Advertisement

Politics: ನನ್ನ ಜತೆ ಇದ್ದವರೇ ಬೆನ್ನಿಗೆ ಚೂರಿ ಹಾಕಿದರು- ಬಿ.ಕೆ. ಹರಿಪ್ರಸಾದ್‌

11:25 PM Dec 05, 2023 | Team Udayavani |

ಬೆಳಗಾವಿ: ನನ್ನ 49 ವರ್ಷಗಳ ರಾಜಕೀಯ ಜೀವನದಲ್ಲಿ ನನಗೆ ವಿಪಕ್ಷಗಳಿಂದ ಯಾವುದೇ ತೊಂದರೆಯಾಗಿಲ್ಲ. ಬದಲಿಗೆ ನನ್ನ ಜತೆ ಇದ್ದವರೇ ಜತೆಯಲ್ಲಿದ್ದುಕೊಂಡೇ ಬೆನ್ನಿಗೆ ಚೂರಿ ಹಾಕಿದರು ಎಂದು ಕಾಂಗ್ರೆಸ್‌ ಮುಖಂಡ ಬಿ.ಕೆ. ಹರಿಪ್ರಸಾದ್‌ ಅಳಲು ತೋಡಿಕೊಂಡ ಪ್ರಸಂಗ ವಿಧಾನ ಪರಿಷತ್‌ನಲ್ಲಿ ಮಂಗಳವಾರ ನಡೆಯಿತು.

Advertisement

ವಿಪಕ್ಷ ನಾಯಕರಾಗಿದ್ದಾಗ ಮಾಡಬೇಕಿದ್ದ ವಿದಾಯ ಭಾಷಣಕ್ಕೆ ಮಂಗಳವಾರ ಸಭಾಪತಿ ಬಸವರಾಜ ಹೊರಟ್ಟಿ ಅವರು ನೀಡಿದ ಅನುಮತಿ ಮೇರೆಗೆ ಮಾತನಾಡಿದ ಅವರು, ರಾಜಕೀಯದಲ್ಲಿ ಏಳು ಬೀಳು ಸಾಮಾನ್ಯ. ಆದರೆ ನನ್ನ ವಿಚಾರದಲ್ಲಿ ವಿಪಕ್ಷ ಬಿಜೆಪಿ ಅಥವಾ ಜೆಡಿಎಸ್‌ನಿಂದ ಯಾವುದೇ ತೊಂದರೆಯಾಗಲಿಲ್ಲ. ನನ್ನ ಮೇಲೆ ಯಾವುದೇ ಇಡಿ, ಐಟಿ ದಾಳಿ ನಡೆಯಲಿಲ್ಲ. ಆದರೆ ನನ್ನ ಜತೆಗೆ ಇದ್ದವರೇ ನನ್ನ ಬೆನ್ನಿಗೆ ಚೂರಿ ಹಾಕಿದರು ಎಂದು ಹೇಳಿದರು.

ರಾಜಕೀಯವಾಗಿ ಮಾತ್ರ ನಾನು ಇಲ್ಲಿ ಟೀಕೆಗಳನ್ನು ಮಾಡಿಕೊಂಡು ಬಂದಿದ್ದೇನೆ ಹೊರತು ವೈಯಕ್ತಿಕವಾಗಿ ಯಾರೊಂದಿಗೂ ಶತೃತ್ವ ಹೊಂದಿಲ್ಲ. ನನಗೆ ವಿಪಕ್ಷ ನಾಯಕನಾಗಿ ಎರಡೂವರೆ ವರ್ಷ ಕೆಲಸ ಮಾಡಲು ಅವಕಾಶ ಕೊಟ್ಟ ಎಲ್ಲ ಪಕ್ಷಗಳ ಸದಸ್ಯರಿಗೂ ನಾನು ಚಿರ ಋಣಿಯಾಗಿದ್ದಾನೆ ಎಂದರು.

ಕೂಡಲೇ ಮಧ್ಯ ಪ್ರವೇಶಿಸಿದ ಬಿಜೆಪಿಯ ಭಾರತಿ ಶೆಟ್ಟಿ, ರವಿಕುಮಾರ್‌ ಮತ್ತು ತೇಜಸ್ವಿನಿ ರಮೇಶ್‌ ಅವರು, ಬಿ.ಕೆ. ಹರಿಪ್ರಸಾದ್‌ ಅವರೆ ನಿಮ್ಮಂತ ಪಕ್ಷ ಸಂಘಟಕರಿಗೆ ಕಾಂಗ್ರೆಸ್‌ನಲ್ಲಿ ಇಂತಹ ಸ್ಥಿತಿ ಬಂದಿರುವುದು ದುರದೃಷ್ಟಕರ ಎಂದು ಕಾಲೆಳೆದರು. ಜತೆಗೆ ಜೆಡಿಎಸ್‌ನ ಟಿ.ಎ. ಶರವಣ ಕೂಡ, ನೀವು ಮುಂದಿನ ಸಾಲಿನ ನಾಯಕರಾಗಬೇಕಿತ್ತು. ಇನ್ನು ಹಿಂದಿನ ಸಾಲಿನಲ್ಲಿಯೇ ನಿಂತಿದ್ದು ನೋಡಿದರೆ ನಮಗೆ ಬೇಸರವಾಗುತ್ತದೆ ಎಂದು ಕುಟುಕಿದರು.

Advertisement

Udayavani is now on Telegram. Click here to join our channel and stay updated with the latest news.

Next