Advertisement

Politics: ಎಸ್‌.ಟಿ.ಸೋಮಶೇಖರ್‌ ಪಕ್ಷಾಂತರ ಇನ್ನೂ ಸಸ್ಪೆನ್ಸ್‌

09:23 PM Aug 24, 2023 | Team Udayavani |

ಬೆಂಗಳೂರು: ಕಾಂಗ್ರೆಸ್‌ಗೆ ಮರು ವಲಸೆ ವಿಚಾರದಲ್ಲಿ ಬಿಜೆಪಿ ಶಾಸಕ ಎಸ್‌.ಟಿ.ಸೋಮಶೇಖರ್‌ ಇನ್ನೂ ಸಸ್ಪೆನ್ಸ್‌ ಬಾಕಿ ಉಳಿಸಿದ್ದು, “ನಾನು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ನನ್ನ

Advertisement

ಮಗನೂ ರಾಜಕೀಯಕ್ಕೆ ಬರುವುದಿಲ್ಲ’ ಎಂದು ಹೇಳಿದ್ದಾರೆ.
ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ನನ್ನ ಮೇಲೆ ಏಕಿಷ್ಟು ಸಂಶಯ ಪಡುತ್ತೀರಿ? ನಾನು ಶಿವರಾಮ ಹೆಬ್ಟಾರ್‌ ಅವರನ್ನು ಹಲವು ದಿನಗಳ ಬಳಿಕ ಇಂದು ಭೇಟಿ ಮಾಡುತ್ತಿದ್ದೇನೆ. ಡಿ.ಕೆ.ಶಿವಕುಮಾರ್‌ ನನ್ನ ಕ್ಷೇತ್ರಕ್ಕೆ ಮಾತ್ರವಲ್ಲ, ಬಿಜೆಪಿಯ ಹಲವು ಶಾಸಕರ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ನಾನು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಉದ್ದೇಶ ಹೊಂದಿಲ್ಲ. ಆ ರೀತಿಯಾದಾಗ ನೀವೇ ಬಂದು ಪ್ರಶ್ನೆ ಮಾಡಿ ಎಂದು ತಿಳಿಸಿದರು.

ದೆಹಲಿಗೆ ಬರುವಂತೆ ನನಗೆ ಇದುವರೆಗೆ ಕರೆ ಬಂದಿಲ್ಲ. ನಾನು ಕಾಯುತ್ತಾ ಇದ್ದೇನೆ. ಸಂದೇಶ ಬಂದರೆ ನಾಳೆಯೇ ಹೋಗುತ್ತೇನೆ. ನಾನು ಕೇಂದ್ರ ಗೃಹ ಸಚಿವ ಅಮಿತ್‌ ಷಾ ಜತೆಗೆ ಚೆನ್ನಾಗಿದ್ದೇನೆಂದು ಯಾರೂ ಟಾರ್ಗೆಟ್‌ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.

ನಕಲಿ ಬಿಲ್‌ ಮಾಡಿದವರನ್ನು ಸೆಳೆಯುವುದಕ್ಕೆ ಕಾಂಗ್ರೆಸ್‌ ಪ್ರಯತ್ನಿಸುತ್ತಿದೆ ಎಂಬ ಎಚ್‌.ಡಿ.ಕುಮಾರಸ್ವಾಮಿ ಆರೋಪಕ್ಕೆ ಉತ್ತರಿಸಿ, ಕ್ಷೇತ್ರದ ಜನ ನಾಲ್ಕು ಬಾರಿ ನನ್ನನ್ನು ಆಯ್ಕೆ ಮಾಡಿದ್ದಾರೆ. ಆದರೆ ಜೆಡಿಎಸ್‌ ಅಭ್ಯರ್ಥಿ ನಾಲ್ಕು ಬಾರಿ ಸೋತಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್‌ ಎಲ್ಲ ಕ್ಷೇತ್ರಕ್ಕೂ ಅನ್ವಯವಾಗುವಂತೆ ಎಸ್‌ಐಟಿ ರಚನೆ ಮಾಡಿದ್ದಾರೆ. ನಮ್ಮ ಕ್ಷೇತ್ರದಲ್ಲೂ ತನಿಖೆ ನಡೆಯುತ್ತಿದೆ ಎಂದು ಹೇಳಿದರು.

