Advertisement

Polluted Water ಮೃತ ಬಾಲಕಿಯ ಮನೆಗೆ ಸಚಿವ ತಂಗಡಗಿ ಭೇಟಿ

10:54 PM Jun 11, 2023 | Team Udayavani |

ದೋಟಿಹಾಳ: ಸಮೀಪದ ಬಿಜಕಲ್ ಗ್ರಾಮದಲ್ಲಿ ಕಳೆದ ಗುರುವಾರ ಕಲುಷಿತ ನೀರು ಸೇವನೆಯಿಂದ ಹತ್ತು ವರ್ಷದ ಬಾಲಕಿಯ ನಿರ್ಮಲಾ ಈರಪ್ಪ ನಿರಲೂಟಿ ವಾಂತಿ ಭೇಧಿಯಿಂದ ಮೃತಪಟ್ಟ ಬಾಲಕಿಯ ಮನೆಗೆ ರವಿವಾರ ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಅವರು ಭೇಟಿ ನೀಡಿ ಸಾಂತ್ವನ ಹೇಳಿದರು.

Advertisement

ತಾಲ್ಲೂಕಿನ ಬಿಜಕಲ್ ಗ್ರಾಮದಲ್ಲಿ ಇತ್ತೀಚಿಗೆ ಕಲುಷಿತ ನೀರು ಸೇವನೆಯಿಂದ ಮೃತಪಟ್ಟ ಬಾಲಕಿ ನಿರ್ಮಲಾ ನಿರಲೂಟಿ ಮನೆಗೆ ಹಿಂದುಳಿದ ವರ್ಗ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಈ ವೇಳೆ ಸಚಿವ ಶಿವರಾಜ ತಂಗಡಗಿ ಅವರು ಕುಟುಂಬಸ್ಥರೊಡನೆ ಮಾತನಾಡಿ ಧೈರ್ಯ ತುಂಬುವ ಕೆಲಸವನ್ನು ಮಾಡಿದರು. ಈ ವೇಳೆ ಮೃತಪಟ್ಟ ಬಾಲಕಿಯ ತಂದೆ ಈರಪ್ಪ ನಿರಲೂಟಿ ಅವರು ಮಾತನಾಡಿ, ನಾವು ಬಡವರು, ದುಡಿಯಲು ನಗರಕ್ಕೆ ಹೋದಾಗ ಈ ಘಟನೆ ನಡೆದ್ದಿದೆ. ನನ್ನ ಮಗಳ ಸಾವಿಗೆ ಮೂಲ ಕಾರಣವಾಗಿದ್ದು ಜೆಜೆಎಮ್ ಕಾಮಗಾರಿಯ.!! ಅವರು ಗ್ರಾಮದಲ್ಲಿ ಹಾಕಿರುವ ಪೈಪ್‌ಲೈನ್ ಕಾಮಗಾರಿ ಕಳೆಪ ಕಾಮಗಾರಿ ಮಾಡಿದು. ಇವರ ಕಲುಷಿತ ನೀರು ಕುಡಿದು ಸಾವನ್ನಪ್ಪಿದ್ದಾಳೆ ನನಗೆ ಆದ ಅನ್ಯಾಯವು ಬೇರೆ ಯಾರಿಗೂ ಆಗುವುದು ಬೇಡ..! ಇಂತಹ ಪ್ರಕರಣ ಮತ್ತೊಂದು ಗ್ರಾಮದಲ್ಲಿ ಆಗುವ ಮೊದಲು ಈ ಜೆಜೆಎಮ್ ಕಾಮಗಾರಿ ನಡೆಸುತ್ತಿರುವ ಅಧಿಕಾರಿಗಳ ಮತ್ತು ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಕಠಿಣ ಶಿಕ್ಷೆ ನೀಡಿ ಎಂದು ಪಾಲಕರು ಕಣ್ಣೀರು ಹಾಕಿದರು.

