Advertisement

ರಾಷ್ಟ್ರ ರಾಜಧಾನಿಯಲ್ಲಿ ಸುಧಾರಿಸಿದ ವಾಯು ಮಾಲಿನ್ಯ ಮಟ್ಟ

09:09 AM Oct 03, 2019 | Team Udayavani |

ಹೊಸದಿಲ್ಲಿ: ಕಳೆದ ಒಂದು ವರ್ಷದಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ವಾಯು ಮಾಲಿನ್ಯದ ಮಟ್ಟ  ಸುಧಾರಿಸಿದೆ ಎಂದು ಅಲ್ಲಿನ ಸಂಶೋಧನಾ ಸಂಸ್ಥೆಯ ವರದಿಯೊಂದು ತಿಳಿಸಿದೆ. ಹೊಸದಿಲ್ಲಿಯ ಸೆಂಟರ್‌ ಫಾರ್‌ ಸೈನ್ಸ್‌ ಅಂಡ್‌ ಎನ್ವಿರಾನ್ಮೆಂಟ್‌ (ಸಿ.ಎಸ್‌.ಇ.) ಅಧ್ಯಯನ ಕೇಂದ್ರ ವಾಯುಮಾಲಿನ್ಯದ ಸ್ಥಿತಿಗತಿ ತಿಳಿದುಕೊಳ್ಳುವ ದೃಷ್ಟಿಯಿಂದ ಸಂಶೋಧನೆ ನಡೆಸಿದ್ದು, ಶೇ.25 ಮಾಲಿನ್ಯದ ಮಟ್ಟ ಸುಧಾರಿಸಿದೆ ಎಂದು ತನ್ನ ವರದಿಯಲ್ಲಿ ಅದು ತಿಳಿಸಿದೆ.

Advertisement

ಪಿ.ಎಂ. 2.5 ವಿಷ ಕಣಗಳ ಇಳಿಕೆ
ವಾಯುಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿದ್ದ ಪಿ.ಎಂ.2.5 ವಿಷ ಕಣಗಳ ಮಟ್ಟ ಇಳಿಕೆಯಾಗಿದ್ದು, ಇದು ವಾಹನಗಳ ಹೊಗೆಯಿಂದ ಉತ್ಪತ್ತಿಯಾಗುವ ಅತ್ಯಂತ ವಿಷಕಾರಿ ಕಣಗಳಾಗಿವೆ. ಇನ್ನೂ ಈ ವಿಷಕಣಗಳಿಂದ ಹೆಚ್ಚು ಮಾಲಿನ್ಯ ಉಂಟಾಗುತ್ತಿದ್ದು, ಕಳೆದ ಎರಡು ವರ್ಷಗಳಲ್ಲಿ ಇದರ ಮಟ್ಟ ಸಾಕಷ್ಟು ಪ್ರಮಾಣದಲ್ಲಿ ಕುಸಿದಿದೆ ಎಂದು ಸಂಶೋಧನಾ ವರದಿ ತಿಳಿಸಿದೆ.

ಶೇ.25 ರಷ್ಟು ಸುಧಾರಣೆ
ಅಧಿಕೃತ ಅಂಕಿ ಅಂಶಗಳ ಪ್ರಕಾರ 2016 ರಿಂದ 2019 ರವರೆಗೆ ಕೆಟ್ಟ ಮಾಲಿನ್ಯಕಾರಕಗಳಲ್ಲಿ ಒಂದಾಗಿದ್ದ ಸಣ್ಣ ಪಿಎಂ 2.5 ಕಣಗಳ ಸರಾಸರಿ ಮಟ್ಟವು 25% ಕಡಿಮೆಯಾಗಿದೆ. 2016ರಲ್ಲಿ ಸುಮಾರು ಶೇ.140 ರಷ್ಟು ಪಿಎಂ 2.5 ವಿಷ ಕಣಗಳು ವಾಯುಮಾಲಿನ್ಯಕ್ಕೆ ಕಾರಣವಾಗುತ್ತಿತ್ತು ಆದರೆ ಈ ವರ್ಷ ಇದರ ಪ್ರಮಾಣದಲ್ಲಿ ಶೇ.25ರಷ್ಟು ಇಳಿಕೆಯಾಗಿದೆ.

ಸಂಶೋಧನೆಯ ಪ್ರಮುಖ ಅಂಶಗಳು
– ದಿನನಿತ್ಯ ಹೊರಸೂಸುತ್ತಿದ್ದ ಪಿ.ಎಂ 2.5 ಗರಿಷ್ಠ ಮಟ್ಟ ಕಡಿಮೆಯಾಗಿದೆ.

– ಕಲುಷಿತ ವಾತವಾರಣದ ಸಮಸ್ಯೆಯ ತೀವ್ರತೆ ಸುಧಾರಿಸಿದೆ.

Advertisement

– ಪಿ.ಎಂ 2.5 ಬಿಡುಗಡೆ ಮಾಡುವ ವಾಹನಗಳ ಸಂಖ್ಯೆ ಕಡಿಮೆಯಾಗಿದೆ.

ಯಾಕೆ ಅಪಾಯಕಾರಿ ?
– ಈ ವಿಷಕಣಗಳು ದೇಹದೊಳಗೆ ಸೇರುವುದರಿಂದ ಶ್ವಾಸಕೋಶ ಕ್ಯಾನ್ಸರ್‌ ರೀತಿಯ ಅಪಾಯಕಾರಿ ಕಾಯಿಲೆ ಬರುತ್ತದೆ.

– ಪಿಎಂ 2.5 ವಿಷಕಾರಿ ಕಣಗಳಿಂದ 10ರಲ್ಲಿ 1 ಮಗುವಿಗೆ ಅಸ್ತಮಾ ರೋಗ ಬರುತ್ತದೆ.

– ಈ ಕಣಗಳು ಗಾಳಿಯೊಂದಿಗೆ ಬೆರೆಯುವುದರಿಂದ ಅನಾರೋಗ್ಯದ ಸಮಸ್ಯೆಯ ಮಟ್ಟ ಹೆಚ್ಚುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next