್ಸಾಂನಲ್ಲಿ ಬಹುಪತ್ನಿತ್ವ ನಿಷೇಧ!

08:55 PM Jul 13, 2023 | Team Udayavani |

ಗುವಾಹಟಿ: ಬಹುಪತ್ನಿತ್ವ ವ್ಯವಸ್ಥೆಯನ್ನು ಅಸ್ಸಾಂನಲ್ಲಿ ತಕ್ಷಣದಿಂದಲೇ ನಿಷೇಧಿಸಲು ರಾಜ್ಯ ಸರ್ಕಾರ ಯೋಜಿಸುತ್ತಿದೆ. ಮುಂಬರಲಿರುವ ವಿಧಾನಸಭೆ ಅಧಿವೇಶನದಲ್ಲಿ ಈ ಸಂಬಂಧಿಸಿದ ಮಸೂದೆಯನ್ನು ಮಂಡಿಸಲಾಗುವುದು ಎಂದು ಸಿಎಂ ಹಿಮಂತ ಬಿಸ್ವಾ ಶರ್ಮ ಗುರುವಾರ ತಿಳಿಸಿದ್ದಾರೆ. ಭಾರತದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿ ವಿಚಾರದ ಕುರಿತು ಚರ್ಚೆಗಳ ನಡುವೆಯೇ, ಅಸ್ಸಾಂ ಸರ್ಕಾರದ ಈ ನಿಲುವು ಮಹತ್ವ ಪಡೆದುಕೊಂಡಿದೆ.

Advertisement

ಈಗಾಗಲೇ ಈ ಸಂಬಂಧಿಸಿದ ಕಾನೂನು ಅಂಶಗಳನ್ನು ಅನ್ವೇಷಿಸಲು ಸಮಿತಿಯನ್ನು ರಚಿಸಲಾಗಿತ್ತು. ವರದಿಗಳು ಸಿದ್ಧವಾಗಿವೆ. ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಮಸೂದೆ ಮಂಡಿಸುತ್ತೇವೆ. ಒಂದು ವೇಳೆ ಆಗ ಸಾಧ್ಯವಾಗದಿದ್ದಲ್ಲಿ, ಜನವರಿಯಲ್ಲಿ ಮಂಡಿಸುತ್ತೇವೆ. ಯುಸಿಸಿ ಜಾರಿಯಾದರೆ, ತಾನಾಗಿಯೇ ಬಹುಪತ್ನಿತ್ವ ವ್ಯವಸ್ಥೆ ರದ್ದುಗೊಳ್ಳುತ್ತದೆ ಆಗ ಈ ಕಾನೂನಿನ ಅಗತ್ಯವಿರುವುದಿಲ್ಲ. ಇಲ್ಲದಿದ್ದರೆ ರಾಜ್ಯದಲ್ಲಿ ಕಾನೂನು ರೂಪಿಸಲು ಮಸೂದೆ ಮಂಡಿಸುತ್ತೇವೆ. ಬಹುಪತ್ನಿತ್ವ ನಿಷೇಧವನ್ನು ಆಕ್ರಮಣದಿಂದಲ್ಲ, ಒಮ್ಮತದಿಂದಲೇ ನಿಷೇಧಿಸುತ್ತೇವೆ ಎಂಬ ಭರವಸೆಯನ್ನೂ ಬಿಸ್ವಾ ವ್ಯಕ್ತ ಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next