ಶಾಲೆಗಳು ಆರಂಭವಾದ ಕಾರಣ ಶಾಲೆಗೆ ಹೊಗಲು ಸಂಬಂಧಿಕರ ಮನೆಗೆ ಬಂದ್ದಿದಾಳೆ. 2-3 ದಿನಗಳ ಕಾಲ ಶಾಲೆಗೆ ಹೋಗಿ ಬಂದಿದ್ದಾಳೆ. ಆದರೆ ಬುಧವಾರ ರಾತ್ರಿ ವಾಂತಿ ಭೇದಿ ಹೆಚ್ಚಾಗಿ ಇವಳ ಸಾವಿಗೆ ಕಾರಣವಾಗಿದೆ ಎಂದು ಸಚಿವರಿಗೆ ಮತ್ತು ಶಾಸಕರಿಗೆ ಪಾಲಕರು ಮಾಹಿತಿ ನೀಡಿದರು.
ಇದೇ ವೇಳೆ ಗ್ರಾಮಸ್ಥರು ಮಾತನಾಡಿ, ನಮ್ಮ ಗ್ರಾಮದಲ್ಲಿ ಜೆಜೆಎಮ್ ಅವರು ಕಳಪೆ ಕಾಮಗಾರಿಯನ್ನು ಮಾಡಿದ್ದಾರೆ. ಕಾಮಗಾರಿಯ ಪೈಪುಗಳನ್ನು ನೆಲದ ಮೇಲ್ಭಾಗದಲ್ಲಿ ಹಾಕಿದ್ದಾರೆ. ಇದರ ಮೇಲೆ ವಾಹನಗಳು ಅಡ್ಡಾಡುತ್ತಿರುವಾಗ ಪೈಪುಗಳು ಹೊಡೆಯುತ್ತಿವೆ. ಹೀಗಾಗಿ ಕಳಪೆ ಕಾಮಗಾರಿ ಮಾಡಿದ ಜೆಜೆಎಮ್ ಅಧಿಕಾರಿಗಳು ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ. ಇಷ್ಟೇಲಾ ಸಮಸ್ಯೆಗೆ ಮುಖ್ಯವಾಗಿ ಜೆಜಿಎಂ ಕಾಮಗಾರಿಯೇ ಇದಕ್ಕೆ ಕಾರಣವಾಗಿದೆ ಇವರು ವಿರುದ್ದ ಕಠಿಣ ಕ್ರಮಕೈಗೊಳ್ಳಿ ಎಂದು ಗ್ರಾಮಸ್ಥರು ಸಚಿವರಿಗೆ ತಿಳಿಸಿದರು.

ಇದೇ ವೇಳೆ ಜಿಲ್ಲಾಧಿಕಾರಿ ಸುಂದರೇಶ ಬಾಬು, ಸಿಇಓ ರಾಹುಲ್ ರತ್ನಮ್ ಪಾಂಡೆ, ಡಿಹೆಚ್‌ಓ. ಡಾ.ಅಲಕಾನಂದ ಮಳಗಿ, ತಾಪಂ ಇಒ ಶಿವಪ್ಪ ಸುಭೆದಾರ, ಪಿಡಿಓ ನಾಗೇಶ ಅವರಿಗೆ ಈ ಪ್ರಕರಣದ ಬಗ್ಗೆ ಸಮಗ್ರ ವರದಿಯನ್ನು ನೀಡುವಂತೆ ಸೂಚಿಸಿದರು.

Advertisement

ಈ ವೇಳೆ ಶಾಸಕ ದೊಡ್ಡನಗೌಡ ಪಾಟೀಲ, ಮಾಜಿ ಜಿಪಂ ಅಧ್ಯಕ್ಷ ರಾಜಶೇಖರ ಹಿಟ್ನಾಳ, ಮಾಜಿ ಜಿಪಂ ಸದಸ್ಯ ಕೆ.ಮಹೇಶ, ಮಾಲತಿ ನಾಯಕ, ಸೇರಿದಂತೆ ಇತರರು ಇದ್ದರು.

ಹೀಗಾಗಲೇ ಜೆಜೆಎಮ್ ಕಾಮಗಾರಿಗಳ ಬಗ್ಗೆ ಗ್ರಾಮದಲ್ಲಿ ಸಂಚರಿಸಿ ಪರಿಶೀಲನೆ ಮಾಡಿದೇನೆ. ಈ ವೇಳೆ ಕಾಮಗಾರಿ ಮೇಲ್ನೋಟಕ್ಕೆ ಕಳಪೆ ಕಾಮಗಾರಿ ಆಗಿರುವುದು ಕಂಡುಬಂದಿದ್ದು ಅವರಿಗೆ ನೋಟಿಸ್ ನೀಡಿದ್ದೇನೆ ಎಂದು ಸಚಿವರಿಗೆ ಸಿಇಓ ರಾಹುಲ್ ರತ್ನಮ್ ಪಾಂಡೆ ಅವರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next