ಈಗಲೇ ಸಂಶಯ ಏಕೆ ? : ಹೆಬ್ಟಾರ್‌
ಕ್ಷೇತ್ರದಲ್ಲಿ ನನ್ನ ವಿರುದ್ಧ ಇದ್ದವರ ಮೇಲೆ ತೆಗೆದುಕೊಂಡ ಶಿಸ್ತು ಕ್ರಮವನ್ನು ಬೆಂಗಳೂರಿಗೆ ಬಂದು ಗಮನಿಸಿದ್ದೇನೆ. ನನ್ನ ಬಗ್ಗೆ ಈಗಲೇ ಅನುಮಾನ ಪಡುವುದೇಕೆ? ಎಂದು ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ ಹೆಬ್ಟಾರ್‌ ಪ್ರಶ್ನಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಂಗ್ರೆಸ್‌ಗೆ ಬರುವಂತೆ ಆಹ್ವಾನ ಮಾಡುತ್ತಾರೆ. ಕೆಲವರು ಅಪೇಕ್ಷೆ ಪಡುತ್ತಾರೆ. ಬೆಂಬಲಿಗರು ಅವರ ಅಭಿಪ್ರಾಯವನ್ನೂ ಹೇಳುತ್ತಾರೆ. ಆದರೆ ಯಾವ ನಿಲುವನ್ನು ಯಾವಾಗ ತೆಗೆದುಕೊಳ್ಳಬೇಕೆಂದು ನಮಗೆ ಗೊತ್ತಿದೆ ಎಂದು ಒಗಟಾಗಿ ಉತ್ತರಿಸಿದ್ದಾರೆ.

Advertisement

ನಾವು ಆಪರೇಷನ್‌ ಹಸ್ತ ಮಾಡುತ್ತಿಲ್ಲ: ಡಿಕೆ ಶಿ
ಮೈಸೂರು: ನಾವು ಆಪರೇಷನ್‌ ಹಸ್ತ ಮಾಡುತ್ತಿಲ್ಲ. ಅವರಾಗಿಯೇ ಪಕ್ಷಕ್ಕೆ ಬರುತ್ತೇವೆ ಎನ್ನುತ್ತಿ¨ªಾರೆ. ಬರುವವರಿಗೆ ಸ್ವಾಗತ ಕೋರುತ್ತಿದ್ದೇವೆ. ನಾವಾಗಿ ನಾವೇ ಯಾರನ್ನೂ ಪಕ್ಷಕ್ಕೆ ಕರೆತರುವ ಪ್ರಯತ್ನ ಮಾಡುತ್ತಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೆಲ ವರು ತಮ್ಮ ಭವಿಷ್ಯದ ದೃಷ್ಟಿಯಿಂದ ನಮ್ಮ ಪಕ್ಷದ ವರ್ಚಸ್ಸು ನೋಡಿ ಅವರೇ ನಿರ್ಧಾರ ಮಾಡುತ್ತಿ¨ªಾರೆ. ಎಷ್ಟು ಜನ ಬರುತ್ತಾರೆ ಎಂದು ಈಗಲೇ ನಾನು ಹೇಳಲು ಸಾಧ್ಯವಿಲ್ಲ. ಎಲ್ಲದಕ್ಕೂ ಕಾಲ, ಸಮಯ, ಘಳಿಗೆ ಎಂಬುದು ಇರುತ್ತದೆ. ಆ ಘಳಿಗೆ ಬಂದಾಗ ಎಲ್ಲವೂ ನಡೆಯುತ್ತದೆ ಎಂದರು. ಜೆಡಿಎಸ್‌ ಶಾಸಕರನ್ನು ಕಾಂಗ್ರೆಸ್‌ ಸೆಳೆಯುವ ಪ್ರಯತ್ನ ಮಾಡಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇಂತಹ ಮಾತುಗಳನ್ನು ನಾನು ಹೇಳುತ್ತಾ ಹೋದರೆ ಅದು ಬಹಳ ದೊಡ್ಡದಾಗುತ್ತದೆ. ಈಗ ಅದರ ಬಗ್ಗೆ ಚರ್ಚೆ ಬೇಡ ಎಂದರು.

