Advertisement

ಮಾಲಿನ್ಯ ತಡೆಗೆ ಸುಸ್ಥಿರ-ಜೈವಿಕ ಕೃಷಿ ಅಗತ್ಯ

10:02 AM Feb 20, 2018 | |

ಆಳಂದ: ಮಾಲಿನ್ಯ ನಿಯಂತ್ರಿಸಲು ಸುಸ್ಥಿರ ಮತ್ತು ಜೈವಿಕ ಕೃಷಿ ತಂತ್ರಗಳ ಬಳಕೆ ಅತ್ಯಂತ ಅಗತ್ಯವಾಗಿದೆ ಎಂದು ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಕೆ.ಎಸ್‌. ಅನಂತಮೂರ್ತಿ ಹೇಳಿದರು.

Advertisement

ತಾಲೂಕಿನ ಕಡಗಂಚಿ ಬಳಿ ಇರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಭೂ ವಿಜ್ಞಾನ ನಿಕಾಯ ಸೋಮವಾರ ಹಮ್ಮಿಕೊಂಡಿದ್ದ ಭೂಮಿ ಸಂಪನ್ಮೂಲಗಳು ಮತ್ತು ಸುಸ್ಥಿರತೆ ಕುರಿತ ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಭೂಮಿಯಲ್ಲಿನ ಸಂಪನ್ಮೂಲಗಳು ಅತ್ಯಂತ ಮೌಲ್ಯಯುಕ್ತವಾದವುಗಳು ಮತ್ತು ಮಾನವನ ಅಭಿವೃದ್ಧಿಗೆ ಅತ್ಯವಶ್ಯಕವಾದವುಗಳಾಗಿವೆ ಎಂದು ಹೇಳಿದರು.

1990ರ ದಶಕದವರೆಗೆ ಅವುಗಳ ನಿರ್ವಹಣೆ ಕುರಿತು ಅಷ್ಟೊಂದು ಯೋಚಿಸಲಾಗಿರಲಿಲ್ಲ. ಭೂಮಿ ಕಡಿಮೆ ಲವಣಾಂಶವಿರುವ (ಕಟ್ಟಡ ಸಾಮಗ್ರಿಗಳು) ಲೋಹರಹಿತ (ರಸಾಯನಿಕ) ಮತ್ತು ಲೊಹ ಆಧಾರಿತ ಎಂದು ಮೂರು ಬಗೆಯ ಸಂಪನ್ಮೂಲ ಹೊಂದಿದೆ. ಸುಸ್ಥಿರ ಅಭಿವೃದ್ಧಿಗೆ ಇವುಗಳ ಯೋಚನಾಪೂರಕ ಬಳಕೆ ಮತ್ತು ನಿರ್ವಹಣೆ ಅತ್ಯವಶ್ಯಕವಾಗಿದೆ ಎಂದು ಹೇಳಿದರು.

ಕೆಲವು ವರ್ಷಗಳ ಹಿಂದೆ ಮರಳು (ಉಸುಕು) ಉಚಿತವಾಗಿ ಮತ್ತು ಬೇಕಾದಾಗ ಸಿಗುತಿತ್ತು. ಆದರೆ ವಿವೇಚನಾರಹಿತ ಬಳಕೆ ಮತ್ತು ನಿರ್ವಹಣೆ ಕೊರತೆಯಿಂದ ಈಗ ಅದು ಬಹಳಷ್ಟು ದುಬಾರಿಯಾಗಿದೆ. ಬೇಕಾದ ಪ್ರಮಾಣದಲ್ಲಿ
ಸಿಗದಂತಾಗಿದೆ. ಅದಕ್ಕಾಗಿ ನಾವು ಪರ್ಯಾಯವಾದ ಎಂ-ಸ್ಯಾಂಡ್‌ ಬಳಸುವ ಪರಿಸ್ಥಿತಿ ಬಂದಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ವಿವಿ ಕುಲಪತಿ ಪ್ರೊ| ಎಚ್‌.ಎಂ. ಮಹೇಶ್ವರಯ್ಯ ಮಾತನಾಡಿ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಕೂಡ ನಾವು ಭೂಮಿ ಸಂಪನ್ಮೂಲ ನಿರ್ವಹಣೆ ಮಾಡುವ ಅವಶ್ಯಕತೆಯಿದೆ. ಅದನ್ನು ನಾವು ಮಾಡುತ್ತಿದ್ದೇವೆ. ನಮ್ಮೆಲ್ಲ ಕಟ್ಟಡಗಳು ಹಸಿರು ಕಟ್ಟಡಗಳಾಗಿವೆ. ಮಳೆ ನೀರಿನ ಪುನರ ಬಳಕೆ ವ್ಯವಸ್ಥೆ ಹೊಂದಿವೆ. ನಮ್ಮಲ್ಲಿ ಬಳಸಿದ ನೀರನ್ನು ಸ್ವತ್ಛಗೊಳಿಸಿ ಮತ್ತೆ ಬಳಸಲು ಯೊಗ್ಯವಾಗುವಂತೆ ಎರಡು ಯಂತ್ರ (ಎಸ್‌ಟಿಪಿ) ಅಳವಡಿಸಲಾಗಿದೆ.

Advertisement

ಸುಸ್ತಿರ ಅಭಿವೃದ್ಧಿಗೆ ಸಂಪನ್ಮೂಲಗಳ ಯೋಚಿತ ಬಳಕೆ ಅತ್ಯವಶ್ಯಕವಾಗಿದೆ ಎಂದು ಹೇಳಿದರು. ಭೂವಿಜ್ಞಾನ ನಿಖಾಯದ ಡಿನ್‌ ಪ್ರೊ| ಮೊಹಮ್ಮದ್‌ ಅಸ್ಲಾಮ್‌, ಪ್ರೊ| ಸಿ. ರಾಮಸ್ವಾಮಿ, ಪ್ರೊ| ಎಂ.ವಿ. ಅಲಗವಾಡಿ, ಪ್ರೊ| ಪುಷ್ಪಾ ಎಂ. ಸವದತ್ತಿ, ಪ್ರೊ| ಅಸ ಕ್‌ ಅಹಮ್ಮದ್‌, ಪ್ರೊ| ಚನ್ನವೀರ ಆರ್‌. ಎಂ., ಸಮ್ಮೇಳನದ ಸಂಯೋಜಕ ಡಾ| ಅರ್ಚನಕುಜೂರ ಇದ್ದರು.

ಸಮ್ಮೇಳನದಲ್ಲಿ ಆಸ್ಟ್ರೇಲಿಯಾದ 20 ಸಂಶೋಧಕ ಸೇರಿ ದೇಶದ ವಿವಿಧ ಭಾಗಗಳಿಂದ ಸುಮಾರು 50ಕ್ಕೂ ಹೆಚ್ಚು ಸಂಶೋಧಕರು ಭಾಗವಹಿಸಿದ್ದು, ಅವರು ತಮ್ಮ ಲೇಖನ ಮಂಡಿಸಲಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next