ಮಣಿಪಾಲ: ಪರಿಸರ ಕಾಳಜಿ ಕುರಿತಾಗಿ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿರುವ ಹೊರತಾಗಿಯೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಮಟ್ಟ ಗಂಭೀರ ಸ್ವರೂಪಕ್ಕೆ ತಿರುಗಿರುವುದು ಅಪಾಯದ ಮುನ್ಸೂಚನೆಯೇ? ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು, ಓದುಗರ ಪ್ರತಿಕ್ರಿಯೆ ಇಲ್ಲಿದೆ.
ರಾಜೇಶ್ ಅಂಚನ್: ಖಂಡಿತಾ ಇದು ಅಪಾಯದ ಸೂಚನೆ. ಮಿತಿಮೀರಿದ ವಾಹನ, ಕೈಗಾರಿಕೆಗಳೇ ಈ ಮಾಲೀನ್ಯಕ್ಕೆ ಕಾರಣ. ರಸ್ತೆ, ಕಟ್ಟಡಗಳಿಗಾಗಿ ವಿಪರೀತ ಮಟ್ಟದಲ್ಲಿ ಮರಗಳನ್ನು ಕಡಿದು ಹಾಕುತ್ತಿರೋದು. ಜನಸಂಖ್ಯೆ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಳ್ಳದಿರೋದು ಇಷ್ಟು ಪ್ರಮಾಣದ ಮಾಲೀನ್ಯಕ್ಕೆ ಕಾರಣ.
ಮುನಿರೆಡ್ಡಿ ವಿ ಎನ್: ಖಂಡಿತ, ಅದು ಮಾನವನ ಸ್ವಯಂಕೃತಪರಾಧ, ನೀರು, ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ಪಾಲಿಕೆ, ಸರಕಾರ, ಸಂಘ ಸಂಸ್ಥೆಗಳು ಸತತ ಪ್ರಯತ್ನ ಪಡುತ್ತಿದ್ದರು ಪಾಲಿಸದ ಜನರು ತಮ್ಮನ್ನು ತಾವೇ ವಂಚಿಸಿಕೊಳ್ಳುತ್ತಿದ್ದಾರೆ, ಪ್ರತಿಯೊಂದಕ್ಕೂ ಪಾಲಿಕೆ, ಸರಕಾರಗಳನ್ನು ಟೀಕಿಸುವ ಜನರು ಪರಿಸರಕ್ಕಾಗಿ ಏನನ್ನು ಮಾಡಿದ್ದಾರೆ ? ಎಲ್ಲರಲ್ಲೂ ಅಸಡ್ಡೆ ಏನಾಗುತ್ತೆ ಎಂದು ನಿಶ್ಚಯವಾಗಿ ಅದರ ಪರಿಣಾಮ ಅನುಭವಿಸುತ್ತಾರೆ.
ಪ್ರವೀಣ್ ಆರ್ ಮೂಲ್ಯ: ದೆಹಲಿಯಲ್ಲಿ ನಡೆಯುತ್ತಿರುವ ಈಗಿನ ವಾಯು ಮಾಲಿನ್ಯಕ್ಕೆ ಕೇಜ್ರಿವಾಲ್ ಸರಕಾರ ಪಂಜಾಬ್ ಮತ್ತು ಹರ್ಯಾಣ ರಾಜ್ಯಗಳನ್ನು ದೂರುತ್ತಿದೆ. ಕೈಲಾಗದವ ಮೈಯನ್ನೆಲ್ಲ ಪರಚಿಕೊಂಡ ಎಂಬಂತಾಗಿದೆ. ವಾಯುಮಾಲಿನ್ಯ ತಡೆಗಟ್ಟಲು ಕೇಜ್ರಿವಾಲ್ ದೆಹಲಿಯಲ್ಲಿ ಏನು ಕ್ರಮ ಕೈಗೊಂಡಿದ್ದಾನೆ ಎನ್ನುವುದು ಮುಖ್ಯವಾಗುತ್ತೆ. ಈ ಸರಕಾರ 5 ವರ್ಷದಲ್ಲಿ ಎಷ್ಟು ಗಿಡ ನೆಟ್ಟಿದೆ, ಎಷ್ಟು ಕಾರ್ಖಾನೆಗಳಿಗೆ ಪರಿಸರ ಸ್ನೇಹಿ ಪ್ರಮಾಣಪತ್ರ ಕೊಟ್ಟಿದೆ, ಎಷ್ಟು ಮನೆಗಳಿಗೆ ಸೋಲಾರ್ ನ್ನು ಅಳವಡಿಸಲು ಪ್ರೋತ್ಸಾಹಿಸಿದೆ ಮತ್ತು ಸರಕಾರದಿಂದ ಅಳವಡಿಸಿದೆ, ಎಷ್ಟು ಎಲೆಕ್ಟ್ರಿಕಲ್ ಕಾರು ಉದ್ಯಮವನ್ನು ಉತ್ತೇಜಿಸಿದೆ. ಎಲ್ಲಿಯೂ ಇದರ ಬಗ್ಗೆ ಅಂಕಿ ಅಂಶಗಳು ಕಾಣುತ್ತಿಲ್ಲ. ಇನ್ನೊಬ್ಬರ ಮೇಲೆ ಗೂಬೆ ಕೂರಿಸೋ ಈತ ಚುನಾವಣೆ ಹತ್ತಿರವಾಗಿರುವ ಈ ಸಂದರ್ಭದಲ್ಲಿ ನೀರು ಫ್ರೀ, ಬಸ್ ಪ್ರಯಾಣ ಫ್ರೀ ಮಾಡಿ ಸರಕಾರದ ಹಣವನ್ನೇ ತನ್ನ ಸ್ವಂತ ರಾಜಕೀಯ ಲಾಭಕ್ಕಾಗಿ ಪೋಲು ಮಾಡುತ್ತಿದ್ದಾನೆ.