ಕಾಂಗ್ರೆಸ್‌ ಬಿಡುವವರು ದಡ್ಡರು: ರಾಜಣ್ಣ
ಬಾಗಲಕೋಟೆ: ಕಾಂಗ್ರೆಸ್‌ನಿಂದ ಯಾರೂ ಬೇರೆ ಪಕ್ಷಕ್ಕೆ ಹೋಗುವುದಿಲ್ಲ. ಹಾಗೆ ಹೋಗುತ್ತೇನೆ ಎಂದು ಹೇಳುವವರು ದಡ್ಡರು. ಯಾರನ್ನೂ ಹಿಡಿದಿಟ್ಟುಕೊಳ್ಳುವ ಅವಶ್ಯಕತೆ ಇಲ್ಲ. ಅಧಿಕಾರ ಇಲ್ಲದೇ ಇದ್ದಾಗ ಪಕ್ಷದಲ್ಲಿದ್ದು, ಅಧಿಕಾರ ಇದ್ದಾಗ ಯಾರಾದರೂ ಪಕ್ಷ ಬಿಟ್ಟು ಹೋಗಲ್ಲ ಎಂದು ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಬೈ ಗೆಳೆಯರು ಕಾಂಗ್ರೆಸ್‌ಗೆ ಬರುವ ಕುರಿತು ಪಕ್ಷದ ಹಿರಿಯರು ನಿರ್ಧಾರ ಕೈಗೊಳ್ಳುತ್ತಾರೆ. ಅವರು ಬರುವುದರಿಂದ ನಮ್ಮಲ್ಲಿ ಇರುವವರು ಹೊರಗೆ ಹೋಗಬಾರದು. ನಮ್ಮಲ್ಲಿ ಇರುವವರನ್ನು ಇಲ್ಲಿಯೇ ಉಳಿಸಿಕೊಂಡು, ಯಾರು ಬೇಕಾದರೂ ಬರಲಿ. ನಾವು ಯಾರನ್ನೋ ಪಕ್ಷಕ್ಕೆ ಸೇರಿಸಿಕೊಂಡು ನಮ್ಮಲ್ಲಿ ಇರುವ ನಿಷ್ಠಾವಂತರನ್ನು ಕಳೆದುಕೊಳ್ಳಲು ಸಿದ್ಧರಿಲ್ಲ. ಯಾರೇ ಪಕ್ಷ ಸೇರಬೇಕಾದರೂ ಸ್ಥಳೀಯವಾಗಿ ಯಾವ ಅಭಿಪ್ರಾಯ ಇದೆ ಎಂಬುದನ್ನು ಪರಿಗಣಿಸಿ, ಮುಂದಿನ ತೀರ್ಮಾನವನ್ನು ಹೈಕಮಾಂಡ್‌ ಕೈಗೊಳ್ಳುತ್ತದೆ ಎಂದರು. ಬಿಜೆಪಿಯಲ್ಲಿರುವ ಎಸ್‌.ಟಿ. ಸೋಮಶೇಖರ, ಶಿವರಾಂ ಹೆಬ್ಟಾರ ಕಾಂಗ್ರೆಸ್‌ಗೆ ಬರುತ್ತಾರೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಪಕ್ಷಕ್ಕೆ ಬರುವವರನ್ನು ಬೇಡ ಅಂತ ಹೇಳ್ಳೋದಿಲ್ಲ. ಹೋಗುವವರನ್ನು ಬೇಡ ಅನ್ನಲೂ ಆಗಲ್ಲ. ರಾಜಕೀಯದಲ್ಲಿ ಇದೆಲ್ಲ ಇರುತ್ತದೆ ಎಂದರು.

ಇದು ಆಪರೇಷನ್‌ ಕಾಂಗ್ರೆಸ್‌ ಅಲ್ಲ : ಎಂಬಿಪಿ
ವಿಜಯಪುರ: ಬಿಜೆಪಿಯಲ್ಲಿ ಉಸಿರುಗಟ್ಟಿಸುವ ವಾತಾವರಣದಿಂದ ಬೇಸತ್ತು ಕೆಲವು ನಾಯಕರು ಸ್ವಯಂ ಪ್ರೇರಿತರಾಗಿ, ಷರತ್ತು ರಹಿತವಾಗಿ ಕಾಂಗ್ರೆಸ್‌ ಸೇರ್ಪಡೆಗೆ ಆಸಕ್ತಿ ತೋರುತ್ತಿದ್ದಾರೆ. ಇದನ್ನು ಸ್ವಾಗತಿಸುತ್ತೇನೆ. ಆದರೆ ಇದು ಆಪರೇಷನ್‌ ಕಾಂಗ್ರೆಸ್‌ ಅಲ್ಲ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿ, ಕಾಂಗ್ರೆಸ್‌ ಸಿದ್ಧಾಂತಗಳನ್ನು ನಂಬಿ, ಯಾವುದೇ ಷರತ್ತು ಹಾಕದೇ ಪಕ್ಷಕ್ಕೆ ಬಂದರೆ ಸ್ವಾಗತಿಸುತ್ತೇವೆ. ಕಾಂಗ್ರೆಸ್‌ ಹೈಕಮಾಂಡ್‌ ಸ್ಥಳೀಯ ಕಾರ್ಯಕರ್ತರ ಹಿತವನ್ನು ಗಮನದಲ್ಲಿಟ್ಟುಕೊಂಡು ಅವರ ಅಭಿಪ್ರಾಯ ಪಡೆದ ಮೇಲೆ ಸೂಕ್ತ ನಿರ್ಧಾರ ಕೈಗೊಳ್ಳುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next