Advertisement

ಮತದಾನಕ್ಕೆ ಸಿಂಗಾರಗೊಂಡ ಮತಗಟ್ಟೆ ಕೇಂದ್ರಗಳು!

03:21 PM May 09, 2023 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲಾದ್ಯಂತ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೇ 10 ರಂದು ಬುಧವಾರ ನಡೆಯಲಿರುವ ಮತದಾನ ಪ್ರಮಾಣ ಹೆಚ್ಚಿಸಲು ಮತದಾರರನ್ನು ಆಕರ್ಷಿ ಸಲು ಜಿಲ್ಲಾದ್ಯಂತ ಬರೋಬರಿ 50 ಮತಗಟ್ಟೆ ಕೇಂದ್ರಗಳನ್ನು ವಿವಿಧ ಮಾದರಿಗಳಲ್ಲಿ ಸಿಂಗಾರಗೊಳಿಸಿದ್ದು, ಅಲಂಕೃತ ಮತಗಟ್ಟೆಗಳು ಮತದಾರರನ್ನು ಕೈ ಬೀಸಿ ಕರೆಯುತ್ತಿವೆ.

Advertisement

ಜಿಲ್ಲೆಯ 5 ಕ್ಷೇತ್ರಗಳಲ್ಲಿ ಪ್ರತಿ ಕ್ಷೇತ್ರಕ್ಕೆ ತಲಾ 2 ರಂತೆ ಸಖೀ ಮತಗಳನ್ನು ಸ್ಥಾಪಿಸಿ ಸಂಪೂರ್ಣ ಮಹಿಳಾ ಅಧಿಕಾರಿಗಳನ್ನೇ ಆ ಮತಗಟ್ಟೆಗಳಿಗೆ ನೇಮಕ ಮಾಡಿದ್ದು, ಸಖಿ ಮತಗಟ್ಟೆಗಳನ್ನು ನಾವೀನ್ಯ ಪೂರ್ಣ ವಾಗಿ ಸಜ್ಜುಗೊಳಿಸಲಾಗಿದೆ. ಅಲ್ಲದೇ ಪ್ರತಿ ಕ್ಷೇತ್ರಕ್ಕೆ ತಲಾ ಒಂದರಂತೆ 5 ವಿಕಲಚೇತನ ಮತಗಟ್ಟೆ ಸ್ಥಾಪಿಸಲಾಗಿದೆ.

ಗ್ರಾಪಂ ಹಾಗೂ ಸ್ಥಳೀಯ ಗ್ರಾಪಂಗಳ ಸಹಕಾರೊಂದಿಗೆ ಮಹಿಳೆಯರು ಮತ್ತು ಯುವಕರನ್ನು ಮತದಾನ ಮಾಡಲು ಆಕರ್ಷಿಸಲು ಮತಗಟ್ಟೆ ಕೇಂದ್ರಗಳನ್ನು ವಿಶೇಷ ಕಾಳಜಿ ಅನೇಕ ಮತಗಟ್ಟೆ ಕೇಂದ್ರಗಳಿಗೆ ಹೊಸ ರೂಪ ನೀಡಿದ್ದು, ಶೃಂಗಾರಗೊಂಡಿರುವ ಮತಗಟ್ಟೆ ಕೇಂದ್ರಗಳು ಯುವಕರನ್ನು ಮತ್ತು ಮಹಿಳಾ ಮತದಾರರನ್ನು ಆಕರ್ಷಿಸುತ್ತಿವೆ. ಮತಗಟ್ಟೆಗಳಿಗೆ ಸುಲಭವಾಗಿ ವಿಕಲಚೇತನರು ನಡೆದುಕೊಂಡು ಬರಲು ಅನುಕೂಲ ಕಲ್ಪಿಸುವ ಸಲುವಾಗಿ ತ್ರಿಚಕ್ರ ಸೈಕಲ್‌ಗ‌ಳ ಜೊತೆಗೆ ವೀಲ್‌ ಚೇರ್‌ ವ್ಯವಸ್ಥೆಗಳನ್ನು ಸಹ ಒದಗಿಸಲಾಗಿದೆ.

ನೆರಳಿನ ವ್ಯವಸ್ಥೆ: ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಬೇಸಿಗೆ ಇರುವ ಕಾರಣದಿಂದ ಮತದಾನಕ್ಕೆ ಬರುವ ಮತದಾರರಿಗೆ ಜಿಲ್ಲಾಡಳಿತವೇ ನೆರಳಿನ ವ್ಯವಸ್ಥೆ ಮಾಡುತ್ತಿದೆ. ಮತಗಟ್ಟೆಗಳ ಹೊರಗೆ ಶಾಮಿಯಾನ ಜೊತೆಗೆ ತೆಂಗಿನ ಗರಿಗಳನ್ನು ಬಳಸಿ ಸಂಪ್ರದಾಯಕವಾದ ಚಪ್ಪರ ಹಾಕುವಂತೆ ಸೂಚಿಸಲಾಗಿದೆ. ಮತಗಟ್ಟೆ ಕೇಂದ್ರಗಳ ಬಳಿ ಇರುವ ಶಾಲಾ ಕೊಠಡಿಗಳನ್ನು ನೆರಳಿಗಾಗಿ ಬಳಸಿಕೊಳ್ಳುವಂತೆ ಸೂಚಿಸಲಾಗಿದೆ.

ಜಿಲ್ಲೆಯಲ್ಲಿ 1281 ಮತಗಟ್ಟೆಗಳು: ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 1,281 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ವಿಶೇಷವಾಗಿ ಅವುಗಳಲ್ಲಿ 1040 ಸ್ಥಳಗಳಲ್ಲಿ ಇವೆ. ಗೌರಿಬಿದನೂರಲ್ಲಿ 259, ಬಾಗೇಪಲ್ಲಿ 263, ಚಿಕ್ಕಬಳ್ಳಾಪುರದಲ್ಲಿ 252, ಶಿಡ್ಲಘಟ್ಟದಲ್ಲಿ 242, ಚಿಂತಾಮಣಿಯಲ್ಲಿ 265 ಮತಗಟ್ಟೆ ಸ್ಥಾಪಿಸಲಾಗಿದೆ. ಇವುಗಳಲ್ಲಿ ತಲಾ 5 ಸಖೀ, 5 ವಿಕಲಚೇತನರ ಮತಗಟ್ಟೆ, 5 ಯುವಕ, ನೌಕರರ ಕಾರ್ಯನಿರ್ವಹಿಸುವ ಮತಗಟ್ಟೆಗಳು, ಸಾಂಪ್ರದಾಯಿಕ 5 ಹಾಗೂ ಥೀಮ್‌ ಮತಗಟ್ಟೆಗಳು 5 ಸೇರಿ ಒಟ್ಟು 50 ಮತಗಟ್ಟೆಗಳು ಕಾರ್ಯನಿರ್ವಹಿಸಲಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next