Advertisement

RSS, BJP ಮಾಸ್ಟರ್ ಪ್ಲ್ಯಾನ್; ರಜನಿಕಾಂತ್ ರಾಜಕೀಯಕ್ಕೆ ಎಂಟ್ರಿ?

05:07 PM Feb 10, 2017 | Sharanya Alva |

ಚೆನ್ನೈ: ತಮಿಳುನಾಡಿನಲ್ಲಿ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಹಾಗೂ ಹಂಗಾಮಿ ಸಿಎಂ ಓ ಪನ್ನೀರ್ ಸೆಲ್ವಂ ನಡುವಿನ ಅಧಿಕಾರದ ಗದ್ದುಗೆ ಏರುವ ಹಾವು ಏಣಿ ಆಟ ಮುಂದುವರಿದಿರುವ ನಡುವೆಯೇ ಸೂಪರ್ ಸ್ಟಾರ್ ರಜನಿಕಾಂತ್ ಅವರು ಸ್ವಂತ ಪಕ್ಷವೊಂದನ್ನು ಸ್ಥಾಪಿಸುವ ಚಿಂತನೆ ನಡೆಸುತ್ತಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

Advertisement

ಇತ್ತೀಚೆಗೆ ನಡೆದ ಪುಸ್ತಕ ಬಿಡುಗಡೆ ಸಮಾರಂಭದ ವೇಳೆ ಆರ್ ಎಸ್ ಎಸ್ ಚಿಂತಕ ಗುರುಮೂರ್ತಿ ಅವರು 66 ರಜನಿಕಾಂತ್ ಒಂದು ವೇಳೆ ರಾಜಕೀಯಕ್ಕೆ ಬಂದರೆ ಹೊಸ ಪಕ್ಷ ಕಟ್ಟುವ ಸಲಹೆ ನೀಡಿರುವುದಾಗಿ ವರದಿ ವಿವರಿಸಿದೆ.

ಮಾಹಿತಿ ಪ್ರಕಾರ, ಜನಪ್ರಿಯ ನಟನ ರಾಜಕೀಯ ಪ್ರವೇಶದ ಮೂಲಕ ಬಿಜೆಪಿ ತಮಿಳುನಾಡಿನಲ್ಲಿ ಬೇರೂರುವ ನಿಟ್ಟಿನಲ್ಲಿ ಗುರುಮೂರ್ತಿ ಅವರು ಈ ಪ್ರಸ್ತಾಪವನ್ನು ಇಟ್ಟಿರುವುದಾಗಿ ಹೇಳಿದೆ.

ಏತನ್ಮಧ್ಯೆ ತಮ್ಮ ಬಹುಕಾಲದ ಗೆಳೆಯ ರಜನಿಕಾಂತ್ ಸಕ್ರಿಯ ರಾಜಕಾರಣಕ್ಕೆ ಬರಬಾರದು ಎಂದು ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಈ ಸಂದರ್ಭದಲ್ಲಿ ಸಲಹೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next